ETV Bharat / international

'ಪಂಜ್​ಶೀರ್​ನ ನಾಯಕ ಅಹ್ಮದ್ ಮಸೂದ್ ಅಫ್ಘಾನಿಸ್ತಾನ ತೊರೆದಿಲ್ಲ'

author img

By

Published : Sep 12, 2021, 10:13 AM IST

ಕೆಲವು ದಿನಗಳಿಂದ ಪಂಜ್​ಶೀರ್​ನ ರಾಷ್ಟ್ರೀಯ ಪ್ರತಿರೋಧ ಪಡೆ(Resistance Front leader) ನಾಯಕ ಅಹ್ಮದ್ ಮಸೂದ್ ಟರ್ಕಿಗೆ ಪಲಾಯನ ಮಾಡಿದ್ದಾರೆ ಎಂದು ತಾಲಿಬಾನಿಗಳು ಹೇಳಿಕೊಂಡಿದ್ದರು. ಈ ಹೇಳಿಕೆಯನ್ನು ಕೆಲವು ಸುದ್ದಿಸಂಸ್ಥೆಗಳು ನಿರಾಕರಿಸಿವೆ.

Resistance leader Ahmad Massoud has not left Afghanistan, say reports
ಪಂಜ್​ಶೀರ್​ನ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ನಾಯಕ ಅಹ್ಮದ್ ಮಸೂದ್ ಅಫ್ಘಾನಿಸ್ತಾನ ತೊರೆದಿಲ್ಲ: ವರದಿ

ಕಾಬೂಲ್(ಅಫ್ಘಾನಿಸ್ತಾನ): ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ನಾಯಕ ಅಹ್ಮದ್ ಮಸೂದ್ ತಜಿಕಿಸ್ತಾನಕ್ಕೆ ಪಲಾಯನ ಮಾಡಿದ್ದಾರೆ ಎಂದು ತಾಲಿಬಾನ್ ಹೇಳಿಕೆ ನೀಡಿದ ಬೆನ್ನಲ್ಲೇ ಕೆಲವು ಸುದ್ದಿಸಂಸ್ಥೆಗಳು ಅಹ್ಮದ್ ಮಸೂದ್ ಅಫ್ಘಾನಿಸ್ತಾನವನ್ನು ತೊರೆದಿಲ್ಲ ಎಂದು ವರದಿ ಮಾಡಿವೆ.

ಅಹ್ಮದ್​​ ಮಸೂದ್ ಆಫ್ಘಾನಿಸ್ತಾನವನ್ನು ಬಿಟ್ಟು ಟರ್ಕಿ ಅಥವಾ ಬೇರೆ ಯಾವುದೇ ಪ್ರದೇಶಕ್ಕೆ ಹೋಗಿರುವುದು ವದಂತಿಯಷ್ಟೇ. ಆತ ಸುರಕ್ಷಿತ ಸ್ಥಳದಲ್ಲಿದ್ದು, ಪಂಜ್​ಶೀರ್​ ಪ್ರದೇಶದ ಜನರೊಂದಿಗೆ ಸಂಪರ್ಕದಲ್ಲಿದ್ದಾನೆ ಎಂದು ಫಾರ್ಸ್ ಸುದ್ದಿಸಂಸ್ಥೆಯು ಮೂಲವೊಂದನ್ನು ಉಲ್ಲೇಖಿಸಿ ಮಾಹಿತಿ ನೀಡಿದೆ.

ಸೆಪ್ಟೆಂಬರ್ 6ರಂದು ಮಾಧ್ಯಮಗಳಿಗೆ ಮಾಹಿತಿ ಕಳುಹಿಸಿದ್ದ ಪಂಜ್​ಶೀರ್ ನಾಯಕ ಮಸೂದ್ ತಾಲಿಬಾನ್ ವಿರುದ್ಧ ದಂಗೆಯೇಳಲು ಜನರಿಗೆ ಕರೆ ನೀಡಿದ್ದರು. ದೇಶದ ಒಳಗೆ, ಹೊರಗೆ, ಎಲ್ಲಿದ್ದರೂ ನಮ್ಮ ದೇಶದ ಘನತೆ, ಸ್ವಾತಂತ್ರ್ಯ ಮತ್ತು ಸಮೃದ್ಧಿಗಾಗಿ ಹೋರಾಡಿ ಎಂದು ಜನರಲ್ಲಿ ಮನವಿ ಮಾಡಿದ್ದರು.

ಪಂಜ್​ಶೀರ್​ ಅನ್ನು ತಾಲಿಬಾನ್ ವಶಪಡಿಸಿಕೊಂಡಿದ್ದೇವೆ ಎಂಬ ಹೇಳಿಕೆಯನ್ನು ಸರಾಸಗಟಾಗಿ ತಳ್ಳಿ ಹಾಕಿದ ಮಸೂದ್​​, 1.75 ಲಕ್ಷ ಜನಸಂಖ್ಯೆಯನ್ನು ಉಳಿಸಲು ತನ್ನ ಕೊನೆಯ ಉಸಿರು ಇರುವವರೆಗೂ ಹೋರಾಡಲಿದ್ದೇನೆ ಎಂದು ಮಸೂದ್ ಹೇಳಿದ್ದಾರೆ.

ಕೆಲವೇ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಅಹ್ಮದ್ ಮಸೂದ್ ಅವರು ಪಂಜ್​ಶೀರ್ ಮತ್ತು ಅಂದರಬ್‌ನಿಂದ ತಾಲಿಬಾನ್​ ತಮ್ಮ ಪಡೆಗಳನ್ನು ಹಿಂತೆಗೆದುಕೊಂಡರೆ ಹೋರಾಟವನ್ನು ನಿಲ್ಲಿಸಲು ಮತ್ತು ಮಾತುಕತೆ ಆರಂಭಿಸಲು ಸಿದ್ಧ ಎಂದು ಹೇಳಿದ್ದರು. ತಾಲಿಬಾನ್ ತನ್ನ ಸೇನಾ ದಾಳಿಯನ್ನು ಕೊನೆಗೊಳಿಸಿದರೆ ನಾವು ತಕ್ಷಣವೇ ಯುದ್ಧವನ್ನು ನಿಲ್ಲಿಸಲು ಸಿದ್ಧರಿದ್ದೇವೆ ಎಂದು ಅಹ್ಮದ್ ಮಸೂದ್ ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: ಉರ್ದು ಭಾಷಿತ ತಾಲಿಬಾನ್‌ಗಳಿಂದ ಕಾಬೂಲ್‌ನಲ್ಲಿ ಭಾರತದೊಂದಿಗೆ ಸಂಪರ್ಕದ ಮಾಹಿತಿಯ ಜಾಲಾಟ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.