ಕಾಬೂಲ್: ಶಾಂತಿ ಮಾತುಕತೆಗೆ ಮುಂಚಿತವಾಗಿ 1,500 ಕೈದಿಗಳನ್ನು ಬಿಡುಗಡೆ ಮಾಡುವ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ನೀಡಿದ ಪ್ರಸ್ತಾಪವನ್ನು ತಾಲಿಬಾನ್ ತಿರಸ್ಕರಿಸಿದೆ.
-
#BREAKING Taliban rejects Afghan president's offer to release 1,500 prisoners ahead of peace talks, saying it wants 5,000 captives freed pic.twitter.com/MVfV58HiT1
— AFP news agency (@AFP) March 11, 2020 " class="align-text-top noRightClick twitterSection" data="
">#BREAKING Taliban rejects Afghan president's offer to release 1,500 prisoners ahead of peace talks, saying it wants 5,000 captives freed pic.twitter.com/MVfV58HiT1
— AFP news agency (@AFP) March 11, 2020#BREAKING Taliban rejects Afghan president's offer to release 1,500 prisoners ahead of peace talks, saying it wants 5,000 captives freed pic.twitter.com/MVfV58HiT1
— AFP news agency (@AFP) March 11, 2020
ಕಳೆದು ತಿಂಗಳು ನಡೆದಿದ್ದ ತಾಲಿಬಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮದ ಶಾಂತಿ ಒಪ್ಪಂದದ ಭಾಗವಾದ ತಾಲಿಬಾನ್ ಕೈದಿಗಳ ಬಿಡುಗಡೆಗೆ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಸಹಿ ಹಾಕಿದ್ದರು. ಹೀಗಾಗಿ ಶಾಂತಿ ಮಾತುಕತೆಗೂ ಮೊದಲು ತಾಲಿಬಾನ್ನ 1,500 ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಅಫ್ಘನ್ ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿರುವ ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್, ತಾಲಿಬಾನ್ ಮತ್ತು ಅಫ್ಘನ್ ನಡುವಿನ ಮಾತುಕತೆಗೂ ಮೊದಲು 'ನಂಬಿಕೆಯನ್ನು ಬೆಳೆಸುವ ಕ್ರಮವಾಗಿ' 5,000 ಕೈದಿಗಳನ್ನು ಬಿಡುಗಡೆ ಮಾಡಬೇಕೆಂದು ಹೇಳಿದ್ದಾರೆ.
ಕಳೆದ ತಿಂಗಳು ದೋಹಾದಲ್ಲಿ ತಾಲಿಬಾನ್ ಮತ್ತು ಅಮೆರಿಕ ನಡುವೆ ನಡೆದ ಒಪ್ಪಂದ ಉಲ್ಲಂಘನೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.