ದುಬೈ: ಅರಬ್ ಸಂಯುಕ್ತ ರಾಷ್ಟ್ರದಲ್ಲಿ ಮೊದಲ ಹಿಂದೂ ದೇಗುಲ ತಲೆ ಎತ್ತಲಿದ್ದು, ಸರಿಮಾರು 13.5 ಎಕರೆ ಜಮೀನಿನಲ್ಲಿ ನಿರ್ಮಾಣಗೊಳ್ಳಲಿರುವ ಈ ದೇವಸ್ಥಾನದ ಶಂಕುಸ್ಥಾಪನೆ 2018ರಲ್ಲೇ ನಡೆದಿದೆ. ಇದೀಗ ಅದರ ಅಡಿಪಾಯ ಹಾಕುವ ಕೆಲಸ ಆರಂಭಗೊಂಡಿದೆ.
-
Concrete laid for Swami Narayan Temple in UAE @Dr_BR_Shetty @BAPS_PubAffairs pic.twitter.com/CpXgNsWadI
— Bhaskar Gogoi (@BhaskarGogoi) February 13, 2020 " class="align-text-top noRightClick twitterSection" data="
">Concrete laid for Swami Narayan Temple in UAE @Dr_BR_Shetty @BAPS_PubAffairs pic.twitter.com/CpXgNsWadI
— Bhaskar Gogoi (@BhaskarGogoi) February 13, 2020Concrete laid for Swami Narayan Temple in UAE @Dr_BR_Shetty @BAPS_PubAffairs pic.twitter.com/CpXgNsWadI
— Bhaskar Gogoi (@BhaskarGogoi) February 13, 2020
ಯುಎಇ ಭಾರತೀಯ ರಾಯಭಾರಿ ಪವನ್ ಕಪೂರ್ ಮತ್ತು ದುಬೈನ್ ಭಾರತದ ಕಾನ್ಸುಲ್ ಜನರಲ್ ಹಾಗೂ ದೇವಾಲಯ ಅಭಿವೃದ್ಧಿ ಪ್ರಾಧಿಕಾರದ ಸಿಇಒ ಓಮರ್ ಅಲ್ ಮಥನ್ನಾ ಉಪಸ್ಥಿತಿಯಲ್ಲಿ ಈ ಕೆಲಸ ನಡೆದಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ರೀ ಅಕ್ಷರ್ ಪುರುಷೋತ್ತಮ್ ಸ್ವಾಮಿನಾರಾಯಣ್ ಸಂತ್ ದೇವಾಲಯದ ಉದ್ಘಾಟನಾ ಕಾರ್ಯ ನಡೆಸಿದ್ದರು. ಇದಾದ ಬಳಿಕ ಕಳೆದ ವರ್ಷ ಫೆಬ್ರವರಿಯಲ್ಲಿ ಯುಎಇಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೋದಿ ದೇವಾಲಯದ ಪ್ರತಿಕೃತಿ ಅನಾವರಣಗೊಳಿಸಿದ್ದರು. 2018ರ ಫೆ. 11ರಂದು ಭೂಮಿ ಶುದ್ಧೀಕರಣ ಕಾರ್ಯ ನಡೆದಿತ್ತು. 13.5 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುವ ಈ ದೇವಾಲಯ ಸಂಕೀರ್ಣಕ್ಕೆ ಅಬುದಾಬಿ ದೊರೆ ಭೂಮಿ ನೀಡಿದ್ದಾರೆ.
ರಾಜಸ್ಥಾನದಿಂದ ಕೆಂಪು ಕಲ್ಲು ಮತ್ತು ಮೆಸಡೋನಿಯಾದಿಂದ ಅಮೃತಶಿಲೆಯನ್ನು ದೇವಾಲಯ ನಿರ್ಮಾಣಕ್ಕೆ ಬಳಸಲಾಗುತ್ತದೆ. ಯುಎಇಯ ಏಳು ರಾಜ್ಯಗಳ ಸಂಕೇತವಾಗಿ ಏಳು ಗೋಪುರಗಳ ಇದು ಹೊಂದಿರಲಿದೆ.