ಇಸ್ಲಾಮಾಬಾದ್: ಭಾರತ ಮತ್ತು ನೆರೆಯ ಶತ್ರು ರಾಷ್ಟ್ರ ಪಾಕ್ ನಡುವೆ ಉಂಟಾಗಿದ್ದ ಬ್ರಾಂಡ್ ಸಮರಕ್ಕೆ ತೆರೆ ಬೀಳುವ ಸಾಧ್ಯತೆ ಇದೆ. ಬಾಸ್ಮತಿ ಅಕ್ಕಿಯ ಮಾಲಿಕತ್ವವನ್ನು ಉಭಯ ದೇಶಗಳು ಸಮನಾಗಿ ಹಂಚಿಕೊಳ್ಳಲು ಒಪ್ಪಿಗೆ ಸೂಚಿಸಿವೆ. ಈ ಸಂಬಂಧ ಅಪರೂಪದ ಒಪ್ಪಂದವೊಂದನ್ನು ಮಾಡಿಕೊಂಡಿವೆ.
ನೆರೆಯ ಶತ್ರು ರಾಷ್ಟ್ರದೊಂದಿಗೆ ಭೂ ಹಾಗೂ ಜಲ ಗಡಿಯಲ್ಲಿ ವಿವಾದ ಏರ್ಪಟ್ಟಿತ್ತು. ಇದ್ಯಾವುದು ಸದ್ಯಕ್ಕೆ ಅಂತ್ಯ ಕಾಣದೆ ವಿವಾದಗಳಾಗಿಯೇ ಉಳಿದಿವೆ. ಆದರೆ ಯುರೋಪಿಯನ್ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇರುವ ಬಾಸ್ಮತಿ ಅಕ್ಕಿಯ ಮಾಲಿಕತ್ವದ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದು, ಮಾಲಿಕತ್ವವನ್ನು ಜಂಟಿಯಾಗಿ ಹಂಚಿಕೊಂಡಿವೆ.
ಬಾಸ್ಮತಿ ಒನರ್‌ಶಿಪ್‌ಗಾಗಿ ಏರ್ಪಟ್ಟಿದ್ದ ಸಮಸ್ಯೆಗೆ ತಾರ್ಕಿಕ ಪರಿಹಾರ ಕೊಂಡುಕೊಳ್ಳಲಾಗಿದೆ ಎಂದು ಪಾಕಿಸ್ತಾನದ ಅಕ್ಕಿ ರಪ್ತುದಾರ ಫೈಜನ್ ಅಲಿ ಗೌರಿ ತಿಳಿಸಿದ್ದಾರೆ.
ಇದನ್ನೂ ಓದಿ: ನಫ್ತಾಲಿ ಬೆನೆಟ್ ಇಸ್ರೇಲ್ನ ಹೊಸ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ
ಕಳೆದ ಹಲವು ವರ್ಷಗಳಿಂದ ಬಾಸ್ಮತಿ ಅಕ್ಕಿಯ ಮಾಲಿಕತ್ವಕ್ಕಾಗಿ ಭಾರತ, ಪಾಕ್ ನಡುವೆ ಹೋರಾಟ ನಡೆಯುತ್ತಲೇ ಇತ್ತು. ಎರಡೂ ರಾಷ್ಟ್ರಗಳ ಗಡಿ ಭಾಗದಲ್ಲಿ ಈ ಅಕ್ಕಿಯನ್ನ ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಅಕ್ಕಿಗೆ ಯುರೋಪಿಯನ್ ಒಕ್ಕೂಟದಿಂದ ಜಿಯೋಗ್ರಾಫಿಕಲ್ ಇಂಡಿಕೇಷನ್(IG) ಪಡೆಯುವಲ್ಲಿ ಭಾರತ ವಿಫಲವಾಗಿತ್ತು. ಮಾತ್ರವಲ್ಲದೇ ಭಾರತದ ಅರ್ಜಿಗೆ ಪಾಕ್ ವಿರೋಧ ವ್ಯಕ್ತಪಡಿಸಿತ್ತು. ಇದೀಗ ಎರಡೂ ರಾಷ್ಟಗಳುವಿಶೇಷ ಟ್ರೇಡಮಾರ್ಕ್ ಮಾಲಿಕತ್ವವನ್ನು ಹಂಚಿಕೊಂಡಿವೆ.