ETV Bharat / international

Russia-Ukraine war: ಯುದ್ಧ ನಿಲ್ಲುವ ಲಕ್ಷಣಗಳೇ ಇಲ್ಲ.. ಜನರ ಸುರಕ್ಷತೆಗೆ ಕಾರಿಡಾರ್​ ನಿರ್ಮಿಸಿದ ಉಕ್ರೇನ್​

author img

By

Published : Mar 11, 2022, 8:14 AM IST

Updated : Mar 11, 2022, 9:36 AM IST

ಎರಡು ದಿನಗಳಲ್ಲಿ ಉಕ್ರೇನ್ ನಗರಗಳಿಂದ ಸುಮಾರು ಒಂದು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

people evacuated from Ukraine cities in two days  President Volodymyr Zelensky news  Russia Ukraine war  war continue in Russia and Ukraine  ಜನರ ಸುರಕ್ಷತೆಗೆ ಕಾರಿಡಾರ್​ ನಿರ್ಮಿಸಿದ ಉಕ್ರೇನ್  ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸುದ್ದಿ  ರಷ್ಯಾ ಉಕ್ರೇನ್​ ಯುದ್ಧ  ರಷ್ಯಾ ಮತ್ತು ಉಕ್ರೇನ್​ ಮಧ್ಯೆ ಮುಂದುವರಿದ ಯುದ್ಧ
ತನ್ನ ಜನರ ಸುರಕ್ಷತೆಗೆ ಕಾರಿಡಾರ್​ ನಿರ್ಮಿಸಿದ ಉಕ್ರೇನ್​

ಕೀವ್​(ಉಕ್ರೇನ್‌): ರಷ್ಯಾ ಮತ್ತು ಉಕ್ರೇನ್​ ಮಧ್ಯೆ ಯುದ್ಧ ಶುರುವಾಗಿ ಇಂದಿಗೆ 16 ದಿನಕ್ಕೆ ಕಾಲಿಟ್ಟಿದೆ. ಆದರೂ ಸಹಾ ಎರಡು ರಾಷ್ಟ್ರಗಳು ಯುದ್ಧ ನಿಲ್ಲಿಸುವ ನಿರ್ಧಾರಕ್ಕೆ ಬರುತ್ತಿಲ್ಲ. ಆದರೆ, ಯುದ್ಧದಿಂದಾಗಿ ಎಷ್ಟೋ ಜನರು ವಸತಿ ಕಳೆದುಕೊಂಡಿದ್ದಾರೆ. ಮಕ್ಕಳು ಅನಾಥವಾಗುತ್ತಿವೆ. ಆಹಾರ - ನೀರು ಇಲ್ಲದೇ ಲಕ್ಷಾಂತರ ಜನ ನರಳಾಡುತ್ತಿದ್ದಾರೆ. ಇನ್ನು ಉಕ್ರೇನ್​ ಪ್ರಜೆಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ಕಷ್ಟಪಡುತ್ತಿದ್ದಾರೆ.

ಮಾನವೀಯ ಕಾರಿಡಾರ್‌ ತೆರೆಯಲು ಯೋಚನೆ: ರಷ್ಯಾದ ಪಡೆಗಳ ದಾಳಿಯಲ್ಲಿ ಸಿಲುಕಿರುವ ನಗರಗಳಲ್ಲಿ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ತಮ್ಮ ದೇಶವು ಇನ್ನೂ ಆರು ಮಾನವೀಯ ಕಾರಿಡಾರ್‌ಗಳನ್ನು ತೆರೆಯಲು ತಯಾರಿ ನಡೆಸುತ್ತಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ಓದಿ: ಉಕ್ರೇನ್ ನಿರಾಶ್ರಿತರಿಗೆ ನಾವು ಆಶ್ರಯ ನೀಡುತ್ತೇವೆ: ಕೆನಡಾ ಪ್ರಧಾನಿ ಅಭಯ

ಅವರ ಇತ್ತೀಚಿನ ವಿಡಿಯೋ ಭಾಷಣದಲ್ಲಿ, ಸುಮಿ, ಕೀವ್ ಮತ್ತು ಎನರ್ಗೋಡರ್ ನಗರಗಳಿಂದ ನಾವು ಮೂರು ಮಾನವೀಯ ಕಾರಿಡಾರ್‌ಗಳ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಈ ಕಾರಿಡಾರ್​ಗಳಿಂದ ಸುಮಾರು 35,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲು ಅನುಕೂಲವಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ.

ನಾವು ಆರು ಕಾರಿಡಾರ್‌ಗಳನ್ನು ತೆರೆಯಲು ತಯಾರಿ ನಡೆಸುತ್ತಿದ್ದೇವೆ. ಜನರನ್ನು ಮಾರಿಯುಪೋಲ್, ಇಝಿಯುಮ್, ವೊಲ್ನೋವಾಖಾದಿಂದ ಸ್ಥಳಾಂತರಿಸಬೇಕೆಂದು ನಾವು ಪ್ರಾರ್ಥಿಸುತ್ತೇವೆ. ನಮ್ಮ ಉಕ್ರೇನ್‌ನ ಸುರಕ್ಷಿತ ನಗರಗಳಿಗೆ ಅವರನ್ನು ಕರೆದೊಯ್ಯಲು ನಾವು ಯೋಜಿಸುತ್ತೇವೆ ಎಂದು ಉಕ್ರೇನ್​ ಅಧ್ಯಕ್ಷರು ಹೇಳಿದರು.

