ETV Bharat / international

ರಷ್ಯಾದಲ್ಲಿ ಕೊರೊನಾ ರಣಕೇಕೆ: 24 ಗಂಟೆಯಲ್ಲಿ ಹನ್ನೊಂದುವರೆ ಸಾವಿರ ಹೊಸ ಪ್ರಕರಣ

ದೇಶದ ಅತಿ ಹೆಚ್ಚು ಕೊರೊನಾ ಪ್ರಕರಣಗಳಿರುವ ಪ್ರದೇಶವಾದ ಮಾಸ್ಕೋದಲ್ಲೇ ಕಳೆದ 24 ಗಂಟೆಗಳಲ್ಲಿ 6,169 ಹೊಸ ಪ್ರಕರಣಗಳನ್ನು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ1,15,909 ಕ್ಕೆ ತಲುಪಿದೆ.

COVID
ಕೊರೊನಾ
author img

By

Published : May 11, 2020, 8:25 PM IST

ಮಾಸ್ಕೋ: ಕಳೆದ 24 ಗಂಟೆಗಳಲ್ಲಿ ರಷ್ಯಾದಲ್ಲಿ 11,656 ಹೊಸ ಕೋವಿಡ್​-19 ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 2,21,344 ಕ್ಕೇರಿದೆ ಎಂದು ಅಲ್ಲಿನ ಕೊರೊನಾ ಪ್ರತಿಕ್ರಿಯೆ ಕೇಂದ್ರ ತಿಳಿಸಿದೆ.

ಈವರೆಗೆ 9 ದಿನಗಳಿಂದ 10,000ಕ್ಕಿಂತ ಹೆಚ್ಚು ಕೇಸ್​ಗಳು ರಷ್ಯಾದಲ್ಲಿ ದಾಖಲಾಗಿದೆ. ದೇಶದಲ್ಲಿ ಸಾವಿನ ಸಂಖ್ಯೆ 94 ರಿಂದ 2,009 ಕ್ಕೆ ಏರಿಕೆಯಾಗಿದ್ದು, ಅದರ ಜೊತೆಗೆ 39,801 ಜನರು ಚೇತರಿಸಿಕೊಂಡಿದ್ದಾರೆ.

ಇನ್ನು ದೇಶದ ಅತಿ ಹೆಚ್ಚು ಕೊರೊನಾ ಪ್ರಕರಣಗಳಿರುವ ಪ್ರದೇಶವಾದ ಮಾಸ್ಕೋದಲ್ಲೇ ಕಳೆದ 24 ಗಂಟೆಗಳಲ್ಲಿ 6,169 ಹೊಸ ಪ್ರಕರಣಗಳನ್ನು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ1,15,909 ಕ್ಕೆ ತಲುಪಿದೆ.

ರಷ್ಯಾದಲ್ಲಿ ಈ ಎರಡು ದಿನಗಳಿಂದ 247,842 ಜನರು ವೈದ್ಯಕೀಯ ವೀಕ್ಷಣೆಯಲ್ಲಿದ್ದಾರೆ. ಕೊರೊನಾದ ಹೆಚ್ಚಿನ ಪರೀಕ್ಷೆಗಳಿಗಾಗಿ 5.6 ದಶಲಕ್ಷಕ್ಕೂ ಹೆಚ್ಚು ಲ್ಯಾಬ್ ಪರೀಕ್ಷೆಗಳನ್ನು ದೇಶಾದ್ಯಂತ ನಡೆಸಲಾಗಿದೆ ಎಂದು ಗ್ರಾಹಕ ಹಕ್ಕುಗಳು ಮತ್ತು ಮಾನವ ಯೋಗ ಕ್ಷೇಮ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.