ETV Bharat / international

ಕೊರೊನಾ ಬಳಿಕ 'ಹಸಿರು ಮನೆ' ಹಾಳು ಮಾಡೋದ್ರಲ್ಲೂ ಚೀನಾಗೆ ಜಾಗತಿಕವಾಗಿ ಅಗ್ರಸ್ಥಾನ - ಭಾರತದಲ್ಲಿ ಹಸಿರು ಮನೆ ಅನಿಲಗಳು

ಹಸಿರು ಮನೆ ಅನಿಲಗಳ ಉತ್ಪಾದನೆ ಪ್ರಮಾಣದಲ್ಲಿ ಜಗತ್ತಿನ 167 ನಗರಗಳಲ್ಲಿ ಮೊದಲ 6 ಸ್ಥಾನಗಳನ್ನು ಚೀನಾ ಹೊಂದಿದೆ. ಚೀನಾದ ಹಂಡನ್, ಶಾಂಘೈ, ಶೌಜು ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದಿದೆ. ಏಳನೇ ಸ್ಥಾನದಲ್ಲಿ ರಷ್ಯಾದ ಮಾಸ್ಕೋ, 17ನೇ ಸ್ಥಾನದಲ್ಲಿ ಜಪಾನ್​ ಟೋಕಿಯೋ ಇದೆ.

Just 25 'mega-cities' produce 52 per cent of the world's urban greenhouse gas emissions
ಹಸಿರು ಮನೆ ಅನಿಲಗಳ ಪ್ರಮಾಣ ಹೊರಸೂಸುವಿಕೆ : ಚೀನಾದ್ದೇ ಮೇಲುಗೈ..!
author img

By

Published : Jul 15, 2021, 9:20 PM IST

ನವದೆಹಲಿ: ಏಷ್ಯಾ ಪೆಸಿಫಿಕ್ ಭಾಗದಲ್ಲಿ ಮಾತ್ರವಲ್ಲದೇ, ಜಗತ್ತಿನಾದ್ಯಂತ ತನ್ನ ಪ್ರಾಬಲ್ಯವನ್ನು ಸಾಧಿಸಬೇಕೆಂಬ ಉದ್ದೇಶದಿಂದ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿರುವ ಚೀನಾಗೆ ಕೊರೊನಾ ಸೃಷ್ಟಿ ಬಳಿಕ ಮತ್ತೊಂದು ಕುಖ್ಯಾತಿ ಅಂಟಿಕೊಂಡಿದೆ. ಚೀನಾದ ಬಹುತೇಕ ನಗರಗಳು ಹಸಿರು ಮನೆ ಅನಿಲ ಹೆಚ್ಚಾಗಿ ಉತ್ಪಾದಿಸಿ ಪರಿಸರ ನಾಶಕ್ಕೆ ಕಾರಣವಾಗಿವೆ ಎನ್ನಲಾಗಿದೆ.

ಹಸಿರು ಮನೆ ಅನಿಲವನ್ನು ಹೊರಹಾಕುವ ಜಗತ್ತಿನ 53 ದೇಶಗಳ 167 ನಗರಗಳು ಪಟ್ಟಿ ಮಾಡಲಾಗಿದ್ದು, ಒಟ್ಟು ಹಸಿರು ಮನೆ ಅನಿಲ ಪ್ರಮಾಣದ ಅರ್ಧದಷ್ಟನ್ನು ಕೇವಲ 25 ನಗರಗಳು ಹೊರಹಾಕುತ್ತವೆ. ಆ 25 ನಗರಗಳಲ್ಲಿ ಬಹುತೇಕ ನಗರಗಳು ಚೀನಾದಲ್ಲಿವೆ ಎಂದು ತಿಳಿದುಬಂದಿದೆ.

ಫ್ರಾಂಟಿಯರ್ ಎಂಬ ಜರ್ನಲ್​ನಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದ್ದು, ವಿಶ್ವದ ಶ್ರೀಮಂತ ನಗರಗಳಲ್ಲಿ ಅಬಿವೃದ್ಧಿಶೀಲ ರಾಷ್ಟ್ರಗಳಿಗಿಂತ ಹೆಚ್ಚು ಹಸಿರು ಮನೆ ಅನಿಲ ಉತ್ಪಾದನೆಯಾಗುತ್ತದೆ ಸಂಶೋಧನೆಯಲ್ಲಿ ಬಹಿರಂಗವಾಗಿದೆ.

ಮಾಸ್ಕೋ ಮತ್ತು ಟೋಕಿಯೊ ಜೊತೆಗೆ 23 ಚೀನಾದ ನಗರಗಳಲ್ಲಿ ಉತ್ಪಾದನೆಯಾಗುವ ಹಸಿರು ಮನೆ ಅನಿಲ ಜಗತ್ತಿನಲ್ಲಿ ಉತ್ಪಾದನೆಯಾಗುವ ಒಟ್ಟು ಹಸಿರು ಮನೆ ಅನಿಲದಲ್ಲಿ ಶೇಕಡಾ 52 ರಷ್ಟಿದೆ ಎಂದು ಸಂಶೋಧನೆ ಹೇಳಿದೆ.

