ETV Bharat / international

ಜಪಾನ್ ಸ್ಕೀ ರೆಸಾರ್ಟ್ ಬಳಿ ಹಿಮಪಾತ : ಓರ್ವ ಸಾವು, 7 ಮಂದಿ ಸೇಫ್​

ಸೆಂಟ್ರಲ್ ಹೊಕ್ಕೈಡೊದ ತೋಮಾಮು ಸ್ಕೀ ರೆಸಾರ್ಟ್ ಬಳಿ ಎಂಟು ಜನ ವಿದೇಶಿಯರ ತಂಡ ಸ್ಕೀಯಿಂಗ್ ಮಾಡುವಾಗ ಹಿಮಪಾತ ಸಂಭವಿಸಿದೆ. ಈ ವೇಳೆ ಓರ್ವ ಸಾವನ್ನಪ್ಪಿದ್ದು, ಕೆಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

author img

By

Published : Jan 30, 2020, 7:08 PM IST

valanche at Japan ski resort, 1 feared dead, 7 survive
ಜಪಾನ್ ಸ್ಕೀ ರೆಸಾರ್ಟ್ ಬಳಿ ಹಿಮಪಾತ

ಟೋಕಿಯೋ (ಜಪಾನ್​): ಉತ್ತರ ದ್ವೀಪ ಹೊಕ್ಕೈಡೊದ ಸ್ಕೀ ರೆಸಾರ್ಟ್‌ನ್​ ಬಳಿ ಗುರುವಾರ ಸಂಭವಿಸಿದ ಭಾರೀ ಹಿಮಪಾತದಲ್ಲಿ ಸ್ಕೀಯೀಂಗ್​ ಮಾಡುತ್ತಿದ್ದ ಎಂಟು ವಿದೇಶಿಯರ ತಂಡ ಸಿಕ್ಕಿ ಹಾಕಿಕೊಂಡಿದ್ದು, ಇದರಲ್ಲಿ ಓರ್ವ ಸಾವನ್ನಪ್ಪಿದ್ದಾನೆ.

ಸೆಂಟ್ರಲ್ ಹೊಕ್ಕೈಡೊದ ತೋಮಾಮು ಸ್ಕೀ ರೆಸಾರ್ಟ್ ಬಳಿ ಎಂಟು ಜನ ವಿದೇಶಿಯರ ತಂಡ ಸ್ಕೀಯಿಂಗ್ ಮಾಡುವಾಗ ಹಿಮಪಾತ ಸಂಭವಿಸಿದೆ. ಈ ವೇಳೆ 40 ವರ್ಷದ ಫ್ರೆಂಚ್​ ಪ್ರಜೆ ಸಾವನ್ನಪ್ಪಿದ್ದು, ಉಳಿದ 7 ಮಂದಿ ಬದುಕುಳಿದಿದ್ದಾರೆ. ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ ಎಂದು ಶಿಮುಕಪ್ಪು ಗ್ರಾಮಾಧಿಕಾರಿ ಅತುಶಿ ತಾಡಾ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಆದರೆ ಪದೇ ಪದೇ ಹಿಮಪಾತವಾಗುತ್ತಿರುವ ಹಿನ್ನೆಲೆ ಕಾರ್ಯಾಚರಣೆಗೆ ಸ್ಪಲ್ಪ ಅಡೆತಡೆಗಳು ಎದುರಾದವು. ಘಟನೆಯಲ್ಲಿ ಸಾವನ್ನಪ್ಪಿರುವ ಓರ್ವ ಫ್ರೆಂಚ್​ ​ಪ್ರಜೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.