ಟೋಕಿಯೊ: ಚೀನಾದ ಆಕ್ರಮಣ ಎದುರಿಸಲು ಯೋಜನೆ ರೂಪಿಸಲು ನಡೆಯುವ ಕ್ವಾಡ್ ಸಭೆ ಜಪಾನ್‌ನಲ್ಲಿ ಪ್ರಾರಂಭವಾಗೊಂಡಿದೆ. ಭಾರತ, ಆಸ್ಪ್ರೇಲಿಯ, ಜಪಾನ್ ಹಾಗೂ ಅಮೆರಿಕಗಳು ಈ ಕೂಟದಲ್ಲಿವೆ.
ಮಂಗಳವಾರ ಯುಎಸ್ ಮತ್ತು ಇತರ ರಾಜತಾಂತ್ರಿಕರೊಂದಿಗಿನ ಸಭೆಯಲ್ಲಿ ಮಾತನಾಡಿದ ಜಪಾನ್‌ನ ಹೊಸ ಪ್ರಧಾನಿ ಯೋಶಿಹೈಡ್ ಸುಗಾ, ಜಗತ್ತು ಎದುರಿಸುತ್ತಿರುವ ಕೊರೊನಾ ಸಾಂಕ್ರಮಿಕಕ್ಕಿಂತ ಇಂಡೋ-ಪೆಸಿಫಿಕ್ ಭಯ ಮುಕ್ತಗೊಳಿಸುವ ಉಪಕ್ರಮಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದ್ದಾರೆ.
ಯುಎಸ್, ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾದ ಕ್ವಾಡ್ ಗುಂಪು ಎಂದು ಕರೆಯಲ್ಪಡುವ ಇಂಡೋ-ಪೆಸಿಫಿಕ್ ರಾಷ್ಟ್ರಗಳ ವಿದೇಶಾಂಗ ಮಂತ್ರಿಗಳು ಕೊರೊನಾ ವೈರಸ್ ರೋಗ ಪ್ರಾರಂಭವಾದಾಗಿನಿಂದ ಟೋಕಿಯೊದಲ್ಲಿ ತಮ್ಮ ಮೊದಲ ವೈಯಕ್ತಿಕ ಮಾತುಕತೆಗಾಗಿ ಇದೇ ಮೊದಲ ಬಾರಿಗೆ ಒಟ್ಟುಗೂಡಿದ್ದಾರೆ.
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ, ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಮಾರಿಸ್ ಪೇನ್, ಭಾರತದ ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಮತ್ತು ಅವರ ಜಪಾನಿನ ಸಹವರ್ತಿ ತೋಷಿಮಿಟ್ಸು ಮೊಟೆಗಿ ಈ ಮಹತ್ವದ ಸಭೆಯಲ್ಲಿ ಭಾಗಿಯಾಗಿದ್ದರು. ಕ್ವಾಡ್ ಸಭೆ ಮೂಲಕ ಪ್ರಮುಖ ರಾಷ್ಟ್ರಗಳು ಚೀನಾಕ್ಕೆ ಖಡಕ್ ಸಂದೇಶ ರವಾನೆಯಾಗಲಿದೆ.