ಈ ಸಂಶೋಧನೆ ಚೀನಾ, ಭಾರತ, ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್​​​​ನಲ್ಲಿ ಬರುವ ನಗರಗಳನ್ನು ಹೆಚ್ಚಾಗಿ ಗಣನೆಗೆ ತೆಗೆದುಕೊಂಡಿತ್ತು. ಏಕೆಂದರೆ ಈ ದೇಶಗಳಲ್ಲೇ ಅತಿ ಮಾಲಿನ್ಯ ಉಂಟುಮಾಡುವ ಮತ್ತು ಕೈಗಾರಿಕೆಗಳು ಹೆಚ್ಚಿರುವ ಕಾರಣದಿಂದ ಹಸಿರು ಮನೆ ಅನಿಲ ಹೆಚ್ಚಳಕ್ಕೆ ಸಾಕಷ್ಟು ಕೊಡುಗೆ ನೀಡುತ್ತವೆ ಎನ್ನಲಾಗಿತ್ತು.

ಹಸಿರು ಮನೆ ಅನಿಲಗಳಉತ್ಪಾದನೆ ಪ್ರಮಾಣದಲ್ಲಿ 167 ನಗರಗಳಲ್ಲಿ ಮೊದಲ ಆರು ಸ್ಥಾನ ಚೀನಾ ಹೊಂದಿದೆ. ಚೀನಾದ ಹಂಡನ್, ಶಾಂಘೈ, ಶೌಜು ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದಿದೆ. ಏಳನೇ ಸ್ಥಾನದಲ್ಲಿ ರಷ್ಯಾದ ಮಾಸ್ಕೋ, 17ನೇ ಸ್ಥಾನದಲ್ಲಿ ಜಪಾನ್​ ಟೋಕಿಯೋ ಇದೆ.

ಪಟ್ಟಿಯಲ್ಲಿವೆ ಮುಂಬೈ, ಚೆನ್ನೈ:

ಇನ್ನು ಭಾರತದ ಮುಂಬೈ ಮತ್ತು ಚೆನ್ನೈ ನಗರಗಳೂ ಕೂಡಾ ಅತಿ ಹೆಚ್ಚು ಹಸಿರು ಮನೆ ಅನಿಲಗಳನ್ನು ಉತ್ಪಾದನೆ ಮಾಡುವ 167 ನಗರಗಳ ಪಟ್ಟಿಯಲ್ಲಿವೆ. ಮುಂಬೈ 63 ಸ್ಥಾನದಲ್ಲಿದ್ದರೆ, ಚೆನ್ನೈ 72ನೇ ಸ್ಥಾನದಲ್ಲಿದೆ.

ಹಸಿರು ಮನೆ ಅನಿಲ ಎಂದರೇನು?

ಸರಳವಾಗಿ ಭೂಮಿಯ ಮೇಲಿನ ಉಷ್ಣತೆಯನ್ನು ಹೆಚ್ಚಿಸುವ ಅನಿಲಗಳನ್ನು ಹಸಿರು ಮನೆ ಅನಿಲಗಳು ಎನ್ನಲಾಗುತ್ತದೆ. ನೀರಾವಿ, ಇಂಗಾಲದ ಡೈಆಕ್ಸೈಡ್‌, ಮೀಥೇನ್, ನೈಟ್ರಸ್‌ ಆಕ್ಸೈಡ್ ಮತ್ತು ಕ್ಲೋರೋ ಫ್ಲೋರೋ ಕಾರ್ಬನ್​ಗಳು ಹಸಿರು ಮನೆ ಅನಿಲಗಳಾಗಿವೆ.

ವಾತಾವರಣದಲ್ಲಿ ಇರುವ ಈ ಅನಿಲಗಳು ಸೂರ್ಯನಿಂದ ಬರುವ ಶಾಖವನ್ನ ಹೀರಿಕೊಳ್ಳುತ್ತವೆ ಮಾತ್ರವಲ್ಲದೇ, ಭೂಮಿಯಿಂದ ಹೊರಗೆ ಪ್ರತಿಫಲನವಾಗಬೇಕಾದ ಶಾಖವನ್ನೂ ತಡೆಯುತ್ತವೆ. ಈ ಮೂಲಕ ಭೂಮಿಯ ಮೇಲ್ಮೆಯಲ್ಲಿ ಉಷ್ಣತೆ ಹೆಚ್ಚಾಗುವ ಸಾಧ್ಯತೆಯಿದೆ.

ಜಾಗತಿಕ ತಾಪಮಾನ ಏರಿಕೆ, ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವದಲ್ಲಿನ ಮಂಜುಗಡ್ಡೆಗಳು, ಹಿಮಾಲಯದಲ್ಲಿನ ಮಂಜುಗಡ್ಡೆ ವೇಗವಾಗಿ ಕರಗುವಿಕೆ, ಸಮುದ್ರದ ನೀರಿನ ಮಟ್ಟ ಏರಿಕೆ ಹಸಿರು ಮನೆ ಅನಿಲಗಳ ಪ್ರಮಾಣ ಏರಿಕೆಯಿಂದಾಗುವ ದುಷ್ಪರಿಣಾಮಗಳಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.