ETV Bharat / international

ಉಗ್ರರ ಅಡಗುತಾಣಗಳ ಮೇಲೆ ಅಫ್ಘಾನ್​ ಪಡೆ ವೈಮಾನಿಕ ದಾಳಿ: 250ಕ್ಕೂ ಅಧಿಕ ಉಗ್ರರು ಹತ - ಅಫ್ಘಾನ್​ ಪಡೆ,

ತಾಲಿಬಾನ್​ ಉಗ್ರಪಡೆಗಳನ್ನು ಮಟ್ಟ ಹಾಕಲು ಅಫ್ಘಾನ್​​ ಪಡೆ ವಾಯುದಾಳಿ ನಡೆಸಿದ್ದು, ಕನಿಷ್ಠ 250 ಮಂದಿ ಉಗ್ರರು ಮೃತಪಟ್ಟಿದ್ದಾರೆ. 100 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಆಫ್ಘನ್​ ಪಡೆ ವೈಮಾನಿಕ ದಾಳಿ
ಆಫ್ಘನ್​ ಪಡೆ ವೈಮಾನಿಕ ದಾಳಿ
author img

By

Published : Aug 1, 2021, 3:10 PM IST

Updated : Aug 1, 2021, 3:42 PM IST

ಕಾಬೂಲ್ (ಅಫ್ಘಾನಿಸ್ತಾನ): ದೇಶದಲ್ಲಿ ತಾಲಿಬಾನ್​ ಹಾವಳಿ ಮಿತಿ ಮೀರಿದ್ದು, ಉಗ್ರಪಡೆಯನ್ನು ಹಿಮ್ಮೆಟ್ಟಿಸಲು ಅಫ್ಘಾನ್​ ಪಡೆ ವೈಮಾನಿಕ ದಾಳಿ ನಡೆಸುತ್ತಿದೆ. ಈ ದಾಳಿಯಲ್ಲಿ ಕೇವಲ ಬಂಡುಕೋರರು ಮಾತ್ರವಲ್ಲದೆ, ಜನಸಾಮಾನ್ಯರೂ ಸಾಯುತ್ತಿದ್ದಾರೆ. ಆದರೂ, ಭದ್ರತಾಪಡೆಗಳು ಉಗ್ರರ ಅಡಗುತಾಣಗಳ ಮೇಲೆ ದಾಳಿ ಮುಂದುವರಿಸಿವೆ.

  • 254 #Taliban terrorists were killed and 97 wounded as a result of #ANDSF operations in Ghazni, Kandahar, Herat, Farah, Jowzjan, Balkh, Samangan, Helmand, Takhar, Kunduz, Baghlan, Kabul & Kapisa provinces during the last 24 hours.

    Also, 13 IEDs were discovered & defused by #ANA. pic.twitter.com/XiEiOAOuph

    — Ministry of Defense, Afghanistan (@MoDAfghanistan) August 1, 2021 " class="align-text-top noRightClick twitterSection" data=" ">

ಅಫ್ಘಾನಿಸ್ತಾನ ಸರ್ಕಾರವು ಟ್ವಿಟ್ಟರ್​​ನಲ್ಲಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ತಾಲಿಬಾನ್​ ಉಗ್ರರ ಅಡಗುತಾಣಗಳ ಮೇಲೆ ರಕ್ಷಣಾ ಪಡೆಗಳು ವೈಮಾನಿಕ ದಾಳಿ ನಡೆಸಿವೆ. ಕಳೆದ 24 ಗಂಟೆಗಳಲ್ಲಿ ನಡೆದ ಈ ದಾಳಿಯಲ್ಲಿ ಕನಿಷ್ಠ 250 ಕ್ಕೂ ಹೆಚ್ಚು ಉಗ್ರರು ಹತರಾಗಿದ್ದರೆ, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ:ಕಂದಹಾರ್ ವಿಮಾನ ನಿಲ್ದಾಣದ ಮೇಲೆ ರಾಕೆಟ್ ದಾಳಿ: ದುಷ್ಕೃತ್ಯದ ಹಿಂದೆ ತಾಲಿಬಾನ್ ಕೈ

ಅಮೆರಿಕ ಮಿಲಿಟರಿ ಪಡೆ ದೇಶದಿಂದ ಹಿಂದೆ ಸರಿದ ನಂತರ ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಉಗ್ರರ ಹಾವಳಿ ಮಿತಿಮೀರಿದೆ. ಈವರೆಗೆ ಗ್ರಾಮೀಣ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಿದ್ದ ಉಗ್ರ ಪಡೆಗಳು ನಿಧಾನವಾಗಿ ನಗರಗಳನ್ನೂ ಸುತ್ತುವರಿಯುತ್ತಿವೆ. ಈ ಹಿನ್ನೆಲೆ ಶನಿವಾರ ತಡರಾತ್ರಿ ಅಫ್ಘಾನ್​ ಸೇನೆ, ತಾಲಿಬಾನ್ ಉಗ್ರರ ಅಡಗುತಾಣವಾದ ಕಂದಹಾರ್​ ಏರ್​ಪೋರ್ಟ್​ನಲ್ಲಿ ಮೂರು ರಾಕೆಟ್​ಗಳನ್ನು ಹಾರಿಸಿವೆ. ಇತ್ತೀಚಿನ ದಿನಗಳಲ್ಲಿ ತಾಲಿಬಾನ್​ ಪಡೆಗಳು ಹೆಲ್ಮಂಡ್ ಪ್ರಾಂತ್ಯದ ಲಷ್ಕರ್​ ಗಾಹ್​ ಸೇರಿ ಕನಿಷ್ಠ ಎರಡು ನಗರಗಳನ್ನು ಸುತ್ತುವರಿದಿದ್ದವು.

Last Updated : Aug 1, 2021, 3:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.