ETV Bharat / international

950 ತಾಲಿಬಾನ್​ ಉಗ್ರರ ಸಾವು, 500 ಮಂದಿಗೆ ಗಾಯ: ಅಫ್ಘಾನ್ ಸೇನೆ​ ಭರ್ಜರಿ ಕಾರ್ಯಾಚರಣೆ

ಅಫ್ಘಾನ್ ಪಡೆಗಳು ಮತ್ತು ತಾಲಿಬಾನ್ ನಡುವೆ 20ಕ್ಕೂ ಹೆಚ್ಚು ಪ್ರಾಂತ್ಯಗಳು ಮತ್ತು 9 ನಗರಗಳಲ್ಲಿ ಘರ್ಷಣೆಗಳು ನಡೆಯುತ್ತಿವೆ. ಈ ಮಧ್ಯೆ ಅಫ್ಘಾನ್ ಪಡೆಗಳು ಕಳೆದ 12 ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ ಪರ್ವಾನ್‌ನ ಸೊರ್ಖ್-ಎ-ಪಾರ್ಸಾ ಜಿಲ್ಲೆ ಮತ್ತು ಘಜ್ನಿಯ ಮೇಲ್‌ಸ್ತಾನ್ ಜಿಲ್ಲೆಯ ಮೇಲೆ ಹಿಡಿತ ಸಾಧಿಸಿವೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

Afghan forces
ಅಫ್ಘಾನ್​ ಭರ್ಜರಿ ಕಾರ್ಯಾಚರಣೆ
author img

By

Published : Jul 19, 2021, 8:50 AM IST

ಕಾಬೂಲ್: ಕಳೆದ ನಾಲ್ಕು ದಿನಗಳಲ್ಲಿ ಅಫ್ಘಾನ್​ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ 950ಕ್ಕೂ ಹೆಚ್ಚು ತಾಲಿಬಾನ್ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಮತ್ತು 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿದೆ. ಅಫ್ಘಾನಿಸ್ತಾನದ ಹೆಚ್ಚಿನ ಪ್ರಮುಖ ಪ್ರಾಂತ್ಯಗಳ ಮೇಲೆ ಹಿಡಿತ ಸಾಧಿಸಲು ಅಫ್ಘಾನ್ ಮಿಲಿಟರಿ ಮತ್ತು ನಾಗರಿಕರ ವಿರುದ್ಧ ಭಯೋತ್ಪಾದಕ ಗುಂಪು ತನ್ನ ಹಿಂಸಾತ್ಮಕ ದಾಳಿಯನ್ನು ಮುಂದುವರಿಸಿತ್ತು. ಈ ಸಂದರ್ಭದಲ್ಲಿ ಇಲ್ಲಿನ ಸೇನೆಯು ಕಾರ್ಯಾಚರಣೆ ಕೈಗೊಂಡಿದೆ.

ಅಫ್ಘಾನ್ ಪಡೆಗಳು ಮತ್ತು ತಾಲಿಬಾನ್ ನಡುವೆ 20ಕ್ಕೂ ಹೆಚ್ಚು ಪ್ರಾಂತ್ಯಗಳು ಮತ್ತು 9 ನಗರಗಳಲ್ಲಿ ಘರ್ಷಣೆಗಳು ನಡೆಯುತ್ತಿವೆ. ಈ ಮಧ್ಯೆ ಅಫ್ಘಾನ್ ಪಡೆಗಳು ಕಳೆದ 12 ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ ಪರ್ವಾನ್‌ನ ಸೊರ್ಖ್-ಎ-ಪಾರ್ಸಾ ಜಿಲ್ಲೆ ಮತ್ತು ಘಜ್ನಿಯ ಮೇಲ್‌ಸ್ತಾನ್ ಜಿಲ್ಲೆಯ ಮೇಲೆ ಹಿಡಿತ ಸಾಧಿಸಿವೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ. ಆದರೆ, ನಿಮ್ರೋಜ್‌ನ ಚಖನ್‌ಸೂರ್ ಜಿಲ್ಲೆಯ ಕೇಂದ್ರವು ಮತ್ತೊಮ್ಮೆ ತಾಲಿಬಾನ್‌ ಕೈಸೇರಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನು ಓದಿ: ಶೋಪಿಯಾನ್​ನಲ್ಲಿ ಸೇನಾ ಕಾರ್ಯಾಚರಣೆ: LET ಕಮಾಂಡರ್ ಸೇರಿ ಇಬ್ಬರು ಹತ

ಈವರೆಗೆ 967 ತಾಲಿಬ್‌ಗಳು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನ್ ಭದ್ರತಾ ಮತ್ತು ರಕ್ಷಣಾ ಪಡೆಗಳ ವಕ್ತಾರರು ತಿಳಿಸಿದ್ದಾರೆ. ಈಶಾನ್ಯ ಪ್ರಾಂತ್ಯದ ತಖಾರ್‌ನ ತಾಲೂಕಾನ್ ನಗರದ ಹೊರವಲಯದಲ್ಲಿ ಭಾರಿ ಘರ್ಷಣೆಗಳು ನಡೆದಿದ್ದು, ಕಳೆದ ಎರಡು ವಾರಗಳಿಂದ ನಗರವು ತಾಲಿಬಾನ್‌ನಿಂದ ಆಕ್ರಮಣಕ್ಕೊಳಗಾಗಿದೆ ಎಂದು ಇಲ್ಲಿನ ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

"ಪರಿಸ್ಥಿತಿ ಪ್ರತಿದಿನ ಹದಗೆಡುತ್ತಿದೆ. ಸೇನೆ ಮತ್ತು ತಾಲಿಬಾನ್ ಗುಂಡಿನ ದಾಳಿ ಜನರ ಮನೆಗಳಿಗೆ ಅಪ್ಪಳಿಸಿದೆ. ಈ ಪರಿಸ್ಥಿತಿಯಿಂದ ನಗರವನ್ನು ಕಾಪಾಡಲು ಸರ್ಕಾರ ಪ್ರಯತ್ನಿಸಬೇಕು" ಎಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

ಇತ್ತೀಚಿನ ಬೆಳವಣಿಗೆಗಳಲ್ಲಿ ಅಫ್ಘಾನ್ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಲು ಅಫ್ಘಾನ್ ಅಧಿಕಾರಿಗಳು ಮತ್ತು ತಾಲಿಬಾನ್ ನಿಯೋಗ ದೋಹಾದಲ್ಲಿ ಮಾತುಕತೆ ನಡೆಸುತ್ತಿದೆ. ಮಾತುಕತೆಯಲ್ಲಿ ರಿಪಬ್ಲಿಕ್ ತಂಡದ ಅಧ್ಯಕ್ಷರಾಗಿರುವ ಹೈ ಕೌನ್ಸಿಲ್ ಫಾರ್, ನ್ಯಾಷನಲ್ ರಿಕನ್ಸಿಲಿಯೇಶನ್​ನ ಮುಖ್ಯಸ್ಥ ಅಬ್ದುಲ್ಲಾ ಅಬ್ದುಲ್ಲಾ ಅವರು ಮಾತುಕತೆಯಿಂದ ಸಕಾರಾತ್ಮಕ ಮತ್ತು ರಚನಾತ್ಮಕ ಫಲಿತಾಂಶವನ್ನು ನಿರೀಕ್ಷಿಸುತ್ತಾರೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.