ಸಾಮಾನ್ಯವಾಗಿ ವಾತಾವರಣದಲ್ಲಿ ಏರುಪೇರು ಅಥವಾ ತಾಂತ್ರಿಕ ದೋಷಗಳು ಕಂಡು ಬಂದಾಗ ವಿಮಾನಗಳ ಮಾರ್ಗಗಳು ಬದಲಾಗುತ್ತವೆ. ಆದರೆ ಹಾವೊಂದು ವಿಮಾನದ ಮಾರ್ಗವನ್ನೇ ಬದಲಾಯಿಸಿಬಿಟ್ಟಿದೆ. ಕೌಲಲಾಂಪುರದಿಂದ ತವೌಗೆ ತೆರಳುತ್ತಿದ್ದ ವಿಮಾನದಲ್ಲಿ ಹಾವು ಕಾಣಿಸಿಕೊಂಡು ಅವಾಂತರ ಸೃಷ್ಟಿಯಾಗಿತ್ತು.
ಏರ್ ಏಷ್ಯಾ ಸಂಸ್ಥೆಯ ಏರ್ಬಸ್ ಎ320-200 ವಿಮಾನ ಕೌಲಲಾಂಪುರದಿಂದ ತವೌಗೆ (ಎರಡೂ ಕೂಡಾ ಮಲೇಷಿಯಾ ದೇಶದ ನಗರಗಳು) ತೆರಳುವಾಗ ಆಕಸ್ಮಿಕವಾಗಿ ಹಾವು ಕಾಣಿಸಿಕೊಂಡಿತು. ಈ ವಿಚಾರ ಪೈಲೆಟ್ಗೆ ತಿಳಿದ ತಕ್ಷಣ ಕಚ್ಚಿಂಗ್ ನಗರಕ್ಕೆ ವಿಮಾನವನ್ನು ತಿರುಗಿಸಿ, ಹಾವನ್ನು ರಕ್ಷಿಸಲಾಗಿದೆ.
-
Yikes!
— Hana Mohsin Khan | هناء (@girlpilot_) February 12, 2022 " class="align-text-top noRightClick twitterSection" data="
Snake on a plane!
Either an escaped pet from passenger carry on/luggage or possibly climbed its way into the aircraft from the ground.
Air Asia Airbus A320-200,Kuala Lumpur to Tawau.
This dude happily stayed inside the illuminated area till plane was diverted😂 pic.twitter.com/jqopi3Ofvp
">Yikes!
— Hana Mohsin Khan | هناء (@girlpilot_) February 12, 2022
Snake on a plane!
Either an escaped pet from passenger carry on/luggage or possibly climbed its way into the aircraft from the ground.
Air Asia Airbus A320-200,Kuala Lumpur to Tawau.
This dude happily stayed inside the illuminated area till plane was diverted😂 pic.twitter.com/jqopi3OfvpYikes!
— Hana Mohsin Khan | هناء (@girlpilot_) February 12, 2022
Snake on a plane!
Either an escaped pet from passenger carry on/luggage or possibly climbed its way into the aircraft from the ground.
Air Asia Airbus A320-200,Kuala Lumpur to Tawau.
This dude happily stayed inside the illuminated area till plane was diverted😂 pic.twitter.com/jqopi3Ofvp
ಈ ಕುರಿತು ಟ್ವೀಟ್ ಮಾಡಿರುವ ಹನಾ ಮೊಹ್ಸಿನ್ ಖಾನ್ ಎಂಬ ಪೈಲೆಟ್ 'ವಿಮಾನದಲ್ಲಿ ಹಾವು.. ಪ್ರಯಾಣಿಕರ ಲಗೇಜಿನಿಂದ ತಪ್ಪಿಸಿಕೊಂಡು ವಿಮಾನ ಹತ್ತಿರಬಹುದು. ವಿಮಾನ ಲ್ಯಾಂಡ್ ಆಗುವವರೆಗೆ 'ಆ ಡ್ಯೂಡ್' ಅಲ್ಲಿಯೇ ಇದ್ದ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ವಿಮಾನ ಪತನ: ಓರ್ವ ಸಾವು, ಏಳು ಮಂದಿ ಕಣ್ಮರೆ
ಈ ವೇಳೆ ಯಾರಿಗೂ ಅಪಾಯವಾಗಿಲ್ಲ. ಎಲ್ಲಾ ಪ್ರಯಾಣಿಕರನ್ನು ಅಂದಿನ ದಿನವೇ ಅದೇ ವಿಮಾನದಲ್ಲಿ ತವೌಗೆ ತಲುಪಿಸಲಾಗಿದೆ. ಯಾವುದೇ ವಿಮಾನದಲ್ಲಾದರೂ, ಇದೊಂದು ಅತ್ಯಪರೂಪದ ಪ್ರಕರಣ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಚಾನೆಲ್ ನ್ಯೂ ಏಷಿಯಾ ವರದಿ ಮಾಡಿದೆ.