ವುಹಾನ್(ಚೀನಾ): ಕಳೆದ ಡಿಸೆಂಬರ್‌ನಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹುಟ್ಟಿದ ಹುಬೈ ಪ್ರಾಂತ್ಯದ ರಾಜಧಾನಿ ವುಹಾನ್‌ನಲ್ಲಿ ಆಸ್ಪತ್ರೆಗೆ ದಾಖಲಾದ ಎಲ್ಲ ಕೋವಿಡ್-19 ರೋಗಿಗಳು ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಇಲಾಖೆಯ ವಕ್ತಾರರೊಬ್ಬರು ಭಾನುವಾರ ತಿಳಿಸಿದ್ದಾರೆ.
ವುಹಾನ್‌ನಲ್ಲಿನ ವೈದ್ಯಕೀಯ ಕಾರ್ಯಕರ್ತರು ಮತ್ತು ಕೊರೊನಾ ವಾರಿಯರ್ಸ್ ಕಠಿಣ ಪ್ರಯತ್ನದಿಂದ ಈ ಫಲಿತಾಂಶವನ್ನು ಸಾಧಿಸಲಾಗಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ವಕ್ತಾರ ಮಿ ಫೆಂಗ್ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದಾರೆ.
ವುಹಾನ್‌ನಲ್ಲಿ ಗಂಭೀರ ಸ್ಥಿತಿಯಲ್ಲಿರುವ ಕೊನೆಯ ರೋಗಿಯನ್ನು ಶುಕ್ರವಾರ ಗುಣಪಡಿಸಲಾಗಿದ್ದು, ನಗರದಲ್ಲಿದ್ದ ಎಲ್ಲ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಹುಬೈ ಪ್ರಾಂತ್ಯದಲ್ಲಿ 20 ದಿನಗಳವರೆಗೆ ಯಾವುದೇ ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ. ವುಹಾನ್ ನಗರದಲ್ಲಿ 12 ಸಕ್ರಿಯ ಕೋವಿಡ್-19 ಪ್ರಕರಣಗಳಿದ್ದವು ಎಂದು ಭಾನುವಾರ ರಾಷ್ಟ್ರೀಯ ಆರೋಗ್ಯ ಆಯೋಗ ವರದಿ ಮಾಡಿದೆ.
ಆರೋಗ್ಯ ಅಧಿಕಾರಿಗಳು, ಭಾನುವಾರ ಮಧ್ಯರಾತ್ರಿಯವರೆಗೆ, ವುಹಾನ್‌ನಲ್ಲಿ ಸೋಂಕನ್ನು ನಿವಾರಿಸಿದ ನಂತರ 11 ಜನರನ್ನು ಬಿಡುಗಡೆ ಮಾಡಲಾಗಿದೆ.