ETV Bharat / international

'ಎಷ್ಟೇ ಭರವಸೆ ನೀಡಿದರೂ ಭಯಾನಕ ಇತಿಹಾಸ ಕಣ್ಣೆದುರಿಗಿದೆ': ಅಫ್ಘನ್​ ಮಹಿಳೆಯರ ಮನದ ಮಾತು

ಅಫ್ಘಾನಿಸ್ತಾನದ ರಾಜಕೀಯ ಮತ್ತು ಅಧಿಕಾರದಲ್ಲಿ ಮಹಿಳೆಯರು ಭಾಗಿಯಾಗಬಹುದು ಎಂದು ತಾಲಿಬಾನ್​ ವಕ್ತಾರ ಇತ್ತೀಚೆಗೆ ನಡೆಸಿದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾನೆ. ಆದರೆ ಅದರ ಹೊರತಾಗಿಯೂ ಅಲ್ಲಿನ ಮಹಿಳೆಯರು ತಾಲಿಬಾನಿ​ಗಳನ್ನು ನಂಬಲು ತಯಾರಿಲ್ಲ. ಎರಡು ದಶಕಗಳ ಹಿಂದೆ ಕ್ರೌರ್ಯದ ಮೂಲಕ ಆಳ್ವಿಕೆ ನಡೆಸಿದ್ದ ತಾಲಿಬಾನ್​ ಭಯಾನಕ ಇತಿಹಾಸ ಅವರ ಕಣ್ಣ ಮುಂದಿದೆ.

Afghan
ಅಫ್ಘಾನಿಸ್ತಾನ
author img

By

Published : Aug 18, 2021, 9:00 AM IST

ಕಾಬೂಲ್​: ಅಮೆರಿಕ ತನ್ನ ಸೇನೆ ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಆರಂಭಿಸಿದ ನಂತರ ತಾಲಿಬಾನ್ ಉಗ್ರರಿಗೆ ದೇಶ ಅನಾಯಾಸವಾಗಿ ದಕ್ಕಿದೆ. ಇಡೀ ದೇಶ ಉಗ್ರರ ಕೈಸೇರಿದ ಬಳಿಕ ಮಹಿಳೆಯರ ವಿಚಾರವಾಗಿ ಅಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ತೀವ್ರ ಆತಂಕ ಮೂಡಿಸಿವೆ.

ಅಫ್ಘನ್​ನ ರಾಜಕೀಯ ಮತ್ತು ಅಧಿಕಾರದಲ್ಲಿ ಮಹಿಳೆಯರು ಭಾಗಿಯಾಗಬಹುದು ಎಂದು ತಾಲಿಬಾನ್​ ವಕ್ತಾರ ನಿನ್ನೆ ನಡೆಸಿದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾನೆ. ಆದರೆ ಅದರ ಹೊರತಾಗಿಯೂ ಇಲ್ಲಿನ ಮಹಿಳೆಯರು ತಾಲಿಬಾನಿಗಳನ್ನು ನಂಬಲು ಸುತರಾಂ ತಯಾರಿಲ್ಲ. ಇದಕ್ಕೆ ಕಾರಣ ಎರಡು ದಶಕಗಳ ಹಿಂದೆ ಆಳ್ವಿಕೆ ನಡೆಸಿದ್ದ ತಾಲಿಬಾನಿನ ಘನಘೋರ ಇತಿಹಾಸ.

