ಇಸ್ಲಾಮಾಬಾದ್: ಅನಾರೋಗ್ಯದಿಂದ ಬಳಲುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ವಿದೇಶಕ್ಕೆ ಕರೆದೊಯ್ಯುವ ಅಗತ್ಯವಿದೆ ಎಂದು ಷರೀಫ್ರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಹೇಳಿದ್ದಾರೆ.
69 ವರ್ಷದ ನವಾಜ್ ಷರೀಫ್ ಅ.22ರಂದು ಲಾಹೋರ್ನ ಸರ್ವೀಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲ ದಿನಗಳ ಹಿಂದೆ ಷರೀಫ್ ಅವರ ರಕ್ತಕಣಗಳ ಸಂಖ್ಯೆ ಗಣನೀಯ ಇಳಿಕೆಯಾಗಿತ್ತು.
ನವಾಜ್ ಷರೀಫ್, ತಮ್ಮ ಮಗಳ ಜೊತೆಗೆ ಆಸ್ಪತ್ರೆಯಿಂದ ತೆರಳುವ ಸಾಧ್ಯತೆ ಇದೆ. ಷರೀಫ್ ಪುತ್ರಿ ಮರ್ಯಾಮ್ ಚೌಧರಿ ಶುಗರ್ ಮಿಲ್ಸ್ ಭ್ರಷ್ಟಾಚಾರದಲ್ಲಿ ಸೋಮವಾರ ಜಾಮೀನು ಪಡೆದಿದ್ದಾರೆ.
ಷರೀಫ್ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು ವಿದೇಶದಲ್ಲಿ ಚಿಕಿತ್ಸೆ ನೀಡುವುದು ಅನಿವಾರ್ಯವಾಗಿದೆ. ಈ ಮೂಲಕ ಷರೀಫ್ ಅವರ ಅನಾರೋಗ್ಯಕ್ಕೆ ನಿರ್ದಿಷ್ಟ ಕಾರಣ ತಿಳಿಯಲಿದೆ ಎಂದು ಡಾಕ್ಟರ್ ಅಯಾಜ್ ಹೇಳಿದ್ದಾರೆ.