ರಷ್ಯಾದ ಪಡೆಗಳು ಯುದ್ಧ ಸಾಮರ್ಥ್ಯ ಕಳೆದುಕೊಳ್ಳುತ್ತಿವೆ: ರಷ್ಯಾದ ಪಡೆಗಳು ದೇಶದ ಕೆಲವು ಪ್ರದೇಶಗಳಲ್ಲಿ ಯುದ್ಧ ಸಾಮರ್ಥ್ಯವನ್ನು ಕಳೆದುಕೊಂಡಿವೆ ಎಂದು ಉಕ್ರೇನಿಯನ್ ರಕ್ಷಣಾ ಸಚಿವಾಲಯ ಹೇಳಿದೆ.

ಓದಿ: ದೆಹಲಿಗೆ ತಲುಪಿತು ಉಕ್ರೇನ್​ನಿಂದ ವಿದ್ಯಾರ್ಥಿಗಳನ್ನು ಹೊತ್ತ ವಿಮಾನ.. ಮತ್ತೆರಡು ವಿಮಾನಗಳ ಆಗಮನದ ನಿರೀಕ್ಷೆ

ಉಕ್ರೇನಿಯನ್ ಪಡೆಗಳು ಡೊನೆಟ್ಸ್ಕ್, ಸ್ಲೋಬೋಜಾನ್ಸ್ಕಿ ಮತ್ತು ತಾವ್ರಿಜ್ ಜಿಲ್ಲೆಗಳ ಪೂರ್ವ ಪ್ರದೇಶಗಳಲ್ಲಿ ರಷ್ಯಾದ ದಾಳಿಯನ್ನು ತಡೆಯುವುದನ್ನು ಮುಂದುವರೆಸಿದೆ ಎಂದು ಸಚಿವಾಲಯವು ತನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ. ಉಕ್ರೇನಿಯನ್​ ಪಡೆಗಳು ಖಾರ್ಕಿವ್ ಮತ್ತು ಒಖ್ತಿರ್ಕು ನಗರಗಳನ್ನು ರಕ್ಷಿಸುತ್ತಿವೆ. ಆದರೆ ಆಗ್ನೇಯ ದಿಕ್ಕಿನಲ್ಲಿ ರಷ್ಯಾದ ಪ್ರಗತಿಯನ್ನು ತಡೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅದು ಹೇಳಿದೆ.

ಹೆರಿಗೆ ಆಸ್ಪತ್ರೆ ಮೇಲೆ ವೈಮಾನಿಕ ದಾಳಿ!: ಉಕ್ರೇನ್‌ನಲ್ಲಿನ ತನ್ನ ಯುದ್ಧದ 16ನೇ ದಿನದಲ್ಲಿ, ರಷ್ಯಾ ವಿಶ್ವ ಸಮರ II ರ ನಂತರ ಯುರೋಪ್‌ನಲ್ಲಿನ ಅತಿದೊಡ್ಡ ಭೂ ಸಂಘರ್ಷದ ಆರಂಭದಲ್ಲಿ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಸಾಧಿಸಿದೆ ಮತ್ತು ಹೆಣಗಾಡಿದೆ. ಬಂದರು ನಗರವಾದ ಮರಿಯುಪೋಲ್‌ನಲ್ಲಿನ ಹೆರಿಗೆ ಆಸ್ಪತ್ರೆಯ ಮೇಲೆ ನಡೆದ ವೈಮಾನಿಕ ದಾಳಿಯು ಹೆರಿಗೆಗಾಗಿ ಕಾಯುತ್ತಿದ್ದ ಮಹಿಳೆಯರನ್ನು ಗಾಯಗೊಳಿಸಿದೆ.

ಓದಿ: UP Result: ಯೋಗಿ ಸರ್ಕಾರದ 11 ಮಂದಿ ಸಚಿವರಿಗೆ ಜನತೆ ಗೇಟ್ ಪಾಸ್

ಉಕ್ರೇನಿಯನ್ ನಗರಗಳ ಮೇಲೆ ರಷ್ಯಾದ ಪಡೆಗಳು ತಮ್ಮ ಮುತ್ತಿಗೆಯನ್ನು ತೀವ್ರಗೊಳಿಸಿದಾಗ ಸಾವಿರಾರೂ ಮಕ್ಕಳು ಕಟ್ಟಡಗಳ ಅವಶೇಷಗಳಡಿ ಸಿಲುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಕೀವ್​​​​​​ ಪಶ್ಚಿಮದಲ್ಲಿರುವ ಇನ್ನೊಂದು ನಗರದ ಎರಡು ಆಸ್ಪತ್ರೆಗಳ ಮೇಲೂ ರಷ್ಯಾ ಬಾಂಬ್‌ ದಾಳಿ ನಡೆಸಿದೆ. ಮಾರಿಯುಪೋಲ್‌ನಲ್ಲಿರುವ ವೈದ್ಯಕೀಯ ಸಂಕೀರ್ಣದಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 17 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ವಾರಗಳ ಯುದ್ಧವು ಉಕ್ರೇನ್‌ನಲ್ಲಿ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸಿದೆ. 2 ಮಿಲಿಯನ್ ಉಕ್ರೇನಿಯನ್ನರು ತಮ್ಮ ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ರಷ್ಯಾ ಇಲ್ಲಿಯವರೆಗೆ ಒಟ್ಟು 6,000 ಸೈನಿಕರನ್ನು ಹತ್ಯೆ ಮಾಡಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಿಂದೆ ಸರಿಯುವ ಯಾವುದೇ ಲಕ್ಷಣಗಳು ಇಲ್ಲದ ಕಾರಣ ಯುದ್ಧ ಮುಂದುವರಿಯುವ ಸಾಧ್ಯತೆಯಿದೆ.

Last Updated : Mar 11, 2022, 9:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.