ETV Bharat / state

ಅಂದು - ಇಂದು ಬೆಳಗಾವಿ ಕನ್ನಡ ರಾಜ್ಯೋತ್ಸವ: ಹೋರಾಟಗಾರರು, ಸಾಹಿತಿಗಳು ಹೇಳೋದೇನು?

ಅಂದು ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ನೂರು ಮಂದಿ ಭಾಗವಹಿಸುತ್ತಿದ್ದರೆ, ಇಂದು ಲಕ್ಷ ಲಕ್ಷ ಕನ್ನಡಿಗರು ಅತ್ಯುತ್ಸಾಹದಿಂದ ಪಾಲ್ಗೊಂಡು ಅದ್ಧೂರಿಯಾಗಿ ಆಚರಿಸುತ್ತಾರೆ ಎನ್ನುತ್ತಾರೆ ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ.

Kannada Rajyotsava celebration then- now
ಅಂದು- ಇಂದು ಬೆಳಗಾವಿ ಕನ್ನಡ ರಾಜ್ಯೋತ್ಸವ (Etv Bharat)
author img

By ETV Bharat Karnataka Team

Published : 2 hours ago

ಬೆಳಗಾವಿ: ಅಂದು ನೂರು ಜನ ಪಾಲ್ಗೊಳ್ಳುತ್ತಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಇಂದು ಲಕ್ಷ ಲಕ್ಷ ಸಂಖ್ಯೆಯಲ್ಲಿ ಕನ್ನಡಿಗರು ಸೇರುತ್ತಿದ್ದಾರೆ. ಸರ್ಕಾರದ ಯಾವುದೇ ಅನುದಾನ ಇಲ್ಲದೇ ಬೆಳಗಾವಿಯಲ್ಲಿ ನಡೆಯುವ ರಾಜ್ಯೋತ್ಸವ ಮೆರವಣಿಗೆ ಮೈಸೂರು ದಸರಾ ಮೆರವಣಿಗೆಯನ್ನೂ ಮೀರಿಸುತ್ತದೆ.

ಬೆಳಗಾವಿ, ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ. ಆದರೆ, ಇಲ್ಲಿ ಈ ಮೊದಲು ಈಗಿನಂತೆ ಕನ್ನಡ ಗಟ್ಟಿಯಾಗಿರಲಿಲ್ಲ. ಕನ್ನಡ ನೆಲದಲ್ಲೇ ಕನ್ನಡಿಗರು ಭಯದಲ್ಲೇ ರಾಜ್ಯೋತ್ಸವ ಆಚರಿಸುತ್ತಿದ್ದರು. ಆಗ ಕೆಲವೇ ಕೆಲವು ಕನ್ನಡ ಹೋರಾಟಗಾರರು ಮಾತ್ರ ಸೇರುತ್ತಿದ್ದರು. ಕೆಲ ಎಂಇಎಸ್ ಪುಂಡರು ಎಷ್ಟೇ ಕಿರುಕುಳ ನೀಡಿದರೂ, ಬೆದರಿಕೆ ಹಾಕಿದರೂ ಜಗ್ಗದೆ ತಮ್ಮ ಕನ್ನಡಾಭಿಮಾನ ಪ್ರದರ್ಶಿಸುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಇಡೀ ರಾಜ್ಯದಲ್ಲೇ ಅದ್ಧೂರಿ ರಾಜ್ಯೋತ್ಸವಕ್ಕೆ ಬೆಳಗಾವಿ ಸಾಕ್ಷಿಯಾಗುತ್ತಿದೆ. ನಾಡಿನ ವಿವಿಧೆಡೆ ಜನ ರಾಜ್ಯೋತ್ಸವದ ಸಂಭ್ರಮದಲ್ಲಿ ಮಿಂದೇಳುತ್ತಾರೆ.

