ETV Bharat / international

ಕಾಬೂಲ್​ಗೆ ಪಾಕ್​ ISI ಮುಖ್ಯಸ್ಥ ಭೇಟಿ.. ತಾಲಿಬಾನ್ ಸರ್ಕಾರ ರಚನೆಗೆ ಫೈಜ್ ಸಲಹೆ​

author img

By

Published : Sep 5, 2021, 7:27 AM IST

ಆಫ್ಘನ್​ ಸರ್ಕಾರ ರಚಿಸುವುದಾಗಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಪಾಕ್​​ ಗುಪ್ತಚರ ಇಲಾಖೆಯ ಮುಖ್ಯಸ್ಥ ಲೆಫ್ಟಿನೆಂಟ್​ ಜನರಲ್​ ಫೈಜ್​ ಹಮೀದ್ ಶನಿವಾರ ಕಾಬೂಲ್​ಗೆ ಭೇಟಿ ನೀಡಿದ್ದಾರೆ. ಇವರ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.

ISI chief in Kabul
ISI chief in Kabul

ಕಾಬೂಲ್​​: ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ ಹಿಂತಿರುಗಿ ಆರು ದಿನ ಕಳೆದರೂ ಅಲ್ಲಿನ್ನೂ ತಾಲಿಬಾನಿಗಳ ಸರ್ಕಾರ ರಚನೆಯಾಗಿಲ್ಲ. ಪಂಜಶೀರ್​​ ಕಣಿವೆಯಲ್ಲಿ ಸಂಘರ್ಷಗಳು ಮುಂದುವರಿಯುತ್ತಲೇ ಇವೆ.

ಈ ಮಧ್ಯೆ ಪಾಕಿಸ್ತಾನ ಗುಪ್ತಚರ ಇಲಾಖೆ (ISI)ಯ ಮುಖ್ಯಸ್ಥ ಲೆಫ್ಟಿನೆಂಟ್​ ಜನರಲ್​ ಫೈಜ್​ ಹಮೀದ್ ಶನಿವಾರ ಕಾಬೂಲ್​ಗೆ ತೆರಳಿದ್ದು, ಆಫ್ಘನ್​ ರಾಯಭಾರಿ ಮನ್ಸೂರ್​ ಅಹ್ಮದ್ ಖಾನ್​ ಅವರನ್ನು ಸ್ವಾಗತಿಸಿದರು.

ಅವರು ಕಾಬೂಲ್​ಗೆ ಯಾಕೆ ಭೇಟಿ ನೀಡಿದ್ದಾರೆ ಅನ್ನೋದ್ರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೂ, ಅಫ್ಘಾನಿಸ್ತಾನ ಡೆಮಾಕ್ರಟಿಕ್ ಪೀಪಲ್ಸ್ ಪಾರ್ಟಿಯ ನಾಯಕ ನಿಸಾರ್ ಅಹ್ಮದ್ ಶೆರ್ಜೈ ಪ್ರಕಾರ, ಪಂಜ್​ಶೀರ್​​ ಕಣಿವೆಯ ಒಕ್ಕೂಟದೊಂದಿಗೆ ಐಎಸ್​ಐ ನಿರಂತರ ಸಂಪರ್ಕದಲ್ಲಿದೆ. ಎರಡೂ ಗುಂಪುಗಳ ಮಧ್ಯೆ ಮಧ್ಯಸ್ಥಿಕೆ ವಹಿಸಲು ಹಾಗೂ ತಾಲಿಬಾನ್​ ಸರ್ಕಾರ ರಚನೆ ಪರಿಶೀಲಿಸಲು ಫೈಜ್​ ಇಲ್ಲಿಗೆ ಬಂದಿದ್ದಾರೆ. ಆಫ್ಘನ್​ ಸೇನೆಯನ್ನು ಮರು ಸಂಘಟಿಸಲು ಅವರೇ ಸಹಾಯ ಮಾಡುತ್ತಾರೆ ಎಂದು ಅಹ್ಮದ್ ಹೇಳಿದ್ದಾರೆ.

‘ನಾನು ಯಾವುದೇ ಸಭೆಗಳನ್ನು ನಡೆಸಿದರೂ, ನನ್ನ ರಾಯಭಾರಿ ಮನ್ಸೂರ್​ಖಾನ್​ ಅದರ ಮೇಲ್ವಿಚಾರಣೆ ನೋಡಿಕೊಳ್ಳಲಿದ್ದಾರೆ. ನಾವು ಆಫ್ಘನ್​ನಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಕೆಲಸ ಮಾಡುತ್ತೇವೆ’ ಎಂದು ಹಮೀದ್ ಅಲ್ಲಿನ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆಂದು ಪಾಕ್ ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನವು ತಾಲಿಬಾನ್​ಗೆ ಮಿಲಿಟರಿ ನೆರವು ಮತ್ತು ಇತರೆ ನೆರವುಗಳನ್ನು ನೀಡಲು ನಿರಾಕರಿಸಿದೆ. ಆದರೂ, ಅಂತಾರಾಷ್ಟ್ರೀಯ ಸಮಯದಾಯವು ಪಾಕ್​, ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಮೇಲೆ ಪ್ರಭಾವ ಬೀರಿದೆ ಎಂದು ಆರೋಪಿಸಿದೆ. ತಾಲಿಬಾನ್ ನಾಯಕರು ಐಎಸ್​ಐನೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಅಫ್ಘನ್​​ನಲ್ಲಿ ಮಹಿಳೆಯರಿಂದ ಹಕ್ಕುಗಳಿಗಾಗಿ ಪ್ರತಿಭಟನೆ : ತಾಲಿಬಾನಿಗಳಿಂದ ಅಶ್ರುವಾಯು ಪ್ರಯೋಗ

ಇತ್ತೀಚೆಗಷ್ಟೇ, ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ವಿ ಶೃಂಗ್ಲಾ, ಪಾಕಿಸ್ತಾನವು ತಾಲಿಬಾನ್‌ಗಳನ್ನು ಪೋಷಿಸಿದೆ ಮತ್ತು ಬೆಂಬಲಿಸಿದೆ ಎಂದು ಹೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.