ETV Bharat / international

ಅಫ್ಘನ್​ನಲ್ಲಿ ಆತ್ಮಾಹುತಿ ಟ್ರಕ್‌ ಬಾಂಬರ್​​ ದಾಳಿ: 21 ಮಂದಿ ಸಾವು, 90 ಜನರಿಗೆ ಗಾಯ - ಲೋಗರ್ ಪ್ರಾಂತ್ಯ

ಅಫ್ಘಾನಿಸ್ತಾನದ ಲೋಗರ್ ಪ್ರಾಂತ್ಯದ ಗೆಸ್ಟ್​ ಹೌಸ್​ವೊಂದರ ಮೇಲೆ ನಡೆದ ಆತ್ಮಾಹುತಿ ಟ್ರಕ್‌ ಬಾಂಬರ್​​ ದಾಳಿಯಲ್ಲಿ 21 ಮಂದಿ ಸಾವನ್ನಪ್ಪಿದ್ದು, 90 ಜನರಿಗೆ ಗಾಯಗೊಂಡಿದ್ದಾರೆ.

Suicide truck bomber hits Afghan guest house
ಅಫ್ಘನ್​ನಲ್ಲಿ ಆತ್ಮಾಹುತಿ ಟ್ರಕ್‌ ಬಾಂಬ್‌ ದಾಳಿ
author img

By

Published : May 1, 2021, 10:46 AM IST

ಕಾಬೂಲ್ (ಅಫ್ಘಾನಿಸ್ತಾನ): ಪೂರ್ವ ಅಫ್ಘಾನಿಸ್ತಾನದ ಅತಿಥಿ ಗೃಹವೊಂದರ ಮೇಲೆ ಆತ್ಮಾಹುತಿ ಟ್ರಕ್‌ ಬಾಂಬರ್​ ದಾಳಿ ನಡೆಸಿದ್ದು, 21 ಮಂದಿ ಮೃತಪಟ್ಟಿದ್ದಾರೆ.

ಲೋಗರ್ ಪ್ರಾಂತ್ಯದ ರಾಜಧಾನಿಯಾದ ಪುಲ್-ಎ-ಆಲಂನಲ್ಲಿ ತಡರಾತ್ರಿ ಬಾಂಬ್ ಸ್ಫೋಟಿಸಿದೆ. ಘಟನೆಯಲ್ಲಿ 90 ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದುವರೆಗೂ ಯಾವುದೇ ಸಂಘಟನೆ ಕೃತ್ಯದ ಹೊಣೆ ಹೊತ್ತಿಲ್ಲ. ಆದರೆ ಅಫ್ಘನ್​ನ ಆಂತರಿಕ ವ್ಯವಹಾರಗಳ ಸಚಿವಾಲಯವು ತಾಲಿಬಾನ್​ ವಿರುದ್ಧ ಕೃತ್ಯದ ಆರೋಪ ಹೊರಿಸಿದ್ದು, ಇದಕ್ಕೆ ತಾಲಿಬಾನ್​ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಭಾರತದಿಂದ ಆಸ್ಟ್ರೇಲಿಯಾಕ್ಕೆ ಮರಳಿದರೆ 5 ವರ್ಷ ಜೈಲು ಶಿಕ್ಷೆ..!

ಅಫ್ಘಾನಿಸ್ತಾನದಲ್ಲಿ ಸರ್ಕಾರವು ಸಾಮಾನ್ಯವಾಗಿ ಅತಿಥಿ ಗೃಹಗಳನ್ನು ಬಡವರಿಗೆ, ಪ್ರಯಾಣಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತದೆ. ಗೆಸ್ಟ್​ ಹೌಸ್​ ಗುರಿಯಾಗಿಸಿಕೊಂಡು ಏಕೆ ದಾಳಿ ನಡೆಸಲಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.