ಟೋಕಿಯೊ (ಜಪಾನ್): ಕೊರೊನಾ ವೈರಸ್ ಹಿನ್ನೆಲೆ 2020ರಲ್ಲಿ ಜಪಾನ್‌ನಲ್ಲಿ ಉದ್ಯೋಗಗಳ ಲಭ್ಯತೆಯು 45 ವರ್ಷಗಳಲ್ಲೇ ತೀವ್ರ ಕುಸಿತ ಕಂಡಿದೆ. ಕಳೆದ 11 ವರ್ಷಗಳಲ್ಲಿ ದೇಶದ ನಿರುದ್ಯೋಗ ದರವು ಮೊದಲ ಬಾರಿಗೆ ಹೆಚ್ಚಾಗಿದೆ ಎಂದು ಸರ್ಕಾರ ತನ್ನ ವರದಿಯಲ್ಲಿ ತಿಳಿಸಿದೆ.
ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯದ ಪ್ರಕಾರ, ಉದ್ಯೋಗ ಲಭ್ಯತೆಯ ಅನುಪಾತವು 0.42 ಪಾಯಿಂಟ್‌ನಿಂದ 1.18ಕ್ಕೆ ಇಳಿದಿದ್ದು, ಇದು ಕೆಲಸ ಬಯಸುವ ಪ್ರತಿ 100 ಜನರಿಗೆ 118 ಉದ್ಯೋಗಾವಕಾಶಗಳನ್ನು ಹೊಂದಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
2020ರಲ್ಲಿ ನಿರುದ್ಯೋಗ ದರವು ಶೇಕಡಾ 2.8ರಷ್ಟಿದ್ದು, ಹಿಂದಿನ ವರ್ಷಕ್ಕಿಂತ ಶೇಕಡಾ 0.4ರಷ್ಟು ಏರಿಕೆಯಾಗಿದೆ ಎಂದು ಆಂತರಿಕ ವ್ಯವಹಾರ ಮತ್ತು ಸಂವಹನ ಸಚಿವಾಲಯ ತಿಳಿಸಿದೆ.
2020ರಲ್ಲಿ ನಿರುದ್ಯೋಗಿಗಳ ಸಂಖ್ಯೆ 290,000ದಿಂದ 1.91 ಮಿಲಿಯನ್ ಜನರಿಗೆ ಏರಿದ್ದು, ಉದ್ಯೋಗಿಗಳ ಸಂಖ್ಯೆ 480,000ರಷ್ಟು ಇಳಿದು 66.76 ಮಿಲಿಯನ್ಗೆ ತಲುಪಿದೆ.