ಸಿಂಗಾಪುರ: ಸಿಂಗಾಪುರದ ಪ್ರಧಾನಿ ಲೀ ಸೀನ್ ಲೂಂಗ್ ಅವರು ಇಂದು ಸಂಸತ್ತಿನಲ್ಲಿ ಚರ್ಚೆಯಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಸ್ಮರಿಸಿದ್ದಾರೆ. ಸಂಸತ್ತಿನಲ್ಲಿ ನಗರ-ರಾಜ್ಯದಲ್ಲಿ ಪ್ರಜಾಪ್ರಭುತ್ವವು ಹೇಗೆ ಕಾರ್ಯನಿರ್ವಹಿಸಬೇಕು ಎಂದು ವಾದಿಸುತ್ತಿರುವಾಗ ನೆಹರು ಅವರ ಬಗ್ಗೆ ಉಲ್ಲೇಖವಾಗಿದೆ.
ಪ್ರತಿಪಕ್ಷ 'ವರ್ಕರ್ಸ್ ಪಾರ್ಟಿ'ಯ ಮಾಜಿ ಸಂಸದೆ ರಯೀಸ್ ಖಾನ್ ವಿರುದ್ಧ ಸಂಸತ್ತಿನಲ್ಲಿ ಸುಳ್ಳು ಹೇಳಿದ ವಿಚಾರವಾಗಿ ಮಾತನಾಡುತ್ತಾ ಲೀ ಸೀನ್ ಲೂಂಗಾ ಅವರು ನೆಹರೂ ಹಾಗೂ ಇಸ್ರೇಲ್ ಸ್ಥಾಪಕ ಮತ್ತು ಮೊದಲ ಪ್ರಧಾನಿ ಡೇವಿಡ್ ಬೆನ್ - ಗುರಿಯನ್ ಅವರನ್ನು ಉಲ್ಲೇಖಿಸಿದ್ದಾರೆ.
ಹೆಚ್ಚಿನ ದೇಶಗಳು ಉನ್ನತ ಆದರ್ಶಗಳು ಮತ್ತು ಉದಾತ್ತ ಮೌಲ್ಯಗಳ ಆಧಾರದ ಮೇಲೆ ಸ್ಥಾಪಿತವಾಗುತ್ತವೆ ಮತ್ತು ಪ್ರಾರಂಭವಾಗುತ್ತವೆ. ಆದರೆ, ಹೆಚ್ಚಾಗಿ ಸಂಸ್ಥಾಪಕ ನಾಯಕರು ಮತ್ತು ಪ್ರವರ್ತಕ ಪೀಳಿಗೆಯನ್ನು ಮೀರಿ ತಲೆಮಾರುಗಳ ನಂತರ ಕ್ರಮೇಣ ವಿಷಯಗಳು ಬದಲಾಗುತ್ತವೆ ಎಂದು ಲೀ ಹೇಳಿದರು.
-
Singapore PM invokes Nehru to argue how democracy should work during a parliamentary debate whereas our PM denigrates Nehru all the time inside and outside Parliament
— Jairam Ramesh (@Jairam_Ramesh) February 17, 2022 " class="align-text-top noRightClick twitterSection" data="
pic.twitter.com/B7WVhzxb9h
">Singapore PM invokes Nehru to argue how democracy should work during a parliamentary debate whereas our PM denigrates Nehru all the time inside and outside Parliament
— Jairam Ramesh (@Jairam_Ramesh) February 17, 2022
pic.twitter.com/B7WVhzxb9hSingapore PM invokes Nehru to argue how democracy should work during a parliamentary debate whereas our PM denigrates Nehru all the time inside and outside Parliament
— Jairam Ramesh (@Jairam_Ramesh) February 17, 2022
pic.twitter.com/B7WVhzxb9h
ರಾಷ್ಟ್ರ ನಿರ್ಮಾಣದಲ್ಲಿ ಉತ್ಸಾಹದ ತೀವ್ರತೆಯಿಂದ ಪ್ರಮುಖ ವಿಷಯಗಳು ಪ್ರಾರಂಭವಾಗುತ್ತವೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ಗೆದ್ದ ನಾಯಕರು ಸಾಮಾನ್ಯವಾಗಿ ಅಸಾಧಾರಣ ವ್ಯಕ್ತಿಗಳಾಗುತ್ತಾರೆ. ಅದರಂತೆ ಅಗಾಧವಾದ ಸಂಸ್ಕೃತಿ ಮತ್ತು ಮಹೋನ್ನತ ಸಾಮರ್ಥ್ಯಗಳು ಡೇವಿಡ್ ಬೆನ್ - ಗುರಿಯನ್ಸ್, ಜವಾಹರಲಾಲ್ ನೆಹರು ಬಳಿ ಇದ್ದವು. ಹಾಗೆಯೇ ನಾವು ಸಹ ನಮ್ಮದೇ ಆದ ನಾಯಕರನ್ನು ಹೊಂದಿದ್ದೇವೆ ಎಂದು ಸಂಸತ್ಗೆ ತಿಳಿಸಿದ್ದಾರೆ.
