ಕೊಲಂಬೋ(ಶ್ರೀಲಂಕಾ): ಆನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿದ ಘಟನೆ ಶ್ರೀಲಂಕಾದ ಆನೆ ಶಿಬಿರವೊಂದರಲ್ಲಿ ನಡೆದಿದೆ. 25 ವರ್ಷದ ಸುರಂಗಿ ಎಂಬ ಆನೆ ಎರಡು ಗಂಡು ಮರಿಗಳಿಗೆ ಜನ್ಮ ನೀಡಿದೆ.
ಪಿನ್ನವಾಲಾ ಆನೆ ಶಿಬಿರ ಈ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. 1941ರ ನಂತರ ಇದೇ ಮೊದಲ ಬಾರಿಗೆ ಆನೆ ಅವಳಿ ಮರಿಗಳಿಗೆ ಜನ್ಮ ನೀಡಿದೆ ಎಂದು ಆನೆ ತಜ್ಞ ಜಯಂತ ಜಯವರ್ಧನೆ ಅಭಿಪ್ರಾಯಪಟ್ಟಿದ್ದಾರೆ. ತಾಯಿ ಆನೆ ಮತ್ತು ಮರಿಗಳು ಆರೋಗ್ಯವಾಗಿವೆ ಎಂದು ಪಿನ್ನವಾಲಾ ಆನೆ ಶಿಬಿರದ ಮುಖ್ಯಸ್ಥೆ ರೇಣುಕಾ ಭಂಡಾರನಾಯ್ಕೆ ಎಎಫ್ಬಿಗೆ ಮಾಹಿತಿ ನೀಡಿದ್ದಾರೆ.
-
An elephant gave birth to twins for the first time in nearly 80 years in Sri Lanka, wildlife authorities said pic.twitter.com/p75mG5VkL7
— Reuters (@Reuters) September 1, 2021 " class="align-text-top noRightClick twitterSection" data="
">An elephant gave birth to twins for the first time in nearly 80 years in Sri Lanka, wildlife authorities said pic.twitter.com/p75mG5VkL7
— Reuters (@Reuters) September 1, 2021An elephant gave birth to twins for the first time in nearly 80 years in Sri Lanka, wildlife authorities said pic.twitter.com/p75mG5VkL7
— Reuters (@Reuters) September 1, 2021
2009ರಲ್ಲಿ ಸುರಂಗಿ ಆನೆಯು ಗಂಡು ಮರಿಗೆ ಜನ್ಮ ನೀಡಿತ್ತು. ಇದು ಎರಡನೇ ಬಾರಿಯಾಗಿದ್ದು, ಅವಳಿ ಮಕ್ಕಳಿಗೆ ಸುರಂಗಿ ಜನ್ಮ ನೀಡಿದ್ದಾಳೆ. ಆನೆ ಶಿಬಿರದಲ್ಲಿ ಸುಮಾರು 81 ಆನೆಗಳಿದ್ದು, 1975ರಲ್ಲಿ ಈ ಆನೆ ಶಿಬಿರ ಸ್ಥಾಪನೆಯಾಗಿದೆ.
ಪ್ರವಾಸಿಗರ ಆಕರ್ಷಣೆಯ ತಾಣವಾಗಿರುವ ಈ ಪಿನ್ನವಾಲಾ ಆನೆ ಶಿಬಿರದಲ್ಲಿ ಸದ್ಯಕ್ಕೆ ಕೊರೊನಾ ನಿಯಮಗಳನ್ನು ಕಠಿಣವಾಗಿ ಜಾರಿ ಮಾಡಲಾಗಿದ್ದು, ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಇದರಿಂದಾಗಿ ಅವಳಿ ಮರಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಪ್ರಾಣಿಪ್ರಿಯರಿಗೆ ತಪ್ಪಲಿದೆ.
ಅಧಿಕೃತ ದಾಖಲೆಗಳ ಪ್ರಕಾರ ಶ್ರೀಲಂಕಾದಲ್ಲಿ ಸುಮಾರು 200 ಸಾಕು ಆನೆಗಳು, 7,500 ಕಾಡಾನೆಗಳಿವೆ. ಕಾಡಾನೆಗಳ ರಕ್ಷಣೆಗೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ, ಆನೆಗಳ ಕಳವು ಯಥೇಚ್ಛವಾಗಿ ನಡೆಯುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಸುಳ್ಯದಲ್ಲಿ ವ್ಯಕ್ತಿಗೆ ಒಂದೇ ಬಾರಿಗೆ COVID ಡಬಲ್ ಡೋಸ್ ಲಸಿಕೆ.. ಮುಂದೇನಾಯ್ತು?