ರೋಮ್: ಅತ್ಯಂತ ಸುಂದರವಾದ ಸರೋವರಗಳು, ಪರ್ವತಗಳ ನಾಡು ಇಟಲಿ. ಆಕರ್ಷಕ ಪ್ರವಾಸಿ ತಾಣಗಳನ್ನು ಹೊಂದಿರುವ ಉತ್ತರ ಇಟಲಿಗೆ ಲಕ್ಷಾಂತರ ಜನ ಪ್ರವಾಸಿಗರು ಭೇಟಿ ನೀಡಿ ಸಂಭ್ರಮಿಸುತ್ತಾರೆ. ಇಲ್ಲಿರುವ ಕೇಬಲ್ ಕಾರುಗಳ ಮೂಲಕ ಸುಂದರ ತಾಣವನ್ನು ಸವಿಯುವುದು ಒಂದು ವಿಶೇಷ ಅನುಭವ. ಆದ್ರೆ ನಿನ್ನೆ ಇಲ್ಲಿನ ಪ್ರವಾಸಿ ತಾಣವೊಂದರಲ್ಲಿ ಕೇಬಲ್ ಕಾರೊಂದು ಅಪಘಾತಕ್ಕೀಡಾಗಿ ಸುಮಾರು 14 ಜನ ದಾರುಣವಾಗಿ ಅಸುನೀಗಿದ್ದಾರೆ.
ಭಾನುವಾರದಂದು ಪ್ರವಾಸಿಗರನ್ನು ಕರೆದೊಯ್ಯುವಾಗ ಇಳಿಜಾರಿನಲ್ಲಿ ಕೇಬಲ್ ಕಾರು ಮೇಲಿಂದ ನೆಲಕ್ಕೆ ಅಪ್ಪಳಿಸಿದೆ. ಪರಿಣಾಮ, ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿತು.
ಮೃತಪಟ್ಟವರಲ್ಲಿ ಆರು ಜನ ಇಸ್ರೇಲ್ ಪ್ರಜೆಗಳು ಮತ್ತು ಇಟಲಿಯ ನಾಲ್ಕು ಕುಟುಂಬಗಳಿವೆ. ಕಾರು ಚಲಿಸುತ್ತಿದ್ದಾಗ ಕೇಬಲ್ ಕಟ್ ಆಗಿ ಎರಡ್ಮೂರು ಬಾರಿ ಮರಕ್ಕೆ ಹೊಡೆದಿತ್ತು ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಾರೆ.
ಇಟಲಿ ಸರ್ಕಾರವು ದುರಂತದ ತನಿಖೆಗಾಗಿ ವಿಶೇಷ ತನಿಖಾ ಆಯೋಗ ರಚಿಸಿದೆ.