ETV Bharat / international

ಆಫ್ಘನ್​ನಲ್ಲಿ ಈ ಹಿಂದಿನ ಕಠಿಣ ಶಿಕ್ಷೆ, ಮರಣದಂಡನೆಗಳ ನಿಯಮ ಜಾರಿ: ತಾಲಿಬಾನ್

ಅಫ್ಘಾನಿಸ್ತಾನದಲ್ಲಿ ಈ ಹಿಂದೆ ಜಾರಿಗೊಳಿಸಲಾಗಿದ್ದ ಶಿಕ್ಷೆಗಳನ್ನೇ ಜಾರಿಗೊಳಿಸಲು ತಾಲಿಬಾನ್ ಸರ್ಕಾರ ಮುಂದಾಗಿದೆ.

ಮುಲ್ಲಾ ನೂರುದ್ದೀನ್ ತುರಾಬಿ
ಮುಲ್ಲಾ ನೂರುದ್ದೀನ್ ತುರಾಬಿ
author img

By

Published : Sep 24, 2021, 8:05 AM IST

ಕಾಬೂಲ್: ಆಫ್ಘನ್​ನಲ್ಲಿ 1990ರ ದಶಕದಲ್ಲಿದ್ದ ಶಿಕ್ಷೆಗಳನ್ನು(ಮರಣದಂಡನೆ ಮತ್ತು ಕೈಗಳನ್ನು ಕತ್ತರಿಸುವುದು) ಜಾರಿಗೊಳಿಸಲು ತಾಲಿಬಾನ್ ಯೋಜಿಸಿದೆ. ಆದರೆ ಇದು ಸಾರ್ವಜನಿಕವಾಗಿ ಅಲ್ಲ ಎಂದು ತಾಲಿಬಾನ್​ ಸಂಸ್ಥಾಪಕರಲ್ಲಿ ಒಬ್ಬರಾದ ಮುಲ್ಲಾ ನೂರುದ್ದೀನ್ ತುರಾಬಿ ಹೇಳಿದ್ದಾರೆ.

ಆಫ್ಘನ್​ನಲ್ಲಿನ ಸದ್ಯದ ಪರಿಸ್ಥಿತಿ ಹಾಗೂ ತಾಲಿಬಾನ್​ ಆಡಳಿತ ವೈಖರಿ ಕುರಿತಂತೆ ಮಾತನಾಡಿರುವ ಮುಲ್ಲಾ ನೂರುದ್ದೀನ್ ತುರಾಬಿ, ಆಫ್ಘನ್​ನ ಹೊಸ ಸರ್ಕಾರದಲ್ಲಿ ಯಾರೂ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಜಗತ್ತಿಗೆ ಎಚ್ಚರಿಕೆ ನೀಡಿದ್ದಾರೆ.

ನಾವು ಈ ಹಿಂದೆಯೂ ಆಫ್ಘನ್​ನಲ್ಲಿ ಆಡಳಿತ ನಡೆಸಿದ್ದೇವೆ. ಆಗ ಜನರನ್ನೆಲ್ಲ ಕ್ರೀಡಾಂಗಣದಲ್ಲಿ ಸೇರಿಸಿ ಎಲ್ಲರೆದುರು ಆರೋಪಿಗೆ ಮರಣದಂಡನೆ ವಿಧಿಸುತ್ತಿದ್ದೆವು. ಶಿಕ್ಷೆ ವಿಧಿಸಿದ್ದಕ್ಕಾಗಿ ಎಲ್ಲರೂ ನಮ್ಮನ್ನು ಟೀಕಿಸಿದರು. ನಮ್ಮ ಕಾನೂನುಗಳು ಹೇಗಿರಬೇಕೆಂದು ನಮಗೆ ಯಾರೂ ಹೇಳಿಲ್ಲ. ನಾವು ಇಸ್ಲಾಂ ಅನ್ನು ಅನುಸರಿಸುತ್ತೇವೆ. ಕುರಾನ್​ನಲ್ಲಿರುವ ಕಾನೂನುಗಳ ಮೂಲಕ ಆಡಳಿತ ನಡೆಸುತ್ತೇವೆ ಎಂದರು.

ತಾಲಿಬಾನ್​, ಕಾಬೂಲ್​​ ವಶಪಡಿಸಿಕೊಂಡ ಬಳಿಕ, ದೇಶದಲ್ಲಿ 1990 ರ ದಶಕದ ನಿಯಮಗಳು ಎಲ್ಲಿ ಜಾರಿಯಾಗುತ್ತವೋ ಎಂದು ಜನ ಭೀತಿಯಲ್ಲಿ ಬದುಕುತ್ತಿದ್ದಾರೆ. ಈ ಮಧ್ಯೆ, ತುರಾಬಿಯವರ ಈ ಹೇಳಿಕೆ ಜನರಲ್ಲಿ ಮತ್ತಷ್ಟು ಆತಂಕವನ್ನುಂಟು ಮಾಡಿದೆ.

