ETV Bharat / international

ಉಗ್ರರಿಗೆ ಹಣಕಾಸು ಬೆಂಬಲ: ಬೂದು ಪಟ್ಟಿಯಲ್ಲೇ ಉಳಿದ ಪಾಕ್..!

ಜಾಗತಿಕ ಭಯೋತ್ಪಾದನಾ - ವಿರೋಧಿ ಹಣಕಾಸು ಕಾವಲುಪಡೆ ವರದಿಯನ್ನು ಸಿದ್ಧಪಡಿಸಿದ್ದು, ಪಾಕಿಸ್ತಾನವನ್ನು ಮೊದಲಿನಂತೆ ಬೂದು ಪಟ್ಟಿಯಲ್ಲೇ ಮುಂದುವರಿಸಲಾಗಿದೆ.

fatf
ಎಫ್​ಎಟಿಎಫ್​
author img

By

Published : Oct 23, 2020, 7:51 PM IST

ನವದೆಹಲಿ: ಜಾಗತಿಕ ಭಯೋತ್ಪಾದನಾ - ವಿರೋಧಿ ಹಣಕಾಸು ಕಾವಲುಪಡೆ (FATF) ವರದಿಯೊಂದನ್ನು ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, ಇದರ ಪ್ರಕಾರ ಪಾಕಿಸ್ತಾನ ಬೂದು ಪಟ್ಟಿಯಲ್ಲಿಯೇ ಉಳಿದುಕೊಳ್ಳಲಿದೆ.

ಜಾಗತಿಕ ಭಯೋತ್ಪಾದನಾ - ವಿರೋಧಿ ಹಣಕಾಸು ಕಾವಲುಪಡೆ ನೀಡಿದ್ದ 27 ಅಂಶಗಳಲ್ಲಿ 6 ಅಂಶಗಳನ್ನು ಪಾಕಿಸ್ತಾನ ಪೂರೈಸಲಾಗದ ಹಿನ್ನೆಲೆಯಲ್ಲಿ ಮೊದಲಿದ್ದಂತೆ ಅದನ್ನು ಬೂದು ಪಟ್ಟಿಯಲ್ಲಿಯೇ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಭಯೋತ್ಪಾದನೆಗೆ ಹಣಕಾಸು ಪೂರೈಕೆ ಹಾಗೂ ಅಕ್ರಮ ಹಣ ವರ್ಗಾವಣೆಯನ್ನು ತಡೆಯಲು ಅಕ್ಟೋಬರ್ 21ರಿಂದ ಸಭೆಯನ್ನು ನಡೆಸಿದ್ದು, 27 ಅಂಶಗಳ ಮೂಲಕ ಪಾಕಿಸ್ತಾನವನ್ನು ಪರಿಶೀಲನೆ ಮಾಡಿದೆ.

ಈ ವೇಳೆ, ಪಾಕಿಸ್ತಾನ 21 ಅಂಶಗಳಲ್ಲಿ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದು, ಇನ್ನೂ 6 ಅಂಶಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನವನ್ನು ಎಫ್ಎಟಿಎಫ್​​ ಬೂದು ಪಟ್ಟಿಯಲ್ಲಿ ಇರಿಸಿದೆ.

ಎಫ್​ಎಟಿಎಫ್​​ ಬೂದು ಪಟ್ಟಿ ಎಂದರೇನು..?

ಎಫ್ಎಟಿಎಫ್​ ಪ್ರಕಾರ ಬೂದು ಪಟ್ಟಿ ರಾಷ್ಟ್ರಗಳು ಭಯೋತ್ಪಾದನೆಗೆ ಹಣಕಾಸು ಪೂರೈಸುವ ರಾಷ್ಟ್ರಗಳಾಗಿರುತ್ತವೆ. ಈ ರಾಷ್ಟ್ರಗಳನ್ನು ಭಯೋತ್ಪಾದಕರ ಸ್ವರ್ಗ ಎಂದೇ ಕರೆಯಲಾಗುತ್ತದೆ. ಇಂತಹ ರಾಷ್ಟ್ರಗಳನ್ನು ಎಫ್​ಎಟಿಎಫ್​ ಬೂದು ಪಟ್ಟಿಗೆ ಸೇರಿಸುತ್ತದೆ.

ಈ ಬಾರಿ ಬೂದು ಪಟ್ಟಿಯಿಂದ ಹೊರಬರಲು ಪಾಕ್​ ಸಾಕಷ್ಟು ಕಸರತ್ತು ನಡೆಸಿತ್ತು. ಬೂದು ಪಟ್ಟಿಯ ನಂತರ ಬ್ಲಾಕ್​ ಲಿಸ್ಟ್ ಎಂಬ ಮತ್ತೊಂದು ಪಟ್ಟಿಯನ್ನು ಎಫ್​ಎಟಿಎಫ್​ ತಯಾರಿಸಲಿದ್ದು, ಈ ಪಟ್ಟಿಯಲ್ಲಿರುವ ರಾಷ್ಟ್ರಗಳು ಬೂದು ಪಟ್ಟಿಯಲ್ಲಿರುವ ರಾಷ್ಟ್ರಗಳಲ್ಲಿ ಭಯೋತ್ಪಾದನೆ ಬೆಂಬಲ ನೀಡುವ ಅಂಶಗಳು ತೀವ್ರವಾಗಿ ಕಂಡು ಬಂದರೆ ಅಂತಹ ರಾಷ್ಟ್ರವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.