ETV Bharat / international

ಕೋವಿಡ್‌-19 ಬಿಕ್ಕಟ್ಟಿನಿಂದ ಹೊರಬರಲು ಏನೆಲ್ಲ ನೀತಿ ನಿಯಮಗಳು ಬೇಕು?

ಕೊರೊನಾ ವೈರಸ್‌ ವಿಶ್ವದ ಆರ್ಥಿಕತೆಯನ್ನ ಪಾತಾಳಕ್ಕೆ ಕುಸಿಯುವಂತೆ ಮಾಡಿದೆ. ಲಕ್ಷಾಂತರ ಮಂದಿ ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನ್ಯಾಷನಲ್‌ ಲೆಬರ್‌ ಕಾನ್ಫರೆನ್ಸ್‌ ಬಿಕ್ಕಟ್ಟಿನಿಂದ ಹೊರಬರಲು ನೀತಿ ನಿಯಮಗಳನ್ನು ರೂಪಿಸಬೇಕೆಂದು ಹೇಳಿದೆ.

recovering-from-covid-19-crisis-what-policies-are-needed
ಕೋವಿಡ್‌-19 ಬಿಕ್ಕಟ್ಟಿನಿಂದ ಹೊರಬರಲು ಏನೆಲ್ಲಾ ನೀತಿ ನಿಯಮಗಳು ಬೇಕು?
author img

By

Published : Jun 1, 2020, 2:11 PM IST

ನವದೆಹಲಿ: ಇಡೀ ವಿಶ್ವವನ್ನು ತಲ್ಲಣಗೊಳಿಸಿರುವ ಮಹಾಮಾರಿ ಕೋವಿಡ್‌-19 ಜನ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ಆರೋಗ್ಯ ರಕ್ಷಣಾ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ವೈದ್ಯರು, ನರ್ಸ್‌ಗಳು ಹಾಗೂ ಇತರ ರಕ್ಷಣಾ ಕಾರ್ಯಕತರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ಅದೇ ರೀತಿ, ಚಿಲ್ಲರೆ ವ್ಯಾಪಾರ‌, ಆಹಾರ ಉತ್ಪಾದಕರು ಹಾಗೂ ಸಾರಿಗೆ ಸೇವೆಯಲ್ಲಿರುವವರು ಕೂಡ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದ ಅಗತ್ಯವಿದೆ.

ಜೀವ ಹಾಗೂ ಜೀವನ ಎರಡೂ ಅತಿ ಮುಖ್ಯವಾಗಿರುವುದರಿಂದ ಸದ್ಯ ಲಾಕ್‌ಡೌನ್‌ 5.0 ನಲ್ಲಿ ಹಲವು ಸಡಿಲಿಕೆಗಳನ್ನು ನೀಡಲಾಗಿದೆ. ಹೀಗಾಗಿ ಜನ ಜೀವನ ಎಂದಿನಂತೆ ಆರಂಭವಾಗುತ್ತಿರುವುದು ಹಾಗೂ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುಗತಿಯಲ್ಲಿರುವುದರಿಂದ ಅಗತ್ಯ ಸೇವೆಗಳನ್ನು ನೀಡುತ್ತಿರುವವರು ತಮ್ಮ ಆರೋಗ್ಯದ ರಕ್ಷಣೆಗೂ ಆದ್ಯತೆ ನೀಡಬೇಕಿದೆ.

ಇಂಟರ್‌ ನ್ಯಾಷನಲ್‌ ಲೆಬರ್‌ ಕಾನ್ಫರೆನ್ಸ್‌ (ICL), ಕೆಲಸದ ಸ್ಥಳದಲ್ಲಿ ಸಾಮಾಜಿಕ ರಕ್ಷಣೆ ಮತ್ತು ಅಸಮಾನತೆಗಳು ಸೇರಿದಂತೆ ಮುಂದಿನ ವರ್ಷದ ವರಿಗೆ ಹಲವು ಸವಾಲುಗಳ ಎದುರಿಸಬೇಕಾದ ಪರಿಸ್ಥಿತಿಯನ್ನು ವಿವವರಿಸಿದೆ. ಅಂತಾರಾಷ್ಟ್ರೀಯ ಸಮಿತಿ, ಸಂಕಷ್ಟದಲ್ಲಿರುವವರಿಗಾಗಿ ಮುಂದಿನ ವರ್ಷದವರೆಗೆ ಪಾಲಿಸಬೇಕಾದ ಕೆಲವು ನಿಯಮಗಳ ಸಂಬಂಧ ಅಜೆಂಡಾವನ್ನು ರೂಪಿಸಲಿದೆ.

ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರೆಲ್ಲರೂ ಸಾಮಾಜಿಕ ಭದ್ರತೆ ಇಲ್ಲದೇ ಜೀವನ ನಡೆಸುತ್ತಿದ್ದಾರೆ. ಹಲವರು ಬಡತನಕ್ಕೆ ಗುರಿಯಾಗುತ್ತಿದ್ದು, ತನ್ನ ಕುಟುಂಬ ಪೋಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಿಂದೆಂದಿಗಿಂತಲೂ ಹೆಚ್ಚಿನ ಸಾಮಾಜಿಕ ಭದ್ರತೆಯನ್ನು ನೀಡುವ ಅವಶ್ಯಕತೆ ಇದೆ ಎಂದು ಐಸಿಎಲ್‌ ಹೇಳಿದೆ.

ಹೆಚ್ಚು ಆರ್ಥಿಕತೆ ವಿನಿಯೋಗದ ಮೂಲಕ ಜಾಗತಿಕ ಮಟ್ಟದಲ್ಲಿ ಈ ಕೆಲಸ ಅತ್ಯಂತ ತುರ್ತಾಗಿ ಮಾಡಬೇಕಿದೆ. ಮೊದಲು ತೀರಾ ಬಡತನ ಎದುರಿಸುತ್ತಿರುವ ದೇಶಗಳು ಮತ್ತು ಪ್ರಾಂತ್ಯಗಳ ಜನರಿಗೆ ಆದ್ಯತೆ ನೀಡಬೇಕಿದೆ. ಮಹಿಳೆಯರು ಕೂಡ ಆರೋಗ್ಯ ಮತ್ತು ಅವಶ್ಯಕವಾದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಹುತೇಕರು ವಲಸೆ ಕಾರ್ಮಿಕರಾಗಿದ್ದಾರೆ. ಇದರಲ್ಲಿ ಕಡಿಮೆ ವೇತನ, ಸೂಕ್ತ ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿದರಿದ್ದಾರೆ.

ಅನೌಪಚಾರಿಕ ಆರ್ಥಿಕತೆ ಮತ್ತ ಜಾಗತಿಕ ಪೂರೈಕೆ ಕೊಂಡಿ ಕಡಿತ ಮಾಡಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ. ಗಾರ್ಮೆಂಟ್ಸ್‌ಗಳಲ್ಲಿ ಹೆಚ್ಚಿನ ಮಹಿಳಾ ಉದ್ಯೋಗಿಗಳು ಇದ್ದು, ಇದೀಗ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇವರಿಗೂ ಸಾಮಾಜಿಕ ಭದ್ರತೆ ಇಲ್ಲದಂತಾಗಿದೆ.

ಮತ್ತೊಂದು ವರದಿಯ ಪ್ರಕಾರ ಈ ಜಾಗತಿ ಬಿಕ್ಕಟ್ಟಿನಿಂದ ಮಹಿಳೆಯರು ಮತ್ತು ಯುವತಿಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುವ ಎಚ್ಚರಿಕೆ ನೀಡಲಾಗಿದೆ. ಬಿಕ್ಕಟ್ಟು ಶಮನ ಮಾಡಲು ನಿಯಮಗಳ ಪ್ಯಾಕೇಜ್‌ಗಳನ್ನು ಘೋಷಿಸಿ ಅಸಮಾನತೆಯನ್ನು ತಡೆಗಟ್ಟಬೇಕಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಬೇಕೆಂದು ಎಂದು ಐಸಿಎಲ್‌ ಎಲ್ಲಾ ರಾಷ್ಟ್ರಗಳ ಒತ್ತಾಯಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.