ತುರಾಬಿ, 60 ರ ದಶಕದ ಆರಂಭದಲ್ಲಿ, ನ್ಯಾಯ ಸಚಿವರಾಗಿದ್ದರು. ತಾಲಿಬಾನಿಗರ ಹಿಂದಿನ ಆಳ್ವಿಕೆಯಲ್ಲಿ ಧರ್ಮದ ಪ್ರಚಾರ ಮತ್ತು ಧರ್ಮ ಪ್ರಚಾರ ತಡೆಗಟ್ಟುವ ಸಚಿವಾಲಯದ ಮುಖ್ಯಸ್ಥರಾಗಿದ್ದರು. ಆ ಸಮಯದಲ್ಲಿ, ಕಾಬೂಲ್‌ನ ಕ್ರೀಡಾಂಗಣದಲ್ಲಿ ಅಥವಾ ವಿಶಾಲವಾದ ಈದ್ಗಾ ಮಸೀದಿಯ ಮೈದಾನದಲ್ಲಿ ನಡೆಯುತ್ತಿದ್ದ ತಾಲಿಬಾನಿಗಳ ಶಿಕ್ಷೆಯನ್ನು ಇಡೀ ಜಗತ್ತೇ ಖಂಡಿಸಿತ್ತು.

ಕರಾಳ ಕಾನೂನಿನ ಒಂದು ಉದಾಹರಣೆ ಇದು

ಕೊಲೆಗಾರರ ಮರಣದಂಡನೆಯನ್ನು ಹತ್ಯೆಗೀಡಾಗಿದ್ದ ವ್ಯಕ್ತಿಯ ಕುಟುಂಬಸ್ಥರೇ ನಡೆಸಬೇಕು. ದರೋಡೆ ಮಾಡಿದವರ ಕೈ ಹಾಗೂ ಪಾದ ಕತ್ತರಿಸಿ ಶಿಕ್ಷಿಸುತ್ತಾರೆ. ನ್ಯಾಯಾಂಗವು ಇಸ್ಲಾಮಿಕ್ ಪಾದ್ರಿಗಳ ಪರವಾಗಿತ್ತು. ಅವರ ಕಾನೂನಿನ ಜ್ಞಾನವು ಧಾರ್ಮಿಕ ನಿರ್ಬಂಧಗಳಿಗೆ ಮಾತ್ರ ಸೀಮಿತವಾಗಿತ್ತು.

ಈ ಬಾರಿ ಮಹಿಳೆಯರು ಸೇರಿದಂತೆ ನ್ಯಾಯಾಧೀಶರು ಪ್ರಕರಣಗಳಿಗೆ ತೀರ್ಪು ನೀಡುತ್ತಾರೆ. ಆದರೆ, ಅಫ್ಘಾನಿಸ್ತಾನದ ಕಾನೂನುಗಳ ಅಡಿಪಾಯ ಕುರಾನ್ ಆಗಿರುತ್ತದೆ. ಶಿಕ್ಷೆಗಳು ಹಿಂದಿನಂತೆಯೇ ಇರುತ್ತದೆ ಎಂದು ತುರಾಬಿ ಹೇಳಿದ್ದಾರೆ.

ಶಿಕ್ಷೆ ಹೇಗಿರಬೇಕು.. ಹೊಸ ನೀತಿ ರೂಪಿಸಲು ಅಧ್ಯಯನ

ಸಚಿವ ಸಂಪುಟವು ಸಾರ್ವಜನಿಕವಾಗಿ ಶಿಕ್ಷೆಗಳನ್ನು ವಿಧಿಸಬೇಕೇ ಅಥವಾ ಹೊಸ ನೀತಿಯನ್ನು ಅಭಿವೃದ್ಧಿಪಡಿಸಬೇಕೇ ಎಂದು ಅಧ್ಯಯನ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಾಬೂಲ್‌ನಲ್ಲಿ ಕಳ್ಳತನ ಮಾಡಿದವರಿಗೆ ಸಾಮಾನ್ಯ ಶಿಕ್ಷೆ ವಿಧಿಸಲಾಗುತ್ತಿತ್ತು. ಸದ್ಯ ಇದೇ ರೀತಿಯ ಶಿಕ್ಷೆಗಳು ಜಾರಿಯಲ್ಲಿವೆ. ಮುಂದಿನ ದಿನಗಳಲ್ಲಿ ಶಿಕ್ಷೆ ನೀಡುವ ವಿಧಾನಗಳು ಬದಲಾಗುವ ಸಾಧ್ಯತೆಯಿದೆ.

ಕಳೆದ ವಾರ ಕಳ್ಳತನದ ಆರೋಪ ಹೊರಿಸಿ ಹಲವಾರು ಜನರನ್ನು ಟ್ರಕ್​ಗೆ ತುಂಬಿಸಿ ಅವರ ಕೈ ಗಳನ್ನು ಕಟ್ಟಿ ಕಾಬೂಲ್ ತುಂಬಾ ಮೆರವಣಿಗೆ ಮಾಡಲಾಯ್ತು. ಅವರ ಮುಖಗಳಿಗೆ ಬಣ್ಣ ಬಳಿಯಲಾಗಿದ್ದು, ಬಾಯಿ ತುಂಬಾ ಬ್ರೆಡ್ ತುರುಕಲಾಗಿತ್ತು. ಆದರೆ, ಅವರು ಯಾವ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದರು ಎಂಬ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ: ಪೂರ್ವ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಮೇಲೆ ದಾಳಿ: ಐವರ ಸಾವು

ತುರಾಬಿ, 1980 ರಲ್ಲಿ ಸೋವಿಯತ್ ಸೈನ್ಯದೊಂದಿಗೆ ಹೋರಾಡುವಾಗ ಒಂದು ಕಾಲು ಮತ್ತು ಒಂದು ಕಣ್ಣನ್ನು ಕಳೆದುಕೊಂಡಿದ್ದಾರೆ. ಇವರು ಹೊಸ ತಾಲಿಬಾನ್ ಸರ್ಕಾರದ ಅಡಿಯಲ್ಲಿ ಕಾರಾಗೃಹಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.