ಒಸಾಕ(ಜಪಾನ್): ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ಜಿ-20 ಶೃಂಗಸಭೆ ಜಪಾನಿನ ಒಸಾಕದಲ್ಲಿ ಆರಂಭವಾಗಿದ್ದು, ಭಯೋತ್ಪಾದನೆ ನಿಗ್ರಹ ಹಾಗೂ ಜಾಗತಿಕ ಮಟ್ಟದಲ್ಲಿ ವಾಣಿಜ್ಯ ವ್ಯವಹಾರ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
-
In Osaka, Modi says terrorism the 'biggest threat' to humanity
— ANI Digital (@ani_digital) June 28, 2019 " class="align-text-top noRightClick twitterSection" data="
Read @ANI story | https://t.co/QIPlhZjkY2 pic.twitter.com/ITmtpyjsVV
">In Osaka, Modi says terrorism the 'biggest threat' to humanity
— ANI Digital (@ani_digital) June 28, 2019
Read @ANI story | https://t.co/QIPlhZjkY2 pic.twitter.com/ITmtpyjsVVIn Osaka, Modi says terrorism the 'biggest threat' to humanity
— ANI Digital (@ani_digital) June 28, 2019
Read @ANI story | https://t.co/QIPlhZjkY2 pic.twitter.com/ITmtpyjsVV
ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಯೋತ್ಪಾದನೆ ಮಟ್ಟ ಹಾಕುವ ಬಗ್ಗೆ ಗಟ್ಟಿ ದನಿ ಎತ್ತಿದ್ದು, ಜಿ-20 ಸದಸ್ಯ ರಾಷ್ಟ್ರಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸಿವೆ. ಭಯೋತ್ಪಾದಕ ಕೃತ್ಯಗಳಿಂದ ಅಮಾಯಕರ ಸಾವು ಮಾತ್ರವಲ್ಲದೇ ಒಂದು ದೇಶದ ಆರ್ಥಿಕತೆ ಹಾಗೂ ಸಾಮಾಜಿಕ ಸ್ಥಿರತೆಯ ಮೇಲೂ ಹೊಡೆತ ಬೀಳುತ್ತದೆ ಎಂದು ಮೋದಿ ಹೇಳಿದ್ದಾರೆ.
ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ (ಬ್ರಿಕ್ಸ್) ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಯೋತ್ಪಾದನೆ ಹಾಗೂ ಆನ್ಲೈನ್ ಉಗ್ರತ್ವದ ಬಗ್ಗೆ ಹೋರಾಡುವ ಶಪಥ ಮಾಡಿದ್ದಾರೆ.
ಟ್ರಂಪ್ - ಮೋದಿ ಮಾತುಕತೆ:
ಜಿ-20 ಶೃಂಗಸಭೆ ವೇಳೆ ಟ್ರಂಪ್ ಹಾಗೂ ಮೋದಿ ಮಾತುಕತೆ ನಡೆಸಿದ್ದು, ವಾಣಿಜ್ಯ ವ್ಯವಹಾರದಲ್ಲಿ ಒಂದಾಗಿ ಕಾರ್ಯನಿರ್ವಹಿಸೋಣ ಎಂದು ಟ್ರಂಪ್ ಹೇಳಿದ್ದಾರೆ.
ರಷ್ಯಾದಿಂದ ಭಾರತಕ್ಕೆ ಎಸ್ - 400 ಮಿಸೈಲ್ ಆಮದು ಮಾಡಿಕೊಳ್ಳುವ ಒಪ್ಪಂದಕ್ಕೆ ಅಮೆರಿಕ ತಕರಾರು ಎತ್ತಿತ್ತು. ಇದು ಟ್ರಂಪ್-ಮೋದಿ ಭೇಟಿ ವೇಳೆ ಚರ್ಚೆಗೆ ಬರಲಿದೆ ಎನ್ನಲಾಗಿತ್ತು. ಆದರೆ, ಇಂದಿನ ಮಾತುಕತೆಯಲ್ಲಿ ಈ ವಿಷಯ ಪ್ರಸ್ತಾಪವಾಗಿಲ್ಲ ಎಂದು ತಿಳಿದು ಬಂದಿದೆ. ದೇಶದ ಹಿತಾಸಕ್ತಿಗೆ ಭಾರತ ಈ ಒಪ್ಪಂದ ಮಾಡಿಕೊಂಡಿದೆ ಎಂದು ಮಾತುಕತೆಗೂ ಮುನ್ನ ಭಾರತೀಯ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿತ್ತು.