ವೆಲ್ಲಿಂಗ್ಟನ್(ನ್ಯೂಜಿಲ್ಯಾಂಡ್): ಸರ್ಕಾರದ ಒಪ್ಪಿಗೆ ದೃಢೀಕರಣದ ನಂತರ ನ್ಯೂಜಿಲ್ಯಾಂಡ್ ಜನರು ಶೀಘ್ರದಲ್ಲೇ ನೊವಾವ್ಯಾಕ್ಸ್ ಲಸಿಕೆಯನ್ನು ಪಡೆಯಲು ಸನ್ನದ್ಧರಾಗಿದ್ದಾರೆ. ಮೂರನೇ ಲಸಿಕೆ ಲಭ್ಯತೆ ಬಗ್ಗೆ ಮಾತನಾಡಿರುವ ನ್ಯೂಜಿಲ್ಯಾಂಡ್ನ ಸಚಿವ ಕ್ರಿಸ್ ಹಿಪ್ಕಿನ್ಸ್, 18 ಹಾಗೂ ಅದಕ್ಕಿಂತ ಹೆಚ್ಚಿನ ವಯೋಮಾನದವರಿಗೆ 3ನೇ ಲಸಿಕೆಯಾಗಿ ನೊವಾವ್ಯಾಕ್ಸ್ ಲಭ್ಯವಾಗಲಿದೆ ಎಂದು ಅಲ್ಲಿನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ನೊವಾವ್ಯಾಕ್ಸ್ ಪ್ರೊಟೀನ್ ಆಧಾರಿತ ಕೋವಿಡ್ ಲಸಿಕೆಯಾಗಿದೆ. ಇದರ ಹೊರತಾಗಿಯೂ ಫೈಜರ್ ಕೋವಿಡ್ ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನ್ಯೂಜಿಲ್ಯಾಂಡಿಗರು ಬಳಕೆ ಮಾಡುತ್ತಿದ್ದಾರೆ. ಈಗ ನೊವಾವ್ಯಾಕ್ಸ್ ಆಗಮನವಾಗಿರುವುದರಿಂದ ಇಲ್ಲಿನ ಜನರಿಗೆ ಹೆಚ್ಚುವರಿ ಲಸಿಕೆಯಾಗಿ ಲಭ್ಯವಾಗಲಿದೆ ಎಂದು ಸಚಿವ ಹಿಪ್ಕಿನ್ಸ್ ತಿಳಿಸಿದ್ದಾರೆ.
ಇದನ್ನು ಓದಿ:ಒಂದೇ ಕೈಯಲ್ಲಿ ರಷ್ಯಾ ಯುದ್ಧ ಟ್ಯಾಂಕರ್ ನಿಲ್ಲಿಸಿದ ಬಲಶಾಲಿ..ಸಖತ್ ಸದ್ದು ಮಾಡುತ್ತಿದೆ ವೈರಲ್ ವಿಡಿಯೋ!
ನ್ಯೂಜಿಲ್ಯಾಂಡ್ ಈಗಾಗಲೇ ವಿಶ್ವದ ಅತಿ ಹೆಚ್ಚು ಲಸಿಕೆ ಪಡೆದ ದೇಶಗಳಲ್ಲಿ ಒಂದಾಗಿದೆ. ಇಲ್ಲಿನ 95 ರಷ್ಟು ನಾಗರಿಕರು ಲಸಿಕೆ ಪಡೆದುಕೊಂಡು, ಕೋವಿಡ್ ತಡೆಯುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಮೊದಲ ಡೋಸ್‌ಗಳು ಈ ತಿಂಗಳು ನ್ಯೂಜಿಲ್ಯಾಂಡ್ಗೆ ಆಗಮಿಸುವ ನಿರೀಕ್ಷೆಯಿದೆ. ಲಸಿಕೆ ಬಂದ ಬಳಿಕ ವಿತರಣಾ ವೇಳಾಪಟ್ಟಿ ಮತ್ತು ರೋಲ್‌ಔಟ್ ಪ್ರಾರಂಭದ ದಿನಾಂಕವನ್ನು ಖಚಿತಪಡಿಸಲು ಅಧಿಕಾರಿಗಳು ನೋವಾವ್ಯಾಕ್ಸ್ನೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.