ETV Bharat / international

ಹಾಂಗ್ ಕಾಂಗ್​ನ ವ್ಯಕ್ತಿಗೆ 2ನೇ ಬಾರಿ ಅಂಟಿದ ಕೊರೊನಾ...  ಈ ಸೋಂಕಿನ ಲಕ್ಷಣ ವಿಭಿನ್ನ!

ವೈರಸ್​ ವಿರುದ್ಧದ ರೋಗ ನಿರೋಧಕ ಶಕ್ತಿ ಜೀವನ ಪರ್ಯಂತ ಇರುವುದಿಲ್ಲ ಎಂಬುದು ಇದರಿಂದ ಸಾಬೀತಾಗಿದೆ. ಕೋವಿಡ್​ ಸೋಂಕಿಗೆ ಒಳಗಾಗಿ ಅದರಿಂದ ಗುಣಮುಖನಾಗಿದ್ದ ವ್ಯಕ್ತಿಯೋರ್ವನಿಗೆ ಮತ್ತೊಮ್ಮೆ ಸೋಂಕು ದೃಢಪಟ್ಟಿದೆ.

man got coronavirus a second time
ಹಾಂಗ್ ಕಾಂಗ್​ನ ವ್ಯಕ್ತಿಗೆ 2ನೇ ಬಾರಿ ಅಂಟಿದ ಕೊರೊನಾ ಸೋಂಕು
author img

By

Published : Aug 25, 2020, 2:03 PM IST

ಹಾಂಗ್ ಕಾಂಗ್: ಒಂದು ಬಾರಿ ಕೋವಿಡ್​ ಸೋಂಕಿಗೆ ಒಳಗಾಗಿ ಅದರಿಂದ ಗುಣಮುಖನಾಗಿದ್ದ ಚೀನಾದ ಹಾಂಗ್ ಕಾಂಗ್ ಮೂಲದ ವ್ಯಕ್ತಿಯೋರ್ವನಿಗೆ ಇದೀಗ ಮತ್ತೊಮ್ಮೆ ವೈರಸ್​ ಅಂಟಿರುವುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.

ಒಂದು ಬಾರಿ ಕೊರೊನಾಗೆ ಒಳಗಾಗಿ ಗುಣಮುಖರಾದವರಿಗೆ ಮತ್ತೆ ಸೋಂಕು ತಗುಲುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗಿತ್ತು. ಆದರೆ ಈ ಕಲ್ಪನೆ ಸತ್ಯವಲ್ಲ ಹಾಗೂ ವೈರಸ್​ ವಿರುದ್ಧದ ರೋಗ ನಿರೋಧಕ ಶಕ್ತಿ ಜೀವನ ಪರ್ಯಂತ ಇರುವುದಿಲ್ಲ ಎಂಬುದು ಸಾಬೀತಾಗಿದೆ.

ಕೆಲ ದಿನಗಳ ಹಿಂದೆ ಸ್ಪೇನ್‌ನಿಂದ ಹಾಂಗ್ ಕಾಂಗ್‌ಗೆ ಹಿಂದಿರುಗಿದ್ದ 33 ವರ್ಷದ ವ್ಯಕ್ತಿಯೊಬ್ಬನಿಗೆ ಮತ್ತೆ ಸೋಂಕು ದೃಢಪಟ್ಟಿದೆ. ಈತನಿಗೆ ಕಳೆದ ಮಾರ್ಚ್​ನಲ್ಲಿ ಸೋಂಕು ತಗುಲಿ ಅದರಿಂದ ಚೇತರಿಸಿಕೊಂಡಿದ್ದ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಮೊದಲ ಬಾರಿಗಿಂತಲೂ ಎರಡನೇ ಬಾರಿಯ ಕೊರೊನಾ ವೈರಸ್​ ವಿಭಿನ್ನವಾಗಿದೆ ಎಂದು ಹಾಂಗ್ ಕಾಂಗ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಅಂದರೆ ಲಕ್ಷಣಗಳನ್ನಾಧರಿಸಿ O, A2, A2a, A3, B, B1 ಎಂದು ಹೀಗೆ ಒಟ್ಟು 11 ರೀತಿಯಲ್ಲಿ ಕೋವಿಡ್​ ವೈರಸ್​ಅನ್ನು ವಿಂಗಡಣೆ ಮಾಡಲಾಗಿದೆ. ಆದರೆ ಈ ವ್ಯಕ್ತಿಯಲ್ಲಿ 2ನೇ ಬಾರಿ ಕಾಣಿಸಿಕೊಂಡಿರುವ ವೈರಸ್​ ಇವೆಲ್ಲಾ ಲಕ್ಷಣಗಳಿಗಿಂತ ವಿಭಿನ್ನವಾಗಿದೆ.

ಹೀಗಾಗಿ ಒಮ್ಮೆ ಕೊರೊನಾ ಬಂದು ಹೋಗಿದೆಯೆಂದು ಯಾರೊಬ್ಬರೂ ಕೂಡ ನಿರ್ಲಕ್ಷ್ಯ ವಹಿಸಬಾರದು. ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳವುದು ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕೆಂದು ಆರೋಗ್ಯಾಧಿಕಾರಿಗಳು ಹೇಳುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.