ETV Bharat / international

ಇಂಡೋ - ಪೆಸಿಫಿಕ್​ ಸ್ವಾತಂತ್ರ್ಯಕ್ಕೆ ಅಡ್ಡ ಬಂದ್ರೆ ಕ್ವಾಡ್​​ ಜಂಟಿಯಾಗಿ ಮಟ್ಟಹಾಕುತ್ತೆ: ಚೀನಾ ಹೆಸರಿಸದೇ ಬೈಡನ್​ ವಾರ್ನಿಂಗ್​! - ಅಮೆರಿಕ-ಭಾರತ ದ್ವಿಪಕ್ಷೀಯ ಸಹಕಾರ

ರಾಷ್ಟ್ರಗಳಿಗೆ ತಲೆನೋವಾಗಿದೆ. ದಕ್ಷಿಣ ಚೀನಾ ಸಮುದ್ರ ಹಾಗೂ ಇಂಡೋ-ಪೆಸಿಫಿಕ್​ ಸಾಗರ ಪ್ರದೇಶದಲ್ಲಿ ಅತಿಕ್ರಮಣಕ್ಕೆ ಚೀನಾ ಪ್ರಯತ್ನ ಮಾಡುತ್ತಲೇ ಇದೆ. ಈ ವರ್ತನೆಯಿಂದ ಬಹಳಷ್ಟು ದೇಶಗಳು ಬಾಧಿತವಾಗಿವೆ. ಇದಕ್ಕೆ ಅಂಕುಶ ಹಾಕಲು ಕ್ವಾಡ್ ಸದಸ್ಯ ರಾಷ್ಟ್ರಗಳು ನಿಶ್ಚಯಿಸಿವೆ.

Biden
Biden
author img

By

Published : Mar 13, 2021, 1:00 PM IST

ವಾಷಿಂಗ್ಟನ್: ನಾವು ಎದುರಿಸುತ್ತಿರುವ ಪಾಲುದಾರಿಕ ಸವಾಲುಗಳನ್ನು ಮಟ್ಟಹಾಕಲು ಮತ್ತು ಮುಕ್ತ ಹಾಗೂ ಸ್ವತಂತ್ರ ಇಂಡೋ - ಪೆಸಿಫಿಕ್ ವಲಯವನ್ನು ಭದ್ರಪಡಿಸಿಕೊಳ್ಳಲು ಅಮೆರಿಕ, ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾ ಒಟ್ಟಾಗಿ ಕೆಲಸ ಮಾಡಲು ಬದ್ಧವಾಗಿವೆ ಎಂದು ಯುಎಸ್​ ನೂತನ ಅಧ್ಯಕ್ಷ ಜೋ ಬೈಡನ್ (ಶುಕ್ರವಾರ: ಸ್ಥಳೀಯ ಕಾಲಮಾನ) ಕರೆ ನೀಡಿದ್ದಾರೆ.

ಇಂದು ಬೆಳಗ್ಗೆ, ನಾನು ಅಧ್ಯಕ್ಷನಾದ ಬಳಿಕ ಆಯೋಜನೆಯಾದ ಮೊದಲ ಬಹುಪಕ್ಷೀಯ ಕ್ವಾಡ್‌ ಶೃಂಗಸಭೆಯಲ್ಲಿ ವರ್ಚುಯಲ್​ ಮೂಲಕ ಭಾಗವಹಿಸಿದೆ. ನಾವು ಎದುರಿಸುತ್ತಿರುವ ಪಾಲುದಾರಿಕ ಸವಾಲುಗಳನ್ನು ತೊಡೆದುಹಾಕಲು ಮತ್ತು ಮುಕ್ತ ಹಾಗೂ ಸ್ವತಂತ್ರ ಇಂಡೋ-ಪೆಸಿಫಿಕ್ ಪ್ರದೇಶವನ್ನು ಭದ್ರಪಡಿಸಿಕೊಳ್ಳಲು ಅಮೆರಿಕ, ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾ ಒಟ್ಟಾಗಿ ಕೆಲಸ ಮಾಡಲು ಬದ್ಧವಾಗಿವೆ ಎಂದು ಬೈಡನ್ ಅವರು ತಮ್ಮ ಅಧಿಕೃತ ಟ್ವಿಟರ್​ನಲ್ಲಿ ಬರೆದಿದ್ದಾರೆ.

