ETV Bharat / international

ದಶಕದ ಬಳಿಕ ಕುವೈತ್‌ನಲ್ಲಿ ವ್ಯಾಪಾರ, ಉದ್ಯೋಗಾವಕಾಶ ಪಡೆಯಲಿದೆ ಪಾಕಿಸ್ತಾನ

2011ರಲ್ಲಿ ಪಾಕಿಸ್ತಾನದ ನಾಗರಿಕರಿಗೆ ವೀಸಾ ನೀಡುವುದನ್ನು ನಿಷೇಧಿಸಿದ್ದ ಕುವೈತ್ ಇದೀಗ ದಶಕದ ಬಳಿಕ ವೀಸಾ ಪುನಾರಂಭಿಸಲು ಮುಂದಾಗಿದೆ.

author img

By

Published : May 31, 2021, 10:35 AM IST

Kuwait resumes visas for Pakistani citizens after ten-year suspension
ದಶಕದ ಬಳಿಕ ಪಾಕ್​ ನಾಗರೀಕರಿಗೆ ವೀಸಾ ಪುನರಾರಂಭಿಸಿದ ಕುವೈತ್

ಕುವೈತ್: ಬರೋಬ್ಬರಿ 10 ವರ್ಷಗಳ ಬಳಿಕ ಕುವೈತ್ ದೇಶವು ಪಾಕಿಸ್ತಾನದ ನಾಗರಿಕರಿಗೆ ಕುಟುಂಬ ಮತ್ತು ವ್ಯವಹಾರ ಸಂಬಂಧಿತ ವೀಸಾಗಳನ್ನು ಪುನರಾರಂಭಿಸುವುದಾಗಿ ತಿಳಿಸಿದೆ.

ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವ ಶೇಖ್ ರಶೀದ್ ಮತ್ತು ಕುವೈತ್ ಪ್ರಧಾನಿ ಶೇಖ್ ಸಬಾ ಅಲ್-ಖಾಲಿದ್ ನಡುವಿನ ಸಭೆಯ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಾಕ್​ನ ಎಕ್ಸ್​ಪ್ರೆಸ್ ಟ್ರಿಬ್ಯೂನ್ ಸುದ್ದಿ ಪತ್ರಿಕೆ ವರದಿ ಮಾಡಿದೆ.

ಪಾಕಿಸ್ತಾನ, ಇರಾನ್, ಸಿರಿಯಾ ಮತ್ತು ಅಫ್ಘಾನಿಸ್ತಾನ ದೇಶಗಳಲ್ಲಿನ ಕಠಿಣ ಭದ್ರತಾ ಪರಿಸ್ಥಿತಿಗಳನ್ನು ಉಲ್ಲೇಖಿಸಿ 2011 ರಲ್ಲಿ ಕುವೈತ್ ಈ ರಾಷ್ಟ್ರಗಳ ನಾಗರಿಕರಿಗೆ ವೀಸಾ ನೀಡುವುದನ್ನು ನಿಷೇಧಿಸಿತ್ತು. ಅಂದಿನಿಂದ ಪಾಕಿಸ್ತಾನ ಸರ್ಕಾರ ತನ್ನ ನಾಗರಿಕರಿಗೆ ವೀಸಾ ಮರುಸ್ಥಾಪಿಸಲು ಹಲವಾರು ಪ್ರಯತ್ನಗಳನ್ನು ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಇದನ್ನೂ ಓದಿ: ಕಾಶ್ಮೀರದ ವಿಶೇಷ ಸ್ಥಾನಮಾನ ಮರು ಸ್ಥಾಪಿಸಿದರೆ ಭಾರತದೊಂದಿಗೆ ಮಾತುಕತೆ: ಪಾಕ್​ ಪ್ರಧಾನಿ

2017 ರಲ್ಲಿ ಅಂದಿನ ಪಾಕ್ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರು ಕುವೈತ್ ಭೇಟಿಯ ಸಂದರ್ಭದಲ್ಲಿ ವೀಸಾಗಳನ್ನು ಪುನರಾರಂಭಿಸುವಂತೆ ಮನವಿ ಮಾಡಿದ್ದರು. ಆ ನಂತರ ವೀಸಾ ನಿರ್ಬಂಧವನ್ನು ತೆಗೆದು ಹಾಕುವುದಾಗಿ ಕುವೈತ್ ಸರ್ಕಾರ ಘೋಷಿಸಿತ್ತಾದರೂ ಅದನ್ನು ಜಾರಿಗೆ ತಂದಿರಲಿಲ್ಲ.

ಇದೀಗ ಉಭಯ ರಾಷ್ಟ್ರಗಳ ನಡುವೆ ನಡೆದ ಸಭೆಯಲ್ಲಿ ವೀಸಾ ನಿಷೇಧದಿಂದ ಪಾಕಿಸ್ತಾನಿ ಕುಟುಂಬಗಳು ಮತ್ತು ವ್ಯಾಪಾರ ವಲಯ ಎದುರಿಸಿದ ಅಗಾಧ ಸಮಸ್ಯೆಗಳನ್ನು ವಿವರಿಸಿದ್ದು, ಕುವೈತ್‌ನ ಆರಂಭಿಕ ಬೆಳವಣಿಗೆಯಲ್ಲಿ ಪಾಕಿಸ್ತಾನದ ಕಾರ್ಮಿಕರು ಮುಖ್ಯ ಪಾತ್ರ ವಹಿಸಿದ್ದಾರೆ. ವೀಸಾ ಮರುಸ್ಥಾಪನೆಯು ಪಾಕಿಸ್ತಾನಿಗಳಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಅಲ್ಲದೇ ಉಭಯ ದೇಶಗಳ ನಡುವಿನ ವ್ಯಾಪಾರವನ್ನೂ ಹೆಚ್ಚಿಸುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಹೀಗಾಗಿ ಕುವೈತ್ ತನ್ನ ನಿಲುವು ಬದಲಿಸಿ ಪಾಕ್​ ನಾಗರೀಕರಿಗೆ ವೀಸಾ ಪುನರಾರಂಭಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.