ETV Bharat / international

ಬುರ್ಕಾ ಕಡ್ಡಾಯವಲ್ಲ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಡ್ಡಿ ಮಾಡುವುದಿಲ್ಲ: ತಾಲಿಬಾನ್ ವಕ್ತಾರ

ನಮ್ಮ ಸರ್ಕಾರದಲ್ಲಿ ಮಹಿಳೆಯರು ಬುರ್ಕಾ ಧರಿಸುವುದನ್ನು ಕಡ್ಡಾಯ ಮಾಡುವುದಿಲ್ಲ ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ತಾಲಿಬಾನ್ ವಕ್ತಾರ ಹೇಳಿದ್ದಾನೆ.

author img

By

Published : Aug 18, 2021, 11:49 AM IST

Taliban Say Burqa Not Mandatory For Women
ಬುರ್ಕಾ ಕಡ್ಡಾಯವಲ್ಲ

ದೋಹಾ: ಈ ಹಿಂದೆ ಅಧಿಕಾರದಲ್ಲಿದ್ದಾಗ ಮಾಡಿದಂತೆ ಈ ಬಾರಿ ಮಹಿಳೆಯರು ಸಂಪೂರ್ಣ ಬುರ್ಕಾ ಧರಿಸುವುದನ್ನು ಕಡ್ಡಾಯ ಮಾಡುವುದಿಲ್ಲ ಎಂದು ತಾಲಿಬಾನ್ ಹೇಳಿದೆ. ಅಫ್ಘಾನಿಸ್ತಾನ ತಮ್ಮ ಕೈವಶವಾದ ಬಳಿಕ ಮೊದಲ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ತಾಲಿಬಾನ್ ನಾಯಕರು ಈ ವಿಷಯವನ್ನು ಹೇಳಿದ್ದಾರೆ.

ಈ ಹಿಂದೆ 1996 ರಿಂದ 2001 ರವರೆಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಧಿಕಾರವಿದ್ದಾಗ ಹೆಣ್ಣು ಮಕ್ಕಳ ಶಾಲೆಗಳನ್ನು ಮುಚ್ಚಲಾಗಿತ್ತು. ಮಹಿಳೆಯರು ಕೆಲಸಕ್ಕೆ ಹೋಗುವುದು ಮತ್ತು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವುದಕ್ಕೆ ನಿರ್ಬಂಧ ಹೇರಲಾಗಿತ್ತು. ಅಲ್ಲದೆ, ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಸಂಪೂರ್ಣ ಬುರ್ಕಾ ಧರಿಸುವುದನ್ನು ಕಡ್ಡಾಯ ಮಾಡಲಾಗಿತ್ತು.

ಬುರ್ಕಾ ಮಾತ್ರ ಹಿಜಾಬ್ ಅಲ್ಲ, ಹಿಜಾಬ್​ಗಳಲ್ಲಿ ಬುರ್ಕಾ ಒಂದು ವಿಧ ಮಾತ್ರ. ಅದರಲ್ಲಿ ತುಂಬಾ ವಿಧಗಳಿವೆ ಎಂದು ತಾಲಿಬಾಬ್ ರಾಜಕೀಯ ವಕ್ತಾರ ಸುಹೈಲ್ ಶಾಹೀನ್ ಕತಾರ್​ನ ದೋಹಾದ ತನ್ನ ಕಚೇರಿಯಲ್ಲಿ ಬ್ರಿಟಿಷ್ ಸ್ಕೈ ನ್ಯೂಸ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾನೆ. ತಾಲಿಬಾನ್ ಒಪ್ಪುವ ಹಿಜಾಬ್ ಯಾವುದು ಎಂದು ಶಾಹಿನ್ ಸ್ಪಷ್ಟಪಡಿಸಿಲ್ಲ.

ಇದನ್ನೂ ಓದಿ: ಕತಾರ್‌ನಿಂದ ಅಫ್ಘಾನ್‌ಗೆ ಪ್ರಯಾಣಿಸಿದ ತಾಲಿಬಾನ್‌ ತಂತ್ರಗಾರ ಮುಲ್ಲಾ ಅಬ್ದುಲ್ ಘನಿ

ಬುರ್ಕಾದ ಬಗ್ಗೆ ತಾಲಿಬಾನ್ ಕಾಳಜಿ ತೋರುತ್ತಿದ್ದಂತೆ, ಅಫ್ಘಾನ್​ನಲ್ಲಿ ಮಹಿಳೆಯರ ಹಕ್ಕು ಮತ್ತು ಶಿಕ್ಷಣದ ಭವಿಷ್ಯದ ಬಗ್ಗೆ ಹಲವು ರಾಷ್ಟ್ರಗಳು ಮತ್ತು ಮಾನವ ಹಕ್ಕು ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ. ಆದರೆ, ಈ ವಿಷಯದ ಬಗ್ಗೆ ಸುಹೈಲ್​ ಶಾಹಿನ್ ಭರವಸೆ ನೀಡುವ ಪ್ರಯತ್ನ ಮಾಡಿದ್ದಾನೆ.

ಮಹಿಳೆಯರು ಪ್ರಾಥಮಿಕದಿಂದ ಉನ್ನತಮಟ್ಟದವರೆಗೆ ಶಿಕ್ಷಣವನ್ನು ಪಡೆಯಬಹುದು. ಇದಕ್ಕೋಸ್ಕರ ನಾವು ಮಾಸ್ಕೋ ಮತ್ತು ದೋಹಾದಲ್ಲಿ ನಡೆದ ಸಮಾವೇಶದಲ್ಲಿ ನೀತಿಯನ್ನು ಘೋಷಿಸಿದ್ದೇವೆ. ತಾಲಿಬಾನ್ ವಶಪಡಿಸಿಕೊಂಡ ಪ್ರದೇಶಗಳಲ್ಲಿ ಸಾವಿರಾರು ಶಾಲೆಗಳು ಇನ್ನೂ ಕಾರ್ಯನಿರ್ವಹಿಸುತ್ತಿವೆ ಎಂದು ಎಂದು ಶಾಹಿನ್ ಹೇಳಿದ್ದಾನೆ.

ಈ ಹಿಂದಿನ ತಾಲಿಬಾನ್​ ಸರ್ಕಾರದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಕಠಿಣ ಕ್ರಮಗಳನ್ನು ರೂಪಿಸಲಾಗಿತ್ತು. ತಾಲಿಬಾನ್ ನ್ಯಾಯಾಲಯ ಕಳ್ಳರ ಕೈ ಕಡಿಯುವುದು, ಮಹಿಳೆಯರನ್ನು ಕಲ್ಲು ಹೊಡೆದು ಕೊಲ್ಲುವಂತಹ ಶಿಕ್ಷೆಗಳನ್ನು ನೀಡುತ್ತಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.