  • This morning, I met virtually with the Quad in the first multilateral summit I’ve hosted as president. The United States, Japan, India, and Australia are committed to working together to tackle the shared challenges we face and to secure a free and open Indo-Pacific region. pic.twitter.com/m0AYfsEx6z

    — President Biden (@POTUS) March 12, 2021 " class="align-text-top noRightClick twitterSection" data=" ">

ಆಸ್ಟ್ರೇಲಿಯಾ, ಭಾರತ, ಜಪಾನ್ ಹಾಗೂ ಅಮೆರಿಕದ ನಾಯಕರನ್ನು ಒಳಗೊಂಡ ಪ್ರಥಮ ಕ್ವಾಡ್​ (ಕ್ವಾಡ್ರಿಲ್ಯಾಟರಲ್​ ಏಷ್ಯನ್​ ಆರ್ಚ್​ ಆಫ್​ ಡೆಮಾಕ್ರಸಿ) ಸದಸ್ಯರು ಸಭೆಯ ಹಿಂದಿನ ದಿನ, ಕ್ವಾಡ್​ ಗ್ರೂಪಿನ ಪ್ರತಿಯೊಂದು ಸದಸ್ಯ ರಾಷ್ಟ್ರಗಳ ಭವಿಷ್ಯಕ್ಕಾಗಿ ಮುಕ್ತ ಮತ್ತು ಸ್ವತಂತ್ರ ಇಂಡೋ - ಪೆಸಿಫಿಕ್ ಅವಶ್ಯಕವಾಗಿದೆ. ಅಮೆರಿಕ ಇದನ್ನು ಖಚಿತಪಡಿಸಲು ಬದ್ಧವಾಗಿದೆ. ಈ ಪ್ರದೇಶವನ್ನು ಅಂತಾರಾಷ್ಟ್ರೀಯ ಕಾನೂನಿನಿಂದ ನಿಯಂತ್ರಿಸಲಾಗುತ್ತದೆ ಮತ್ತು ದಬ್ಬಾಳಿಕೆಯಿಂದ ಮುಕ್ತವಾಗಿರುತ್ತದೆ ಎಂದಿತ್ತು.

ನಮ್ಮ ಪ್ರತಿಯೊಂದು ದೇಶಗಳಿಗೂ ಮುಕ್ತ ಮತ್ತು ಸ್ವತಂತ್ರ ಇಂಡೋ ಪೆಸಿಫಿಕ್ ಅತ್ಯಗತ್ಯ. ಸ್ಥಿರತೆ ಸಾಧಿಸಲು ನಿಮ್ಮೊಂದಿಗೆ ನಮ್ಮ ಸಹವರ್ತಿಗಳು ಹಾಗೂ ಈ ಪ್ರದೇಶದ ನಮ್ಮ ಎಲ್ಲ ಮಿತ್ರರಾಷ್ಟ್ರಗಳೊಂದಿಗೆ ಕೆಲಸ ಮಾಡಲು ಯುಎಸ್ ಬದ್ಧವಾಗಿದೆ ಎಂದು ಕ್ವಾಡ್ ಸಭೆಯಲ್ಲಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಹಾಂಕಾಂಗ್​ನ ಚುನಾವಣೆ ವ್ಯವಸ್ಥೆ ಬದಲಿಸಿದ ಚೀನಾ: ಜಿ7 ರಾಷ್ಟ್ರಗಳು ತೀವ್ರ ಕಳವಳ

ಹಿಂದೂ ಮಹಾಸಾಗರ ಹಾಗೂ ಪೆಸಿಫಿಕ್ ಮಹಾಸಾಗರ (ಇಂಡೋ-ಪೆಸಿಫಿಕ್​) ವ್ಯಾಪ್ತಿಯಲ್ಲಿ ಅಮೆರಿಕ ಹಿಡಿದು ಭಾರತ, ಜಪಾನ್​ ವರೆಗೆ 24 ರಾಷ್ಟ್ರಗಳು ಬರುತ್ತವೆ. ಈ ಸಾಗರ ವ್ಯಾಪ್ತಿಗೆ ಚೀನಾ ಬಾರದಿದ್ದರೂ ತನ್ನ ಆಕ್ರಮಣಕಾರಿ ಧೋರಣೆಯಿಂದ ಇತರ ರಾಷ್ಟ್ರಗಳಿಗೆ ತಲೆನೋವಾಗಿದೆ. ದಕ್ಷಿಣ ಚೀನಾ ಸಮುದ್ರ ಹಾಗೂ ಇಂಡೋ-ಪೆಸಿಫಿಕ್​ ಸಾಗರ ಪ್ರದೇಶದಲ್ಲಿ ಅತಿಕ್ರಮಣಕ್ಕೆ ಚೀನಾ ಪ್ರಯತ್ನ ಮಾಡುತ್ತಲೇ ಇದೆ. ಈ ವರ್ತನೆಯಿಂದ ಬಹಳಷ್ಟು ದೇಶಗಳು ಬಾಧಿತವಾಗಿವೆ. ಇದಕ್ಕೆ ಅಂಕುಶ ಹಾಕಲು ಕ್ವಾಡ್ ಸದಸ್ಯ ರಾಷ್ಟ್ರಗಳು ನಿಶ್ಚಯಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.