ರಾವಲ್ಪಿಂಡಿ: ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಸರ್ಕಾರವನ್ನ ಜರೆದಿರುವ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಾಲ್ ಭುಟ್ಟೋ ಜರ್ದಾರಿ, ರಾಜಕೀಯ ಅನಾಥರ ಕೈಗೊಂಬೆ ಆಡಳಿತ ಕುಸಿಯುತ್ತಿದೆ ಎಂದು ಹೇಳಿದ್ದಾರೆ.
2007ರಲ್ಲಿ ಲಿಯಾಕತ್ ಬಾಗ್‌ನಲ್ಲಿ ಚುನಾವಣಾ ರ‍್ಯಾಲಿ ವೇಳೆ ಆತ್ಮಹತ್ಯಾ ಬಾಂಬ್ ದಾಳಿಯಿಂದ ಸಾವಿಗೀಡಾದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರ 12 ವರ್ಷದ ಪುಣ್ಯ ತಿಥಿ ನೆನಪಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯ ಅನಾಥರು ದೇಶವನ್ನು ಆಳುತ್ತಿರುವುದರಿಂದ ಪಾಕಿಸ್ತಾನದಲ್ಲಿ ನಾಯಕತ್ವ ಮತ್ತು ಆರ್ಥಿಕ ಬಿಕ್ಕಟ್ಟು ಉಂಟಾಗಿದೆ ಎಂದಿದ್ದಾರೆ.
-
'Puppet regime of political orphans crumbling': Bilawal Bhutto targets Imran Khan-led government
— ANI Digital (@ani_digital) December 28, 2019 " class="align-text-top noRightClick twitterSection" data="
Read @ANI Story | https://t.co/uy2f1Y0kOH pic.twitter.com/NwcchSgo1n
">'Puppet regime of political orphans crumbling': Bilawal Bhutto targets Imran Khan-led government
— ANI Digital (@ani_digital) December 28, 2019
Read @ANI Story | https://t.co/uy2f1Y0kOH pic.twitter.com/NwcchSgo1n'Puppet regime of political orphans crumbling': Bilawal Bhutto targets Imran Khan-led government
— ANI Digital (@ani_digital) December 28, 2019
Read @ANI Story | https://t.co/uy2f1Y0kOH pic.twitter.com/NwcchSgo1n
ಈ ರಾಜಕೀಯ ಅನಾಥರ ಬಗ್ಗೆ ಬೆನಜೀರ್ ನಿಮಗೆ ಎಚ್ಚರಿಕೆ ನೀಡಿದರು. ಅವರು ತಮ್ಮ ರಾಜಕೀಯವನ್ನು ಹೇಗೆ ನಡೆಸುತ್ತಾರೆ ಎಂಬುದನ್ನು ನೋಡಿ. ಅವರು ಹೇಡಿಗಳು, ನವಾಜ್ ಷರೀಫ್ ಚಿಕಿತ್ಸೆಗಾಗಿ ಎಂದಿಗೂ ವಿದೇಶಕ್ಕೆ ಕಳಿಸುವುದಿಲ್ಲ ಎಂದು ಅವರು ಹೇಳಿದರು. ಆದರೆ ನವಾಜ್ ಷರೀಫ್ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶಕ್ಕೆ ಹೋದರು. ಅಧ್ಯಕ್ಷ ಆಸಿಫ್ ಅಲಿ ಎಂದಿಗೂ ಜೈಲಿನಿಂದ ಹೊರಬರುವುದಿಲ್ಲ ಎಂದು ಹೇಳಿದರು. ಆದರೀಗ ಅವರು ಜೈಲಿನಿಂದ ಹೊರ ಬಂದಿದ್ದಾರೆ ಇವರು ಎಂದಿಗೂ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದಿಲ್ಲ ಎಂದಿದ್ದಾರೆ.
ನನ್ನ ತಾತ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಅವರ ಅಧಿಕಾರಾವಧಿಯಲ್ಲಿ ಕಾರ್ಮಿಕರಿಗೆ ಸೂಕ್ತ ಹಕ್ಕುಗಳನ್ನ ನೀಡಲಾಯಿತು. ತನ್ನ ತಾಯಿ ಅವರ ಜೀವಿತಾವಧಿಯಲ್ಲಿ ಇಬ್ಬರು ಸರ್ವಾಧಿಕಾರಿಗಳೊಂದಿಗೆ ಹೋರಾಡಿದರು. ಈ ಹೋರಾಟದಿಂದ ಅವರು ಎಂದೂ ಹಿಂದೆ ಸರಿಯಲಿಲ್ಲ ಎಂದಿದ್ದಾರೆ.