ETV Bharat / international

ಪಾಕಿಸ್ತಾನದಲ್ಲಿ ಟಿಕ್​ಟಾಕ್ ತಾತ್ಕಾಲಿಕ ಬ್ಯಾನ್ : ಸಿಂಧ್ ಹೈಕೋರ್ಟ್ ಆದೇಶ - ಪಾಕಿಸ್ತಾನದ ಸಿಂಧ್ ಹೈಕೋರ್ಟ್

ಈ ವರ್ಷದ ಮಾರ್ಚ್​​ ತಿಂಗಳಲ್ಲಿ ಟಿಕ್​ಟಾಕ್ ಹಲವು ಆಕ್ಷೇಪಾರ್ಹ ವಿಷಯ, ವಿಚಾರಗಳನ್ನು ಹರಡಲು ಕಾರಣವಾಗುತ್ತಿದೆ ಎಂಬ ಆರೋಪದಲ್ಲಿ ಟಿಕ್​ಟಾಕ್ ಅನ್ನು ಪಾಕಿಸ್ತಾನದಲ್ಲಿ ಬ್ಯಾನ್ ಮಾಡಲಾಗಿತ್ತು.

Pak high court bans TikTok temporarily for spreading immorality'
ಪಾಕಿಸ್ತಾನದಲ್ಲಿ ಟಿಕ್​ಟಾಕ್ ತಾತ್ಕಾಲಿಕ ಬ್ಯಾನ್ : ಸಿಂಧ್ ಹೈಕೋರ್ಟ್ ಆದೇಶ
author img

By

Published : Jun 29, 2021, 3:25 AM IST

ಇಸ್ಲಾಮಾಬಾದ್, ಪಾಕಿಸ್ತಾನ: ಚೀನಾದ ಜನಪ್ರಿಯ ವಿಡಿಯೋ ಶೇರಿಂಗ್ ಮೊಬೈಲ್ ಅಪ್ಲಿಕೇಶನ್ ಟಿಕ್‌ಟಾಕ್ ಅನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವಂತೆ ಪಾಕಿಸ್ತಾನದ ಹೈಕೋರ್ಟ್ ಸೋಮವಾರ ಆದೇಶಿಸಿದೆ.

'ನೈತಿಕವಲ್ಲದ ಮತ್ತು ಅಶ್ಲೀಲ' ವಿಷಯಗಳನ್ನು ಟಿಕ್​ಟಾಕ್ ಹರಡಿರುವುದಾಗಿ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಸಿಂಧ್ ಹೈಕೋರ್ಟ್ ತಾತ್ಕಾಲಿಕವಾಗಿ ಟಿಕ್​ಟಾಕ್​ ಅನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಲಿದೆ.

ಜುಲೈ 8ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೆ ಪಾಕಿಸ್ತಾನದಲ್ಲಿ ಟಿಕ್​ಟಾಕ್ ಬ್ಯಾನ್ ಮಾಡುವಂತೆ ಪಾಕಿಸ್ತಾನ ಟೆಲಿಕಮ್ಯುನಿಕೇಷನ್ ಅಥಾರಿಟಿಗೆ ಸೂಚನೆ ನೀಡಿದೆ.

ಇದೇ ಮೊದಲಲ್ಲ..

ಮಾರ್ಚ್​​ ತಿಂಗಳಲ್ಲಿ ಟಿಕ್​ಟಾಕ್ ಹಲವು ಆಕ್ಷೇಪಾರ್ಹ ವಿಷಯ, ವಿಚಾರಗಳನ್ನು ಹರಡಲು ಕಾರಣವಾಗುತ್ತಿದೆ ಎಂಬ ಆರೋಪದ ವಿಚಾರಣೆ ನಡೆಸಿದ್ದ ಪೇಶಾವರ ಹೈಕೋರ್ಟ್​ ಇದೇ ರೀತಿಯ ಕ್ರಮ ಕೈಗೊಂಡಿತ್ತು. ಆದರೆ ಕೆಲವು ವಾರಗಳ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಟಿಕ್​ಟಾಕ್​ ಹೈಕೋರ್ಟ್​ಗೆ ಭರವಸೆ ನೀಡಿದ ಬೆನ್ನಲ್ಲೇ ನಿಷೇಧವನ್ನು ತೆಗೆದು ಹಾಕಲಾಗಿತ್ತು.

ಇದನ್ನೂ ಓದಿ:ಸಿಕ್ಕಿಲ್ಲ ರೇಟು..ಕೊತ್ತಂಬರಿ ಉಚಿತವಾಗಿ ಹಂಚಿದ ಪಾಲಿಕೆ ಸದಸ್ಯ..!

ಹಿಂದಿನ ವರ್ಷದ ಅಕ್ಟೋಬರ್​ನಲ್ಲಿಯೂ ಸುಮಾರು 10 ದಿನ ಟಿಕ್ ಟಾಕ್ ಬ್ಯಾನ್ ಆಗಿತ್ತು. ಸದ್ಯಕ್ಕೆ ಟಿಕ್​ಟಾಕ್​ ಪಾಕಿಸ್ತಾನದಲ್ಲಿ 39 ಮಿಲಿಯನ್ ಡೌನ್​ಲೋಡ್​ಗಳಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.