ETV Bharat / international

ಬಾಂಗ್ಲಾ ಪ್ರವಾಸದಲ್ಲಿ ನಮೋ... ಒರಾಕಂಡಿ, ಜಶೋರೇಶ್ವರಿ ಕಾಳಿ ದೇವಾಲಯಕ್ಕೆ ಭೇಟಿ, ವಿಶೇಷ ಪ್ರಾರ್ಥನೆ! - ಜಶೋರೇಶ್ವರಿ ಕಾಳಿ ದೇವಾಲಯಕ್ಕೆ ನಮೋ ಭೇಟಿ

ಬಾಂಗ್ಲಾ ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ಮತ್ತು ‘ಬಂಗಬಂಧು’ ಶೇಖ್ ಮುಜೀಬುರ್​ ರೆಹಮಾನ್ ಅವರ ಜನ್ಮ ಶತಮಾನೋತ್ಸವದ ಆಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಬಾಂಗ್ಲಾದೇಶದ ಪ್ರವಾಸದಲ್ಲಿದ್ದಾರೆ.

PM Modi in Bangladesh
PM Modi in Bangladesh
author img

By

Published : Mar 27, 2021, 4:55 AM IST

ಢಾಕಾ: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಬಾಂಗ್ಲಾದೇಶದ ಪ್ರವಾಸ ಕೈಗೊಂಡಿದ್ದು, ಅಲ್ಲಿನ ಸುವರ್ಣ ಸ್ವಾತಂತ್ರ್ಯ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ. ಇದರ ಮುಂದುವರೆದ ಭಾಗವಾಗಿ ಇಂದು ಅಲ್ಲಿನ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ.

ಪ್ರಸಿದ್ಧ ಹಿಂದೂ ದೇವಾಲಯಗಳಾದ ಒರಕಂಡಿ ದೇಗುಲ ಹಾಗೂ ಈಶ್ವರಿಪುರದ ಜಶೋರೇಶ್ವರಿ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಲಿರುವ ನರೇಂದ್ರ ಮೋದಿ ವಿಶೇಷ ಪೂಜೆ ಸಲ್ಲಿಕೆ ಮಾಡಲಿದ್ದಾರೆ.

ಇದನ್ನೂ ಓದಿ: ಶೇಖ್ ಮುಜೀಬುರ್​ ರೆಹಮಾನ್​ಗೆ ಗಾಂಧಿ ಶಾಂತಿ ಪ್ರಶಸ್ತಿ ಹಸ್ತಾಂತರಿಸಿದ ಪ್ರಧಾನಿ ಮೋದಿ

ಬಾಂಗ್ಲಾದೇಶದ ಪ್ರವಾಸ ಕೈಗೊಳ್ಳುವುದಕ್ಕೂ ಮುಂಚಿತವಾಗಿ ಇದಕ್ಕೆ ಸಂಬಂಧಿಸಿದಂತೆ ನಮೋ ಟ್ವೀಟ್ ಮಾಡಿದ್ದು, ಬಾಂಗ್ಲಾದೇಶದ ಪ್ರಾಚೀನ ಜಶೋರೇಶ್ವರಿ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದೇನೆ ಎಂದಿದ್ದು, ಪುರಾಣ ಸಂಪ್ರದಾಯದ 51 ಶಕ್ತಿಪೀಠಗಳಲ್ಲಿ ಜಶೋರೇಶ್ವರಿ ದೇವಸ್ಥಾನ ಕೂಡ ಒಂದಾಗಿದೆ ಎಂದಿದ್ದಾರೆ. ಜಶೋರೇಶ್ವರಿ ದೇವಸ್ಥಾನದ ಬಳಿಕ ಒರಾಕಂಡಿಯಲ್ಲಿರುವ ದೇವಸ್ಥಾನಕ್ಕೂ ಭೇಟಿ ನೀಡಿ ತದನಂತರ ಅಲ್ಲಿನ ಮಾತುವಾ ಸಮುದಾಯದೊಂದಿಗೆ ನಮೋ ಸಂವಾದ ನಡೆಸಲಿದ್ದಾರೆ.

ಮಹಾಮಾರಿ ಕೋವಿಡ್ ನಂತರ ನರೇಂದ್ರರ ಮೋದಿ ಮೊದಲ ವಿದೇಶಿ ಭೇಟಿ ಹಮ್ಮಿಕೊಂಡಿದ್ದು, ನಿನ್ನೆ ನೆರೆಯ ರಾಷ್ಟ್ರ ಬಾಂಗ್ಲಾದೇಶಕ್ಕೆ ತೆರಳಿರುವ ನಮೋ ಅಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಿ, 1971ರ ವಿಮೋಚನಾ ಯುದ್ಧದಲ್ಲಿ ಮಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಕೆ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.