'ತಾಲಿಬಾನ್​ಗಳ ಭಯದಲ್ಲಿ ನಾನು ಮತ್ತು ನನ್ನ ಸಹೋದರಿ ಇತ್ತೀಚೆಗೆ ಮಾರುಕಟ್ಟೆಗೆಂದು ತೆರಳಿದೆವು. ಆ ಸಂದರ್ಭದಲ್ಲಿ ನಾವು ಕೂದಲನ್ನು ಸಡಿಲವಾಗಿಸಿ, ಸ್ಕಾರ್ಫ್​ನಿಂದ ಸರಳವಾಗಿ ಮುಖವನ್ನು ಮುಚ್ಚಿಕೊಂಡು ಹೋಗಿದ್ದೆವು. ಈ ವೇಳೆ ತಾಲಿಬಾನ್​ ಉಗ್ರರು ಬೀರಿದ ನೋಟ ಭಯವನ್ನುಂಟು ಮಾಡಿತ್ತು. ಆದರೆ ನಮಗೆ ಅವರು ಯಾವುದೇ ರೀತಿಯಲ್ಲಿ ಕಿರುಕುಳ ನೀಡಿಲ್ಲ' ಎಂದು ಅಫ್ಘನ್​ನ ಸಹೋದರಿಯರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಶಾಲೆಗೆ ಮರಳಿದ ಹೆಣ್ಣುಮಕ್ಕಳು:

ಇನ್ನೊಂದೆಡೆ, ದೇಶದ ಮೂರನೇ ಅತಿದೊಡ್ಡ ನಗರವಾದ ಹೆರಾತ್‌ನಲ್ಲಿ ಹೆಣ್ಣು ಮಕ್ಕಳು ಬಾಲಕರ ಜೊತೆಗೂಡಿ ಶಾಲೆಗಳಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಹಿಜಾಬ್ ಮತ್ತು ಸ್ಕಾರ್ಫ್​ ಬಳಕೆಯನ್ನು ಕಡ್ಡಾಯವಾಗಿ ಮಾಡಬೇಕೆಂದು ತಾಲಿಬಾನ್​ಗಳು ಕಟ್ಟುನಿಟ್ಟಿನ ಸೂಚನೆ ನೀಡಿ ಕಳುಹಿಸಿದ್ದಾರೆ.

ಸಂದರ್ಶನ ನಡೆಸಿದ ಮಹಿಳಾ ನಿರೂಪಕಿ:

ತಾಲಿಬಾನ್ ಆಡಳಿತದಲ್ಲಿ ಊಹಿಸಲೂ ಸಾಧ್ಯವಿಲ್ಲದಂತೆ ಮಹಿಳಾ ನಿರೂಪಕಿಯೊಬ್ಬರು ತಾಲಿಬಾನ್​ಮುಖಂಡನನ್ನು ಟಿವಿ ಸ್ಟುಡಿಯೋದಲ್ಲಿ ಸಂದರ್ಶನ ಮಾಡಿದ್ದಾರೆ. ಆದರೆ 20 ವರ್ಷಗಳ ಹಿಂದೆ ಇಂತಹ ಘಟನೆಗಳು ನಡೆಯಲು ಸಾಧ್ಯವಿರಲಿಲ್ಲ. ಏಕೆಂದರೆ ಆ ಸಂದರ್ಭದಲ್ಲಿ ಮಹಿಳೆಯರನ್ನು ಕಂಡರೆ ತಾಲಿಬಾನ್​ ಎಂಬ ಕ್ರೂರಿಗಳು ಚಿತ್ರಹಿಂಸೆ ನೀಡಿ, ಕಲ್ಲಿನಿಂದ ಹೊಡೆದು ಅಥವಾ ಲೈಂಗಿಕ ಕಿರುಕುಳ ನೀಡಿ ಸಾಯಿಸುತ್ತಿದ್ದರಂತೆ. ಇದರ ದಾರುಣ ಚಿತ್ರಗಳು ಇಂದಿಗೂ ಇಲ್ಲಿನ ಜನರು ಮುಖ್ಯವಾಗಿ ಮಹಿಳೆಯರಿಗೆ ಭೀತಿಯನ್ನು ತಂದೊಡ್ಡುತ್ತಿದೆ.

ದೇಶವನ್ನು ಸ್ವಾಧೀನಪಡಿಸಿಕೊಂಡ ನಂತರ ತಾಲಿಬಾನ್ ಮಹಿಳೆಯರಿಗೆ ಅಧಿಕಾರ ನೀಡುವ ಭರವಸೆಯನ್ನು ನೀಡಿತ್ತು. ಆದರೆ ಈ ಎಲ್ಲಾ ಭರವಸೆಗಳನ್ನು ಇಲ್ಲಿನ ಮಹಿಳೆಯರು ನಂಬಲು ಸಿದ್ಧರಿಲ್ಲ.

