ಇಂಡೋನೇಷ್ಯಾ: ಇಂಡೋನೇಷ್ಯಾದಲ್ಲಿ ಮತ್ತೆ ಭೂಕಂಪನ ಅಪ್ಪಳಿಸಿದ್ದು, ರಿಕ್ಟರ್ ಮಾಪಕದಲ್ಲಿ 6.5 ರಷ್ಟು ತೀವ್ರತೆ ದಾಖಲಾಗಿದೆ.
ಅಮೆರಿಕ ಭೂ ವಿಜ್ಞಾನ ಸಮೀಕ್ಷೆ (ಯುಎಸ್‌ಜಿಎಸ್) ವರದಿ ಪ್ರಕಾರ, ಮಧ್ಯ ಇಂಡೋನೇಷ್ಯಾದ ಮಾಲುಕು ಪ್ರಾಂತ್ಯದ ಸೆರಾಮ್ ದ್ವೀಪಗಳಿಗೆ 8 ಕಿ.ಮೀ ದೂರದಲ್ಲಿ ಹಾಗೂ ಸುಮಾರು 29.9 ಕಿ.ಮೀ ಆಳದಲ್ಲಿ ಭೂಕಂಪನ ಕೇಂದ್ರ ಬಿಂದು ದಾಖಲಾಗಿದೆ.
ಭೂಕಂಪನದಿಂದ ಯಾವುದೇ ಸಾವು - ನೋವು, ಹಾನಿ ಉಂಟಾಗಿರುವ ಬಗ್ಗೆ ಈವರೆಗೂ ತಿಳಿದು ಬಂದಿಲ್ಲ. ಹಾಗೆಯೇ ಯಾವುದೇ ಸುನಾಮಿಯ ಎಚ್ಚರಿಕೆಯನ್ನೂ ನೀಡಲಾಗಿಲ್ಲ.
ಇಂಡೋನೇಷ್ಯಾವು 'ರಿಂಗ್ ಆಫ್ ಫೈರ್' (ಬೆಂಕಿಯ ಉಂಗುರ) ಪ್ರದೇಶದಲ್ಲಿದ್ದು, ಇದು ಪೆಸಿಫಿಕ್ ಮಹಾಸಾಗರದ ಭಾಗವಾಗಿದೆ. ಹೀಗಾಗಿ ಇಂಡೋನೇಷ್ಯಾವು ಆಗಾಗ ಭೂಕಂಪ ಮತ್ತು ಜ್ವಾಲಾಮುಖಿ ಸ್ಫೋಟಗಳಿಗೆ ಗುರಿಯಾಗುತ್ತಿರುತ್ತದೆ.