ಟೋಕಿಯೊ: ಉತ್ತರ ಕೊರಿಯಾ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾಯಿಸಿದೆ ಎಂದು ಜಪಾನ್ ಸರ್ಕಾರದ ವರದಿಯನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಜಪಾನ್ ಕೋಸ್ಟ್ ಗಾರ್ಡ್ ಸುದ್ದಿಯ ಪ್ರಕಾರ ಉತ್ತರ ಕೊರಿಯಾ ಗುರುತಿಸಲಾಗದ ಕ್ಷಿಪಣಿಯೊಂದನ್ನು ಉಡ್ಡಯನ ಮಾಡಿದೆ ಎಂದು ಹೇಳಲಾಗುತ್ತಿದೆ. ಜಪಾನ್ ಸಮುದ್ರದತ್ತ ಈ ಕ್ಷಿಪಣಿಯನ್ನು ಹಾರಿಸಲಾಗಿದೆ ಎಂದು ದಕ್ಷಿಣ ಕೊರಿಯಾದ ಸುದ್ದಿ ಸಂಸ್ಥೆಯೊಂದು ಅಲ್ಲಿನ ಮಿಲಿಟರಿ ವರದಿಯನ್ನು ಉಲ್ಲೇಖಿಸಿ ಸುದ್ದಿ ಬಿತ್ತರಿಸಿದೆ.
ಏತನ್ಮಧ್ಯೆ, ಉತ್ತರ ಕೊರಿಯಾದಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ ಸಾಧ್ಯತೆ ಹಿನ್ನೆಲೆಯಲ್ಲಿ ಜಪಾನ್ ಸರ್ಕಾರ ಬಿಕ್ಕಟ್ಟು ನಿರ್ವಹಣಾ ಕೇಂದ್ರವನ್ನು ಸ್ಥಾಪಿಸಿದೆ ಎಂದು ಇನ್ನೊಂದು ಟಿವಿ ವರದಿ ಮಾಡಿದೆ.
ಉತ್ತರ ಕೊರಿಯಾ ಅಕ್ಟೋಬರ್ 2021 ರಲ್ಲಿ ಕ್ಷಿಪಣಿಯೊಂದನ್ನು ಉಡಾವಣೆ ಮಾಡಿತ್ತು ಎಂದು ಹೇಳಲಾಗುತ್ತಿದೆ. ಜಲಾಂತರ್ಗಾಮಿಯಿಂದ ಕ್ಷಿಪಣಿ ಉಡಾಯಿಸುವ ತಂತ್ರಜ್ಞಾನದ ಪರೀಕ್ಷೆ ಹಿನ್ನೆಲೆಯಲ್ಲಿ ಇತರ ರಾಷ್ಟ್ರಗಳು ಚಿಂತಿತವಾಗಿದ್ದು, ಕಳವಳವನ್ನೂ ವ್ಯಕ್ತಪಡಿಸಿವೆ.
ಇದನ್ನೂ ಓದಿ: ಅಫ್ಘನ್ ಸೇನೆಗೆ 'ಆತ್ಮಾಹುತಿ ದಾಳಿಕೋರ'ರನ್ನು ನೇಮಕ ಮಾಡಲಿರುವ ತಾಲಿಬಾನ್