ETV Bharat / international

ಮತಾಂತರಕ್ಕೆ ವಿರೋಧಿಸಿದ ಹಿಂದೂ ಯುವತಿಯ ದಾರುಣ ಹತ್ಯೆ: ಪಾಕ್‌ನ ಸಿಂಧ್‌ನಲ್ಲಿ ಮುಂದುವರೆದ ದೌರ್ಜನ್ಯ

ಮದುವೆಯಾಗುವ ಉದ್ದೇಶದಿಂದ ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರ ಮಾಡಲು ಮುಂದಾದಾಗ ಆಕೆ ನಿರಾಕರಿಸಿದ್ದು, ಇದರಿಂದ ಕುಪಿತಗೊಂಡಿರುವ ದುಷ್ಕರ್ಮಿ ನಡುರಸ್ತೆಯಲ್ಲೇ ಆಕೆಯನ್ನು ಗುಂಡಿಕ್ಕಿ ನಿರ್ದಯವಾಗಿ ಕೊಲೆ ಮಾಡಿದ್ದಾನೆ.

Man who killed Hindu girl in Pak wanted to marry

author img

By

Published : Mar 22, 2022, 4:05 PM IST

ಇಸ್ಲಾಮಾಬಾದ್​​: ದುಷ್ಕರ್ಮಿಯೊಬ್ಬ 18 ವರ್ಷದ ಹಿಂದೂ ಯುವತಿಗೆ ನಡುರಸ್ತೆಯಲ್ಲೇ ಮನಬಂದಂತೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಯುವತಿಯನ್ನು ಮದುವೆಯಾಗಲು ನಿರ್ಧರಿಸಿದ್ದ ವ್ಯಕ್ತಿ ಆಕೆಯನ್ನು ಇಸ್ಲಾಂಗೆ ಮತಾಂತರ ಮಾಡಲು ಮುಂದಾಗಿದ್ದ ಎಂದು ತಿಳಿದು ಬಂದಿದೆ.

ಮತಾಂತರಗೊಳ್ಳಲು ವಿರೋಧಿಸಿದ ಯುವತಿಯ ಮೇಲೆ ಗುಂಡಿನ ದುಷ್ಕರ್ಮಿ ಗುಂಡಿನ ದಾಳಿ ನಡೆಸಿದ್ದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಪಾಕಿಸ್ತಾನದ ಸುದ್ದಿಸಂಸ್ಥೆಯೊಂದು ವರದಿ ಮಾಡಿರುವ ಪ್ರಕಾರ, ಆರೋಪಿಯನ್ನು ವಾಹೀದ್​ ಎಂದು ಗುರುತಿಸಲಾಗಿದೆ. ಈತ ಹಿಂದೂ ಯುವತಿ ಪೂಜಾ ಕುಮಾರಿ ಜೊತೆ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದ. ಇದೇ ಕಾರಣಕ್ಕಾಗಿ ಆಕೆಯನ್ನು ಇಸ್ಲಾಂಗೆ ಮತಾಂತರ ಮಾಡಲು ಮುಂದಾಗಿದ್ದ ಎಂದು ತಿಳಿದು ಬಂದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ಘಟನೆ ನಡೆಯುತ್ತಿದ್ದಂತೆ ಪಾಕ್​ನಲ್ಲಿರುವ ಅಲ್ಪಸಂಖ್ಯಾತರು ಪೂಜಾ ಸಾವಿಗೆ ನ್ಯಾಯ ಒದಗಿಸಿಕೊಡುವಂತೆ ಪ್ರತಿಭಟನೆ ನಡೆಸುತ್ತಿದ್ದು, 'ಜಸ್ಟೀಸ್​ ಫಾರ್​ ಪೂಜಾ ಕುಮಾರಿ' ಎಂಬ ಹ್ಯಾಶ್​ಟ್ಯಾಗ್​​​​ನೊಂದಿಗೆ ಟ್ವಿಟರ್​​ನಲ್ಲಿ ಅಭಿಯಾನ ನಡೆಯುತ್ತಿದೆ.

ಇದನ್ನೂ ಓದಿ: ಪೆಟ್ರೋಲ್​, ಡೀಸೆಲ್​ ಮಾತ್ರವಲ್ಲ ಈ ಎಲ್ಲ ವಸ್ತುಗಳೂ ದುಬಾರಿ, ಗ್ರಾಹಕರ ಜೇಬಿಗೆ ಕತ್ತರಿ!

ಪಾಕಿಸ್ತಾನದ ಸಿಂಧ್​ ಪ್ರದೇಶದಲ್ಲಿ ಹಿಂದೂ ಸಮುದಾಯದ ಅಲ್ಪಸಂಖ್ಯಾತರೇ ಹೆಚ್ಚಾಗಿ ವಾಸವಾಗಿದ್ದಾರೆ. ಈ ಪ್ರದೇಶದಲ್ಲಿ ಮತೀಯ ಮೂಲಭೂತವಾದಿಗಳಿಂದ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಲೇ ಇವೆ. ಹಿಂದೂ, ಕ್ರಿಶ್ಚಿಯನ್‌, ಸಿಖ್‌ ಧರ್ಮೀಯ ಮಹಿಳೆಯರನ್ನು ಬಲವಂತವಾಗಿ ಮತಾಂತರಗೊಳಿಸಿ, ಅವರೊಂದಿಗೆ ಮದುವೆ ಮಾಡಿಕೊಂಡಿರುವ ಅನೇಕ ನಿದರ್ಶನಗಳಿವೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.