ETV Bharat / international

ಅಂದು ಶಾಲೆಗೆ ಹೋಗಿದ್ದಕ್ಕೆ ಉಗ್ರರಿಂದ ದೌರ್ಜನ್ಯ.. ಇಂದು ಆಕ್ಸ್‌ಫರ್ಡ್ ವಿವಿಯಲ್ಲಿ ಪದವಿ ಪಡೆದ ಮಲಾಲಾ!!

ಶಾಲೆಗೆ ಹೋಗಿದ್ದಕ್ಕಾಗಿ ತಾಲಿಬಾನ್​ನಿಂದ ದೌರ್ಜನ್ಯಕ್ಕೆ ಒಳಗಾಗಿದ್ದ ಮಲಾಲಾ ಯೂಸಫ್‌ ಝಾ, ಇದೀಗ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ..

Malala celebrates completion of Oxford degree
ಆಕ್ಸ್‌ಫರ್ಡ್ ವಿವಿಯಲ್ಲಿ ಪದವಿ ಪಡೆದ ಮಲಾಲ
author img

By

Published : Jun 19, 2020, 4:31 PM IST

ಇಸ್ಲಾಮಾಬಾದ್ : ಪಾಕಿಸ್ತಾನದ ಶಿಕ್ಷಣ ಹೋರಾಟಗಾರ್ತಿ ಮತ್ತು ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಯೂಸಫ್‌ ಝಾ, ಇತ್ತೀಚೆಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ತತ್ತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

  • Hard to express my joy and gratitude right now as I completed my Philosophy, Politics and Economics degree at Oxford. I don’t know what’s ahead. For now, it will be Netflix, reading and sleep. 😴 pic.twitter.com/AUxN55cUAf

    — Malala (@Malala) June 19, 2020 " class="align-text-top noRightClick twitterSection" data=" ">

ಸ್ವಾತ್ ಕಣಿವೆಯಲ್ಲಿ ಶಾಲೆಗೆ ಹೋಗಿದ್ದಕ್ಕಾಗಿ 2012ರಲ್ಲಿ ತಾಲಿಬಾನ್ ಉಗ್ರರು,​ ಮಲಾಲಾ ಮೇಲೆ ದೌರ್ಜನ್ಯ ನಡೆಸಿದ್ದರು. ಆದರೆ, ಆದೇ ಯುವತಿ ಇಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಲಾಲಾ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ವಿಷಯ ತಿಳಿಸಿದ್ದಾರೆ. ಕುಟುಂಬದೊಂದಿಗೆ ಕೇಕ್​ ಕತ್ತರಿಸಿ ಸಂಭ್ರಮಿಸುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ.

'ನಾನು ಆಕ್ಸ್‌ಫರ್ಡ್‌ನಲ್ಲಿ ನನ್ನ ತತ್ವಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರ ಪದವಿ ಪೂರ್ಣಗೊಳಿಸಿದ್ದೇನೆ. ಇದೀಗ ನನ್ನ ಸಂತೋಷ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಕಷ್ಟ. ಮುಂದೆ ಏನಿದೆ ಎಂದು ನನಗೆ ತಿಳಿದಿಲ್ಲ. ಸದ್ಯಕ್ಕೆ ನೆಟ್‌ಫ್ಲಿಕ್ಸ್, ಓದು ಮತ್ತು ನಿದ್ರೆ ಮಾತ್ರ' ಎಂದಿದ್ದಾರೆ.

ಜೂನ್ 8ರಂದು ಯೂಟ್ಯೂಬ್ ಸ್ಪೆಷಲ್, ಡಿಯರ್​ ಕ್ಲಾಸ್​ ಆಫ್ 2020ನಲ್ಲಿ ಭಾಗವಹಿಸಿದ್ದಾಗ ತಮ್ಮ ಪದವಿ ಸುದ್ದಿ ಹಂಚಿಕೊಂಡಿದ್ದರು. ಆದರೆ, ಇನ್ನೂ ನಾಲ್ಕು ಪರೀಕ್ಷೆಗಳು ಬಾಕಿ ಇರುವುದಾಗಿ ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.