ಜೆರುಸಲೆಮ್ (ಇಸ್ರೇಲ್): ಇಸ್ರೇಲ್ನ ರಕ್ಷಣಾ ಸಚಿವಾಲಯವು 31 ವೆಸ್ಟ್ ಬ್ಯಾಂಕ್ ವಸಾಹತು ನಿರ್ಮಾಣಕ್ಕಾಗಿ ಬುಧವಾರ ಸುಧಾರಿತ ಯೋಜನೆಗಳನ್ನು ರೂಪಿಸಿದ್ದು, ಇದು ದೇಶದ ಹೊಸ ಸರ್ಕಾರದ ಅಡಿ ಇಂತಹ ಮೊದಲ ಕ್ರಮವಾಗಿದೆ.
ಸಿವಿಲ್ ಅಡ್ಮಿನಿಸ್ಟ್ರೇಷನ್ ಅನುಮೋದಿಸಿದ ಯೋಜನೆಗಳಲ್ಲಿ ಶಾಪಿಂಗ್ ಸೆಂಟರ್, ವಿಶೇಷ ಅಗತ್ಯ ಶಾಲೆ ಮತ್ತು ಹಲವಾರು ಮೂಲಸೌಕರ್ಯ ಯೋಜನೆಗಳು ಮತ್ತು ಅಸ್ತಿತ್ವದಲ್ಲಿರುವ ವೆಸ್ಟ್ ಬ್ಯಾಂಕ್ ವಸಾಹತುಗಳಲ್ಲಿನ ವಲಯ ಬದಲಾವಣೆಗಳು ಸೇರಿವೆ ಎಂದು ಇಸ್ರೇಲಿ ಮಾಧ್ಯಮ ವರದಿ ಮಾಡಿದೆ.
ಇಸ್ರೇಲಿ ಪ್ರಧಾನಿ ನಫ್ತಾಲಿ ಬೆನೆಟ್ ಅವರ ಹೊಸ ಸರ್ಕಾರವು ಈ ತಿಂಗಳ ಆರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದೆ. ನಾಲ್ಕು ಪ್ರಮುಖ ಚುನಾವಣೆಗಳ ನಂತರ ದೀರ್ಘಕಾಲದ ನಾಯಕ ಬೆಂಜಮಿನ್ ನೆತನ್ಯಾಹು ಅವರನ್ನು ಈ ಬಾರಿ ಆಯ್ಕೆ ಮಾಡಲಾಗಿಲ್ಲ.
ಹೊಸ ಸರ್ಕಾರ ಕಾರ್ಯನಿರ್ವಹಿಸಲು ಎಲ್ಲ ಪಕ್ಷಗಳು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಬೇಕಾಗುತ್ತದೆ ಎಂದು ಇಸ್ರೇಲಿ ಹೊಸ ಪ್ರಧಾನಿ ನಫ್ತಾಲಿ ಬೆನೆಟ್ ಹೇಳಿದ್ದಾರೆ.