ಟೋಕಿಯೊ(ಜಪಾನ್): ಜಪಾನ್ ಮತ್ತೊಮ್ಮೆ ವಿಶ್ವದ ಗಮನ ಸೆಳೆದಿದೆ. ಪ್ರಸ್ತುತ ಪರೀಕ್ಷಾರ್ಥ ಓಡಾಟದಲ್ಲಿ ಬುಲೆಟ್ ಟ್ರೈನ್ ಪ್ರತಿ ಗಂಟೆಗೆ 400ಕಿ.ಮೀ (249ಮೈಲಿ) ಸಾಮರ್ಥ್ಯವನ್ನು ತೋರಿಸಿದೆ. ಈ ಬುಲೆಟ್ ಟ್ರೈನ್ಗೆ ಅಲ್ಫಾ-ಎಕ್ಸ್ ಎಂದು ಹೆಸರಿಸಲಾಗಿದೆ.
2030ರ ವೇಳೆಗೆ ಇದು ಅಧಿಕೃತವಾಗಿ ತನ್ನ ಓಡಾಟ ಆರಂಭಿಸಲಿದೆ. ಈ ವೇಳೆ ರೈಲು ಪ್ರತಿ ಗಂಟೆಗೆ 360ಕಿ.ಮೀ (224ಮೈಲಿ) ವೇಗದಲ್ಲಿ ಓಡಲಿದೆ.
ಅಲ್ಫಾ-ಎಕ್ಸ್ ವಿಶ್ವದಲ್ಲೇ ಅತ್ಯಂತ ವೇಗದ ಬುಲೆಟ್ ಟ್ರೈನ್ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಲಿದೆ. ಇದೇ ರೀತಿ ವಿನ್ಯಾಸಪಡಿಸಲಾಗಿರುವ ಚೀನಾದ ಬುಲೆಟ್ ಟ್ರೈನ್ ವೇಗ ಅಲ್ಫಾ-ಎಕ್ಸ್ ಗಿಂತ 10ಕಿ.ಮೀ ಕಡಿಮೆ ಇದೆ.