ETV Bharat / international

'ಮಾನವೀಯತೆಯ ಆಧಾರ'ದ ಮೇಲೆ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಕುಟುಂಬಕ್ಕೆ UAE ಆಶ್ರಯ - ಅಶ್ರಫ್​ ಘನಿ ಪಲಾಯನ

ಅಪಘಾನಿಸ್ತಾನ ತಾಲಿಬಾನ್​ಗಳ ವಶವಾದ ನಂತರ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಘನಿ ಹಾಗೂ ಅವರ ಕುಟುಂಬವನ್ನು'ಮಾನವೀಯತೆಯ ಆಧಾರ'ದ ಮೇಲೆ ಯುಎಇ ತನ್ನ ದೇಶದಲ್ಲಿರಿಸಿಕೊಂಡಿದೆ..

UAE welcomes  Ashraf Ghani and family on a Humanitarian Grounds
ಅಶ್ರಫ್ ಘನಿ
author img

By

Published : Aug 18, 2021, 9:11 PM IST

ನವದೆಹಲಿ : ದೇಶವನ್ನು ತಾಲಿಬಾನ್​ ತನ್ನ ತೆಕ್ಕೆಗೆ ತೆಗೆದುಕೊಂಡ ನಂತ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪಲಾಯನ ಮಾಡಬೇಕಾಯ್ತು. ಇದೀಗ ಘನಿ ಹಾಗೂ ಅವರ ಕುಟುಂಬವನ್ನು ತಮ್ಮ ದೇಶಕ್ಕೆ ಸ್ವಾಗತಿಸಿರುವ ಯುನೈಟೆಡ್ ಅರಬ್ ಎಮಿರೇಟ್ಸ್,"ಮಾನವೀಯತೆಯ ನೆಲೆಗಟ್ಟಿನಲ್ಲಿ' ಘನಿ ಕುಟುಂಬಕ್ಕೆ ಆಶ್ರಯ ನೀಡುತ್ತಿರುವುದಾಗಿ ತಿಳಿಸಿದೆ.

ಯುಎಇ ವಿದೇಶಾಂಗ ವ್ಯವಹಾರಗಳು ಮತ್ತು ಅಂತಾರಾಷ್ಟ್ರೀಯ ಸಹಕಾರ ಸಚಿವಾಲಯವು ಅಶ್ರಫ್ ಘನಿ ಮತ್ತು ಅವರ ಕುಟುಂಬವನ್ನು ಮಾನವೀಯ ನೆಲೆಯಲ್ಲಿ ದೇಶಕ್ಕೆ ಸ್ವಾಗತಿಸಿದೆ ಎಂದು ತನ್ನ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ. ಘನಿ ಭಾನುವಾರ ಅಫ್ಘಾನಿಸ್ತಾನದಿಂದ ಪಲಾಯನ ಮಾಡಿದರು.

ತಾವು ದೇಶಬಿಟ್ಟಿದ್ದರ ಕುರಿತು ಘನಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ, "ತಾಲಿಬಾನ್‌ಗಳು ಗೆದ್ದಿದ್ದಾರೆ" ಮತ್ತು "ರಕ್ತಪಾತದ ಪ್ರವಾಹ"ವನ್ನು ತಪ್ಪಿಸಲು ತಾನು ಪಲಾಯನ ಮಾಡಿದ್ದಾಗಿ ಹೇಳಿದ್ದಾರೆ. ಬುಧವಾರದವರೆಗೂ ಘನಿ ಎಲ್ಲಿದ್ದಾರೆ ಎಂಬುದು ತಿಳಿದಿರಲಿಲ್ಲ, ಅವರು ತಾಜಿಕ್ತಾನ್, ಉಜ್ಬೇಕಿಸ್ತಾನ್ ಅಥವಾ ಒಮಾನ್ ಗೆ ಪಲಾಯನ ಮಾಡಿದ್ದಾನೆ ಎಂದು ಊಹಿಸಲಾಗಿತ್ತು.

ಇದನ್ನೂ ಓದಿ:ಕಾಬೂಲ್ ವಿಶ್ವವಿದ್ಯಾಲಯದಲ್ಲಿ ಸಿಲುಕಿಕೊಂಡ ಭಾರತೀಯ ಶಿಕ್ಷಕರು.. ಸ್ಥಳಾಂತರಕ್ಕಾಗಿ ಸರ್ಕಾರದ ಮೊರೆ

ತೈಲ ಸಂಪದ್ಭರಿತ ಗಲ್ಫ್ ದೇಶವು ತನ್ನ ಮಾಜಿ ನಾಯಕ ಮತ್ತು ಅವರ ಸಂಬಂಧಿಕರಿಗೆ ತನ್ನ ತೋಳುಗಳನ್ನು ಚಾಚುತ್ತಿರುವುದು ಇದೇ ಮೊದಲಲ್ಲ. 2017ರಲ್ಲಿ, ದುಬೈನ ಎಮಿರೇಟ್ ಮಾಜಿ ಥಾಯ್ ಪ್ರಧಾನಿ, 5 ವರ್ಷ ಜೈಲುಶಿಕ್ಷೆಗೆ ಗುರಿಯಾಗಿದ್ದ ಯಿಂಗ್ಲಕ್ ಶಿನವತ್ರಾ ಅವರಿಗೂ ಆಶ್ರಯ ನೀಡಿತ್ತು.

ಸ್ಪೇನ್ ರಾಜ ಜುವಾನ್ ಕಾರ್ಲೋಸ್ ಕಳೆದ ವರ್ಷ ಆಗಸ್ಟ್‌ನಲ್ಲಿ ಗಡಿ ಪಾರಾಗಿ ಯುಎಇಗೆ ಹೋದರು. ಯುಎಇ ಪಾಕಿಸ್ತಾನದ ವಿರೋಧ ಪಕ್ಷದ ನಾಯಕಿ ಬೆನಝಿರ್​​ ಭುಟ್ಟೋ 2007ರಲ್ಲಿ ತಾಯ್ನಾಡಿನಲ್ಲಿ ಹತ್ಯೆಯಾಗುವ ಮುನ್ನ ಅವರು, ತನ್ನ ಎಂಟು ವರ್ಷಗಳ ವನವಾಸವನ್ನ ಯುಎಇಯಲ್ಲಿ ಕಳೆದಿದ್ದರು.

ಈ ಹಿಂದೆ 1996 ರಿಂದ 2001ರವರೆಗೆ ತಾಲಿಬಾನ್​ ಆಡಳಿತಕ್ಕೆ ಬೆಂಬಲ ನೀಡಿದ ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ ಸೇರಿದಂತೆ ಮೂರು ರಾಷ್ಟ್ರಗಳಲ್ಲಿ ಯುಎಇ ಸಹ ಒಂದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.