ಅವರು ಹೊಸ ಜಗತ್ತನ್ನು ನಿರ್ಮಿಸಲು ಮತ್ತು ಅವರ ಜನರಿಗೆ ಮತ್ತು ಅವರ ದೇಶಗಳಿಗೆ ಹೊಸ ಭವಿಷ್ಯ ರೂಪಿಸಲು ತಮ್ಮ ಜನರ ಹೆಚ್ಚಿನ ನಿರೀಕ್ಷೆಗಳನ್ನು ಪೂರೈಸಲು ಶ್ರಮಿಸಿದರು.ಆದರೆ, ನಂತರದ ಪೀಳಿಗೆಗಳು ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಕಷ್ಟಪಡುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಅಫ್ಘಾನ್ನಲ್ಲಿನ ಬೆಳವಣಿಗೆಗಳು ಮಧ್ಯ ಏಷ್ಯಾ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ: ಭಾರತ ಕಳವಳ
ರಾಜಕಾರಣಿಗಳ ಕಾರ್ಯವೈಖರಿ ಬದಲಾಗುತ್ತದೆ. ಜನರಿಗೆ ರಾಜಕಾರಣಿಗಳ ಮೇಲೆ ಗೌರವ ಕಡಿಮೆಯಾಗುತ್ತದೆ. ಚುನಾವಣೆಗಳು ಬಂದಾಗ ಹೆಚ್ಚಿನದ್ದೇನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಜನರು ಯೋಚಿಸುತ್ತಾರೆ. ಮಾನದಂಡದ ಗುಣಮಟ್ಟ ಕಡಿಮೆಯಾಗುತ್ತದೆ. ನಂಬಿಕೆ ನಾಶವಾಗುತ್ತದೆ ಎಂದರು.
ಬೆನ್-ಗುರಿಯನ್ ಅವರ ಇಸ್ರೇಲ್ ಚಿತ್ರಣವು ಸಹ ಬದಲಾಗಿದೆ. 2 ವರ್ಷದಲ್ಲಿ 4 ಚುನಾವಣೆ ನಡೆದಿದೆ. ಹಿರಿಯ ರಾಜಕಾರಣಿಗಳು ಮತ್ತು ಅಧಿಕಾರಿಗಳು ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಹಾಗೆಯೇ ನೆಹರೂ ಅವರ ಭಾರತದಲ್ಲಿ, ಲೋಕಸಭೆಯ ಸುಮಾರು ಅರ್ಧದಷ್ಟು ಸಂಸದರು ಅತ್ಯಾಚಾರ ಮತ್ತು ಕೊಲೆ ಸೇರಿದಂತೆ ಅನೇಕ ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಆ ಪ್ರಕರಣಗಳು ಇನ್ನೂ ಕೋರ್ಟ್‌ನಲ್ಲಿ ಬಾಕಿ ಇವೆ ಎಂದು ಉಲ್ಲೇಖಿಸಿದ್ದಾರೆ.