ಮಾಸ್ಕೋ: ರಷ್ಯಾದ ಮೂವರು ಗಗನಯಾತ್ರಿಗಳನ್ನು ಹೊತ್ತುಕೊಂಡು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ರಷ್ಯಾದ ರಾಕೆಟ್ ಶುಕ್ರವಾರ ಯಶಸ್ವಿಯಾಗಿ ತೆರಳಿದೆ.
ರಷ್ಯಾದ ಬಾಹ್ಯಾಕಾಶ ನಿಗಮದ ಗಗನಯಾತ್ರಿಗಳಾದ ಒಲೆಗ್ ಆರ್ಟೆಮಿಯೆವ್, ಡೆನಿಸ್ ಮ್ಯಾಟ್ವೀವ್ ಮತ್ತು ಸೆರ್ಗೆಯ್ ಕೊರ್ಸಕೋವ್ ಅವರಿದ್ದ 'Soyuz MS-21' ರಾಕೆಟ್ ಅನ್ನು ರಷ್ಯಾ ಬಾಹ್ಯಾಕಾಶ ಸಂಸ್ಥೆಯಾದ ರೋಸ್ಕೊಸ್ಮೊಸ್ನಲ್ಲಿ ಶುಕ್ರವಾರ ರಾತ್ರಿ 8:55ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಈ ರಾಕೆಟ್ ಬಾಹ್ಯಾಕಾಶ ನೌಕೆಯಲ್ಲಿ ನಿಯೋಜಿತ ಕಕ್ಷೆಯನ್ನು ಸುರಕ್ಷಿತವಾಗಿ ತಲುಪಿದೆ. ಫೆಬ್ರವರಿ 24 ರಂದು ರಷ್ಯಾವು ಉಕ್ರೇನ್ ಮೇಲೆ ಆಕ್ರಮಣ ಪ್ರಾರಂಭಿಸಿದ ನಂತರ ಮೊದಲನೇ ಬಾರಿಗೆ ರಾಕೆಟ್ ಉಡಾವಣೆ ಮಾಡಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS) ಎಂಬುದು ಅಂತಾರಾಷ್ಟ್ರೀಯವಾಗಿ ಅಭಿವೃದ್ಧಿಪಡಿಸಲಾದ ಸಂಶೋಧನಾ ಸೌಲಭ್ಯವಾಗಿದ್ದು, ಇದನ್ನು ಪೃಥ್ವಿಯ ನಿಕಟವರ್ತಿ ಕಕ್ಷೆಯಲ್ಲಿ ಸ್ಥಾಪಿಸಲಾಗಿದೆ. ಈ ನಿಲ್ದಾಣದ ನಿರ್ಮಾಣವನ್ನು 1998 ರಲ್ಲಿ ಪ್ರಾರಂಭಿಸಿ 2011ರಲ್ಲಿ ಪೂರ್ಣಗೊಳಿಸಲಾಯಿತು. ಅತ್ಯಂತ ದೊಡ್ಡ ಪಾರ್ಶ್ವಛೇದೀಯ ವ್ಯಾಪ್ತಿ ಹೊಂದಿರುವ ಐಎಸ್‌ಎಸ್‌ನ್ನು ಭೂಮಿಯಿಂದ ಬರಿಗಣ್ಣಿನಲ್ಲಿ ನೋಡಬಹುದಾಗಿದೆ.
ಇದನ್ನೂ ಓದಿ: ಮರಿಯುಪೋಲ್ ಥಿಯೇಟರ್ ಮೇಲೆ ಬಾಂಬ್ ದಾಳಿ: ಅವಶೇಷಗಳಡಿ ಸಿಲುಕಿದ 1300 ಕ್ಕೂ ಹೆಚ್ಚು ನಾಗರಿಕರು,130 ಮಂದಿ ರಕ್ಷಣೆ