Kannada Rajyotsava celebration now
ಇಂದು ಬೆಳಗಾವಿ ಕನ್ನಡ ರಾಜ್ಯೋತ್ಸವ (ETV Bharat)

ಆಗಿನ ಕನ್ನಡ ರಾಜ್ಯೋತ್ಸವ ಆಚರಣೆ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ, "ಬೆಳಗಾವಿ ಮೇಲಿನ‌ ಕರ್ನಾಟಕ ಮತ್ತು ಕನ್ನಡಿಗರ ಹಕ್ಕುಗಾರಿಕೆ ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇಲ್ಲಿ ಅದ್ಧೂರಿ ಮತ್ತು ವೈಭವದಿಂದ ರಾಜ್ಯೋತ್ಸವ ಆಚರಿಸಲಾಗುತ್ತದೆ. ಹಾಗಾಗಿ, ನ.1ರಂದು ಇಡೀ ರಾಜ್ಯದ ಜನರ ಚಿತ್ತ ಬೆಳಗಾವಿಯತ್ತ ನೆಟ್ಟಿರುತ್ತದೆ. ಅಂದು ಕೇವಲ ಬೆಳಗಾವಿ ಅಷ್ಟೇ ಅಲ್ಲದೆ ಕಲಬುರ್ಗಿ, ಮೈಸೂರು, ಬೆಂಗಳೂರು ಸೇರಿ‌ ವಿವಿಧೆಡೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಕನ್ನಡಿಗರು ಸಮಾವೇಶಗೊಳ್ಳುತ್ತಾರೆ" ಎಂದರು.

Kannada Rajyotsava celebration then
ಅಂದು ಬೆಳಗಾವಿ ಕನ್ನಡ ರಾಜ್ಯೋತ್ಸವ (ETV Bharat)

ಆಗ ಕನ್ನಡ ಮಾತನಾಡುವುದು ಎಂದರೆ ದುಸ್ಥರವಾಗಿತ್ತು: "1980-90ರ ಸಂದರ್ಭದಲ್ಲಿ ಗಡಿ ವಿವಾದ ಪರಾಕಾಷ್ಠೆಗೆ ಮುಟ್ಟಿತ್ತು. ಮಹಾರಾಷ್ಟ್ರದ ಅನೇಕ ನಾಯಕರು ಇಲ್ಲಿಗೆ ಬಂದು ಪ್ರಚೋದಾನಾತ್ಮ‌ಕ ಹೇಳಿಕೆ ಮೂಲಕ ಹಿಂಸಾತ್ಮಕ ಚಟುವಟಿಕೆಗಳಿಗೆ ಕಾರಣವಾಗುತ್ತಿದ್ದರು. ಆ ವೇಳೆ ಹಾದಿ - ಬೀದಿ, ಅಂಗಡಿ - ಮುಂಗಟ್ಟು, ಚಿತ್ರಮಂದಿರಗಳಲ್ಲಿ ಕನ್ನಡ ಮಾತನಾಡುವುದು ಎಂದರೆ ದುಸ್ಥರವಾಗಿತ್ತು. ಇನ್ನು ರಾಜ್ಯೋತ್ಸವ ಮೆರವಣಿಗೆ ಮಾಡುವುದು ಎಂದರೆ ಹರಸಾಹಸ ಪಡಬೇಕಿತ್ತು. ತಾಯಿ ಭುವನೇಶ್ವರಿ ಪ್ರತಿಮೆ, ಬಸವನ ಕುಡಚಿಯಿಂದ 25 ಎತ್ತಿನ ಜೋಡಿ, ರಾಮದುರ್ಗ ತಾಲ್ಲೂಕಿನ‌ ಚಿಪ್ಪಲಕಟ್ಟಿ ಮಠದ 1 ಆನೆ, ರೂಪಕಗಳು, ಒಂದಿಷ್ಟು ವಾದ್ಯ ಮೇಳಗಳನ್ನು ಮೆರವಣಿಗೆಯಲ್ಲಿ ತರುತ್ತಿದ್ದರು. 10 ಗಂಟೆಗೆ ಶುರುವಾಗುವ ಮೆರವಣಿಗೆಯು ಮಧ್ಯಾಹ್ನ‌ 1.30ಕ್ಕೆ ಮುಗಿಯುತ್ತಿತ್ತು. ಮೆರವಣಿಗೆಯಲ್ಲಿ ಹೆಚ್ಚೆಂದರೆ 150 ಜನ ಇರುತ್ತಿದ್ದರು. ನಮ್ಮನ್ನು ಕಾಯಲು 200 ಪೊಲೀಸರು ಇರುತ್ತಿದ್ದರು" ಎಂದು ಸ್ಮರಿಸಿಕೊಂಡರು.

