ದುಬೈ: ವ್ಯಕ್ತಿಯೋರ್ವ ವೇಗವಾಗಿ ಕಾರನ್ನು ಚಲಿಸುತ್ತ ಬಂದು, ಮೆಕ್ಕಾದ ಗ್ರ್ಯಾಂಡ್ ಮಸೀದಿಯ ಹೊರಗಿನ ಗೇಟ್‌ಗಳಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ದೇಶದ ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಾತ್ರಿ 10:30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದು, ಗ್ರ್ಯಾಂಡ್ ಮಸೀದಿಯ ದಕ್ಷಿಣ ಭಾಗದಲ್ಲಿರುವ ಗೇಟ್ಗೆ ಕೂಡ ಡಿಕ್ಕಿ ಹೊಡೆದಿದೆ ಎಂದು ಸೌದಿ ಪ್ರೆಸ್ ಏಜೆನ್ಸಿ ತಿಳಿಸಿದೆ.
-
Car ploughs through Grand Mosque courtyard in Makkah, crashes into door#Makkah #MasjidilHaram#SaudiArabia pic.twitter.com/YeB3qQeFE9
— Mohammad Jamlish Roy (@jamlishofficial) October 31, 2020 " class="align-text-top noRightClick twitterSection" data="
">Car ploughs through Grand Mosque courtyard in Makkah, crashes into door#Makkah #MasjidilHaram#SaudiArabia pic.twitter.com/YeB3qQeFE9
— Mohammad Jamlish Roy (@jamlishofficial) October 31, 2020Car ploughs through Grand Mosque courtyard in Makkah, crashes into door#Makkah #MasjidilHaram#SaudiArabia pic.twitter.com/YeB3qQeFE9
— Mohammad Jamlish Roy (@jamlishofficial) October 31, 2020
ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸದ್ದು ಮಾಡುತ್ತಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಗ್ರ್ಯಾಂಡ್ ಮಸೀದಿಯನ್ನ ಮುಚ್ಚಲಾಗಿತ್ತು. ಇದೀಗ ಮಸೀದಿಯನ್ನ ತೆರೆಯಲಾಗಿದ್ದು, ದಿನಕ್ಕೆ ಐದು ಎಂದಿನಂತೆ ನವಾಜ್ ನಡೆಸಲಾಗುತ್ತಿದೆ. ಟಿವಿ ಸ್ಯಾಟಿಲೈಟ್ ದೃಶ್ಯಗಳಲ್ಲಿ ಈ ಕಾರು ಅಪಘಾತಕ್ಕೀಡಾಗುವ ಮುನ್ನ ಹಾಗೂ ನಂತರ ಮಸೀದಿ ಆವರಣದೊಳಗೆ ಜನರು ಸೇರಿದ್ದು ಕಂಡು ಬಂದಿದೆ.