'ತಾಲಿಬಾನಿಗರ ನಡವಳಿಕೆ ನಿಜವಲ್ಲ'

ಕಾಬೂಲ್‌ನ ಪಾಶ್ಚಿಮಾತ್ಯ ಭಾಗದ ಮಹಿಳಾ ಉಪನ್ಯಾಸಕಿಯೊಬ್ಬರು ಇಲ್ಲಿ ನಡೆಯುತ್ತಿರುವ ಘಟನೆಗಳಿಂದ ಭಯಭೀತರಾಗಿ ಅಜ್ಞಾತವಾಗಿ ಉಳಿದಿದ್ದಾರೆ. ಈ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಅವರು, 'ತಾಲಿಬಾನಿಗಳು ಮನೆ ಮನೆಗೆ ಹೋಗಿ ಜನರನ್ನು, ಮನೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಅವರ ಈ ನಡವಳಿಕೆ ನಿಜವಲ್ಲ. ಇದು 20 ವರ್ಷಗಳ ಹಿಂದೆ ನಡೆದ ಘಟನೆಯ ಮರುಕಳಿಸುವುದರ ಸೂಚನೆಯಂತೆ ನನಗೆ ಕಾಣುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿದರು.

'ತಾಲಿಬಾನ್‌ಗಳು ದೇಶದ ಹಲವಾರು ಭಾಗಗಳಲ್ಲಿ ಲೂಟಿ ಮತ್ತು ಕಳ್ಳತನ ಎಸಗುತ್ತಿದ್ದಾರೆ. ಬಳಿಕ ತಾವು ಮಾಡಿರುವ ಕೃತ್ಯಗಳನ್ನು ಈಗಾಗಲೇ ಜೈಲುಪಾಲಾಗಿರುವ ಅಪರಾಧಿಗಳ ಮೇಲೆ ಅಥವಾ ತಾಲಿಬಾನ್‌ನಂತೆ ತೋರುವ ಇತರ ಜನರ ಮೇಲೆ ಹೊರಿಸುತ್ತಿದ್ದಾರೆ' ಎಂದು ಅವರು ಹೇಳಿದರು.

ತಾಲಿಬಾನ್ ಸಾಮಾನ್ಯ ಕ್ಷಮಾದಾನದ ಭಾಗವಾಗಿ ದೇಶದ ಅತಿದೊಡ್ಡ ಜೈಲು ಸೇರಿದಂತೆ ಅನೇಕ ಕಡೆಗಳಿಂದ ಸಾವಿರಾರು ಕೈದಿಗಳನ್ನು ಬಿಡುಗಡೆ ಮಾಡಿದೆ.

'ನಾನು ತಾಲಿಬಾನಿಗರನ್ನು ನಂಬಲಾರೆ'

ಕಾಬೂಲ್‌ನ ಹಿರಿಯ ಮಹಿಳಾ ಪ್ರಸಾರಕರೊಬ್ಬರು, 'ನಾನು ತಾಲಿಬಾನಿಗರನ್ನು ನಂಬುವುದಿಲ್ಲ' ಎಂದು ಹೇಳಿಕೆ ನೀಡಿ, ತಲೆಮರೆಸಿಕೊಂಡಿದ್ದಾರೆ. ಈಗಾಗಲೇ ಇಂತಹ ಹೇಳಿಕೆ ನೀಡಿರುವ ಪತ್ರಕರ್ತರ ಪಟ್ಟಿಯನ್ನು ತಾಲಿಬಾನ್​ಗಳು ಸಿದ್ಧ ಮಾಡಿದ್ದು, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತಾ ಪರಿಸ್ಥಿತಿ ಸ್ಪಷ್ಟವಾಗುವವರೆಗೆ ತಲೆಮರೆಸಿಕೊಳ್ಳುವಂತೆ ಮಹಿಳಾ ಪ್ರಸಾರಕರ ತಂದೆ ಹೇಳಿ ಕಳುಹಿಸಿದ್ದಾರಂತೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.