"ಎಂಇಎಸ್ ಪುಂಡರು ಸೈಕಲ್ ಮೇಲೆ ಕರಾಳ ದಿನದಲ್ಲಿ ಪಾಲ್ಗೊಳ್ಳುತ್ತಿದ್ದರು. ಕೈ ಚೀಲದಲ್ಲಿ ಕಲ್ಲುಗಳನ್ನು ಇಟ್ಟುಕೊಂಡು ಬರುತ್ತಿದ್ದ ಕಿಡಿಗೇಡಿಗಳು, ಕನ್ನಡಿಗರ ಅಂಗಡಿಗಳು, ಮನೆಗಳು, ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗಿಯಾದವರ ಮೇಲೆ ಎಸೆದು ದಾಂಧಲೆ ಮಾಡಿಸುತ್ತಿದ್ದರು. ಆ ಸಮಯದಲ್ಲಿ ಎಂಇಎಸ್ ಬೆಂಬಲಿತ ಐವರು ಶಾಸಕರು ಆಯ್ಕೆಯಾಗುತ್ತಿದ್ದರು. ಕರ್ನಾಟಕದ ಅಧಿಕಾರಿಗಳು ಇವರ ಮಾತು ಕೇಳುತ್ತಿದ್ದರು."

ಭಾಷಾ ರಾಜಕೀಯದಲ್ಲಿ ಧ್ರುವೀಕರಣ: "1990ರ ನಂತರ ಭಾಷಾ ರಾಜಕೀಯದಲ್ಲಿ ಧ್ರುವೀಕರಣ ಶುರುವಾಗಿ, ಎಂಇಎಸ್ ವಿರುದ್ಧ ಮಾಜಿ ಶಾಸಕ ಸಂಭಾಜಿ ಬಂಡಾಯದ ಕಹಳೆ ಊದಿದರು. ಆಗ ಎಂಇಎಸ್​ನಲ್ಲಿ ಒಡಕು ಉಂಟಾಯಿತು. ನಂತರ ಅಂದಿನ ಮುಖ್ಯಮಂತ್ರಿ ಬಂಗಾರಪ್ಪ ಅವರನ್ನು ಕರೆಸಿ ಪೌರ ಸನ್ಮಾನ ಮಾಡಲಾಯಿತು. ಆಗ ಬೆಳಗಾವಿಯಲ್ಲಿ ಅಭಿವೃದ್ಧಿ ಶಕೆ ಆರಂಭವಾಯಿತು. ನಂತರ 1999ರಲ್ಲಿ ಎಂಇಎಸ್ ಬೆಂಬಲಿತ ಯಾವೊಬ್ಬ ಶಾಸಕರು ಗೆಲ್ಲಲಿಲ್ಲ. ಈಗಂತೂ ಬೆಳಗಾವಿಯಲ್ಲಿ ಕನ್ನಡ ಗಟ್ಟಿಯಾಗಿದ್ದು, ರಾಜ್ಯೋತ್ಸವಕ್ಕೆ 7-8 ಲಕ್ಷ ಕನ್ನಡಿಗರು ಸೇರುತ್ತಿದ್ದಾರೆ. ಸರ್ಕಾರದ ಚಿಕ್ಕಾಸು ಇಲ್ಲದೇ ಇಷ್ಟೊಂದು ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸಲಾಗುತ್ತಿದೆ" ಎಂದು ಹೇಳಿದರು.

