ETV Bharat / international

ಆಫ್ಘನ್​ನಲ್ಲಿ ನಿಲ್ಲದ ತಾಲಿಬಾನ್​ ಕ್ರೌರ್ಯ: ಮಹಿಳೆಯರ ಮೇಲೆ ಹೆಚ್ಚಿದ ದೌರ್ಜನ್ಯ - Taliban latest News

ವಿದೇಶಿ ಸಂಸ್ಥೆಗಳಿಗೋಸ್ಕರ ದುಡಿದ ಆಫ್ಘನ್​ ಜನರನ್ನು ತಾಲಿಬಾನ್​ಗಳು ಗುರಿಯಾಗಿಟ್ಟುಕೊಂಡು ಅವರ ಮನೆಗಳಿಗೆ ತೆರಳಿ ಹಿಂಸಿಸುತ್ತಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

Taliban
ತಾಲಿಬಾನ್​
author img

By

Published : Sep 15, 2021, 7:42 AM IST

ಕಾಬೂಲ್​: ಅಫ್ಘಾನಿಸ್ತಾನ​ದಲ್ಲಿ ತಾಲಿಬಾನ್​ ಆಡಳಿತದಿಂದ ಅರಾಜಕತೆ ಸೃಷ್ಟಿಯಾಗಿದೆ. ಉಗ್ರರ ಧೋರಣೆಯಿಂದ ಅಲ್ಲಿನ ಮಹಿಳೆಯರ ಪಾಡು ಹೇಳತೀರದ್ದಾಗಿದೆ. ಇನ್ನು ಮಹಿಳೆಯರು ತಾವು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಹತಾಶೆಯ ಮಾತುಗಳನ್ನಾಡಿದ್ದಾರೆ.

ಈ ಹಿಂದೆ ವಿದೇಶಿ ಸಂಸ್ಥೆಗಳಿಗೋಸ್ಕರ ದುಡಿದ ಅಫ್ಘನ್​ ಜನರನ್ನು ತಾಲಿಬಾನ್​ಗಳು ಗುರಿಯಾಗಿಟ್ಟುಕೊಂಡು ಅವರ ಮನೆಗಳಿಗೆ ತೆರಳಿ ಅವರನ್ನು ಹಿಂಸಿಸುತ್ತಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕ ಜೊತೆ ಕೆಲಸ ಮಾಡುತ್ತಿದ್ದ ಒಬ್ಬ ಯುವತಿಯ ಮೇಲೆ ತಾಲಿಬಾನ್​ಗಳು ದೌರ್ಜನ್ಯ ತೋರಿದ್ದಾರೆ. ಈ ಸಂದರ್ಭದಲ್ಲಿ ಸಹಾಯ ಮಾಡುವಂತೆ ಅಮೆರಿಕಾಗೆ ಕೇಳಿದರೂ ಅವರಿಂದ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ ಎಂದು ಸಂತ್ರಸ್ತೆ ಬ್ರಿಟಿಷ್ ಬ್ರಾಡ್‌ಕಾಸ್ಟರ್ ಸ್ಕೈ ನ್ಯೂಸ್​ಗೆ ತಿಳಿಸಿದ್ದಾಳೆ.

ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ವಿದೇಶಿ ಎನ್‌ಜಿಒಗಳೊಂದಿಗೆ ಕೆಲಸ ಮಾಡಿದ ಇನ್ನೊಬ್ಬ ಮಹಿಳೆಗೆ ಬ್ರಿಟನ್‌ನಿಂದ ಸಹಾಯದ ಭರವಸೆ ನೀಡಲಾಯಿತು. ಆದರೆ, ಕಾಬೂಲ್ ವಿಮಾನ ನಿಲ್ದಾಣದ ಆತ್ಮಾಹುತಿ ಬಾಂಬ್ ದಾಳಿಯ ನಂತರ ಅದೂ ಸಹ ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ ಆ ಮಹಿಳೆ.

ಪಾಶ್ಚಿಮಾತ್ಯ ಸೇನಾಪಡೆ ಹಿಂತೆಗೆದುಕೊಂಡ ನಂತರ ಅಫ್ಘಾನ್​​​ನಲ್ಲಿ ತಾಲಿಬಾನ್ ಆಡಳಿತ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು, ತಾಲಿಬಾನ್​ಗಳು ತಮ್ಮ 1990 ರ ದಮನಕಾರಿ ನಿಯಮವನ್ನು ಪುನರಾವರ್ತಿಸದಂತೆ ಎಚ್ಚರಿಕೆ ನೀಡಿವೆ.

ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಮೇಲೆ ತೀವ್ರ ನಿರ್ಬಂಧಗಳನ್ನು ತಾಲಿಬಾನ್​ಗಳು ವಿಧಿಸಿದ್ದಾರೆ. ಇಸ್ಲಾಮಿಕ್ ಕಾನೂನಿನ ಕಠಿಣ ವ್ಯಾಖ್ಯಾನ ಮಾಡುತ್ತಾ ಅಲ್ಲಿನ ಜನರ ಮೇಲೆ ದಾಳಿ ನಡೆಸುತ್ತಿದೆ. ಈ ಹಿಂದೆ ಮಹಿಳೆಯರ ಹಕ್ಕುಗಳನ್ನು ಗೌರವಿಸುವುದಾಗಿ ಹೇಳಿಕೆ ನೀಡಿದ್ದ ತಾಲಿಬಾನ್​ಗಳು ಮತ್ತೆ ತಮ್ಮ ಹಳೇ ಚಾಳಿ ಮುಂದುವರೆಸಿ ಮಾತಿನ ವರಸೆಯನ್ನೇ ಬದಲಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.