ಇಸ್ಲಾಮಾಬಾದ್: ಕಳೆದ ತಿಂಗಳು ಪಾಕಿಸ್ತಾನದ ಕರಾಚಿ ಬಳಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಒಟ್ಟು 97 ಜನರು ಸಾವನ್ನಪ್ಪಿದ್ದರು. ಇದಕ್ಕೆ ಕಾರಣವಾಗಿದ್ದು ಪೈಲಟ್ಗಳು ಮಾಡಿರುವ ಘೋರ ತಪ್ಪು ಎಂಬುದು ಇದೀಗ ಸಾಬೀತಾಗಿದೆ.
ಪಾಕಿಸ್ತಾನದ ಅಂತಾರಾಷ್ಟ್ರೀಯ ಏರ್ಲೈನ್ಸ್ಗೆ ಸೇರಿದ ವಿಮಾನ ಜಿನ್ನಾ ವಿಮಾನ ನಿಲ್ದಾಣದಲ್ಲಿ ಲ್ಯಾಡಿಂಗ್ ಆಗ್ತಿದ್ದ ವೇಳೆ ವಸತಿ ಸಮುಚ್ಚಯದ ಮೇಲೆ ಅಪ್ಪಳಿಸಿತ್ತು. ಪರಿಣಾಮ, ಅದರಲ್ಲಿದ್ದ 107 ಜನರ ಪೈಕಿ 97 ಜನರು ಸಾವನ್ನಪ್ಪಿದ್ದರು. ತಾಂತ್ರಿಕ ವೈಫಲ್ಯದಿಂದಾಗಿ ಈ ಘಟನೆ ನಡೆದಿದೆ ಎಂದು ಆ ಸಂದರ್ಭದಲ್ಲಿ ಹೇಳಲಾಗಿತ್ತು. ಆದ್ರೆ ಅಸಲಿ ವಿಚಾರ ಈಗ ಬಹಿರಂಗವಾಗಿದೆ.
ಈ ದುರಂತಕ್ಕೆ ಸಂಬಂಧಿಸಿದಂತೆ ಪಾಕ್ ವಿಮಾನಯಾನ ಸಚಿವ ಪಾಕ್ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದಾರೆ. ಪೈಲಟ್ಗಳು ಕೋವಿಡ್ ಬಗ್ಗೆ ಚರ್ಚೆ ನಡೆಸುತ್ತಿದ್ದ ಕಾರಣ ಸರಿಯಾಗಿ ವಿಮಾನ ಲ್ಯಾಡಿಂಗ್ ಮಾಡಿಲ್ಲ. ಏರ್ ಟ್ರಾಫಿಕ್ ಕಂಟ್ರೋಲ್ ರೂಂ ನೀಡುತ್ತಿದ್ದ ಸಲಹೆಯನ್ನು ಅವರು ಸರಿಯಾಗಿ ಪಾಲನೆ ಮಾಡದೇ ಈ ಅವಘಡಕ್ಕೆ ಕಾರಣವಾಗಿದ್ದಾರೆ ಎಂದು ಸಚಿವ ಗುಲಾಂ ಸರ್ವಾರ್ ತಿಳಿಸಿದ್ದಾರೆ.
ಈ ಹಿಂದೆ ವಿಮಾನವನ್ನು ರನ್ವೇಯಲ್ಲಿ ಇಳಿಸುವ ವೇಳೆ ಎರಡೂ ಇಂಜಿಲ್ ವೈಫಲ್ಯವಾದ ಕಾರಣ ಪತನಗೊಂಡಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ 'ಮಾನವ ನಿರ್ಮಿತ' ತೊಂದರೆಯಿಂದ 97 ಜನರು ಸಾವನ್ನಪ್ಪಿರುವುದು ಗೊತ್ತಾಗಿದೆ.