ಇತಿಹಾಸಕಾರ ಸಿ.ಕೆ.ಜೋರಾಪುರ ಮಾತನಾಡಿ, "ಹಿಂದೆ ನಮಗೆಲ್ಲಾ ನಾಗನೂರು ರುದ್ರಾಕ್ಷಿ ಮಠದ ಶಿವಬಸವ ಸ್ವಾಮೀಜಿ ಮತ್ತು ಕೆಎಲ್ಇ ಸಂಸ್ಥೆ ಪದಾಧಿಕಾರಿಗಳು ಬೆನ್ನೆಲುಬಾಗಿ ಇರುತ್ತಿದ್ದರು. ಮರಾಠಿಗರ ದಬ್ಬಾಳಿಕೆ, ಗೂಂಡಾವರ್ತನೆ ನಡುವೆಯೂ ರಾಜ್ಯೋತ್ಸವ ಆಚರಿಸುತ್ತಿದ್ದೆವು.‌ ಆದರೆ, ಈಗಿನ ಕನ್ನಡದ ವೈಭವ ನೋಡಿ ನಮಗೆ ಆನಂದವಾಗುತ್ತದೆ. ರಾಜ್ಯೋತ್ಸವಕ್ಕೆ ಸೇರುವ ಜನರನ್ನು ನೋಡಿ ಮೈ ಮನಗಳೆಲ್ಲ ರೋಮಾಂಚನವಾಗುತ್ತದೆ. ಎಲ್ಲೆಲ್ಲೂ ಕನ್ನಡ ಬಾವುಟ ಹಾರಾಡುವುದನ್ನೇ ಕಣ್ತುಂಬಿಕೊಂಡು ಜೀವನ ಸಾರ್ಥಕ ಎನಿಸುತ್ತಿದೆ" ಎಂದು ಹೇಳಿದರು.

ಕನ್ನಡ ಯುವಕ ಹುತಾತ್ಮ: 1985ರ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವ ದಿನ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಬಸವಣ್ಣ ಗಲ್ಲಿಯ 18 ವರ್ಷದ ಯುವಕ ದೀಪಕ್​ ಅನಗೋಳ್ಕರ್ ರೂಪಕದಲ್ಲಿ ಪಾತ್ರಧಾರಿಯಾಗಿದ್ದ. ಆ ಸಂದರ್ಭದಲ್ಲಿ ಮರಾಠಾ ಕಿಡಿಗೇಡಿಗಳು ಎಸೆದ ಕಲ್ಲು ಯುವಕನ ತಲೆಗೆ ತಾಗಿ ಗಂಭೀರವಾಗಿ ಗಾಯಗೊಂಡಿದ್ದ. ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಹೀಗೆ ಹಲವು ಕನ್ನಡಿಗರ ತ್ಯಾಗ, ಬಲಿದಾನ, ಹೋರಾಟದಿಂದ ಇಂದು ಕನ್ನಡ ಬೆಳಗಾವಿಯಲ್ಲಿ ಗಟ್ಟಿಯಾಗಿದೆ" ಎನ್ನುತ್ತಾರೆ ಸಿ.ಕೆ‌.ಜೋರಾಪುರ.

ಇದನ್ನೂ ಓದಿ: ಹಣೆಯಲ್ಲಿ ಕನ್ನಡ ಧ್ವಜ, ಎದೆಯಲ್ಲಿ ಇಮ್ಮಡಿ ಪುಲಕೇಶಿ: ಗಡಿಯಲ್ಲಿ ಭಾಷೆ ಉಳಿವಿಗಾಗಿ ಒಬ್ಬಂಟಿಯಾಗಿ ಯುವಕನ ಕನ್ನಡ ಜಾಗೃತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.