ಲಾಹೋರ್ (ಪಾಕಿಸ್ತಾನ): ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮತ್ತು ಪ್ರತಿಪಕ್ಷವಾದ ಪಾಕಿಸ್ತಾನ ಮುಸ್ಲಿಂ ಲೀಗ್ನ ಉಪಾಧ್ಯಕ್ಷೆ ಮರಿಯಮ್ ನವಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.
ಲಾಹೋರ್ನಲ್ಲಿ ಸರ್ಕಾರ ವಿರೋಧಿ ರ್ಯಾಲಿ ನಡೆಸಿದ್ದಕ್ಕಾಗಿ 2 ಸಾವಿರಕ್ಕೂ ಹೆಚ್ಚು ಪಕ್ಷದ ಸದಸ್ಯರು ಹಾಗೂ ಮರಿಯಮ್ ನವಾಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರಧಾನಿ ಇಮ್ರಾನ್ ಖಾನ್ ಹೇಡಿ ಮತ್ತು ಕೈಗೊಂಬೆಯಾಗಿದ್ದು, ಅವರು ಸೈನ್ಯದ ಹಿಂದೆ ಅಡಗಿಕೊಳ್ಳುತ್ತಾರೆ ಎಂದು ರ್ಯಾಲಿಯಲ್ಲಿ ಬಹಿರಂಗವಾಗಿ ಮರಿಯಮ್ ಹೇಳಿದ್ದರು.