ಬಾಗ್ದಾದ್(ಇರಾಕ್): ವಿದ್ಯುತ್ ಸಮಸ್ಯೆಯಿರುವ ಐದು ಪ್ರದೇಶಗಳಲ್ಲಿ ಸೌರ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಮೂಲದ ನವೀಕರಿಸಬಹುದಾದ ಇಂಧನ ಡೆವಲಪರ್ ಜೊತೆ ಇರಾಕ್ ಒಪ್ಪಂದಕ್ಕೆ ಸಹಿ ಹಾಕಿದೆ.
ಬಾಗ್ದಾದ್‌ನಲ್ಲಿ ಬುಧವಾರ ಇರಾಕ್ ಪ್ರಧಾನಿ ಮುಸ್ತಫಾ ಅಲ್-ಕಾಧಿಮಿ ಅವರ ಸಮ್ಮುಖದಲ್ಲಿ ಇರಾಕ್ ಅಧಿಕಾರಿಗಳು ಮತ್ತು ಮಸ್ದಾರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಒಪ್ಪಂದಕ್ಕೆ ಸಹಿ ಹಾಕಿದ್ರು. ಒಪ್ಪಂದವು 1,000 ಮೆಗಾವ್ಯಾಟ್‌ಗಳ ವಿದ್ಯುತ್ ಉತ್ಪಾದನಾ ಸ್ಥಾವರ ನಿರ್ಮಿಸುವುದಾಗಿದೆ. ದಕ್ಷಿಣ ಇರಾಕ್‌ನ ಧಿ ಕರ್, ಮಧ್ಯ ಇರಾಕ್‌ನ ರಮಾಡಿ, ಉತ್ತರದಲ್ಲಿ ಮೊಸುಲ್ ಮತ್ತು ಆಗ್ನೇಯದಲ್ಲಿ ಅಮರ್ ಪ್ರಾಂತ್ಯಗಳಲ್ಲಿ ವಿದ್ಯುತ್ ಸ್ಥಾವರ ನಿರ್ಮಿಸಲಾಗುವುದು.
ಈ ಕ್ರಮವು (ಇರಾಕ್) ಸರ್ಕಾರವು ವಿದ್ಯುತ್ ಶಕ್ತಿಯ ಉತ್ಪಾದನೆಯಲ್ಲಿ ಪರ್ಯಾಯ, ಸ್ವಚ್ಛ ಮತ್ತು ನವೀಕರಿಸಬಹುದಾದ ಶಕ್ತಿಗಳನ್ನು ಅವಲಂಬಿಸಲು ಮತ್ತು ಇರಾಕ್‌ನ ಶಕ್ತಿಯ ಅಗತ್ಯಗಳನ್ನು ಪೂರೈಸಲು ತೆಗೆದುಕೊಂಡ ಮೊದಲ ಪ್ರಾಯೋಗಿಕ ಹಂತವಾಗಿದೆ ಎಂದು ಇರಾಕ್ ಹೇಳಿದೆ.
ಇದನ್ನೂ ಓದಿ: ನಕಲಿ ದಾಖಲೆ ಸಲ್ಲಿಸಿ 1.18 ಕೋಟಿ ರೂ. ವಂಚಿಸಿದ್ದ ಎಲ್‌ಐಸಿ ಏಜೆಂಟ್ ಬಂಧನ
ಒಪ್ಪಂದವು ಇಂಧನ ಪೂರೈಕೆ ಅಂತರವನ್ನು ತಗ್ಗಿಸಲು ಸಹಾಯ ಮಾಡುತ್ತದೆ ಎಂದು ಇರಾಕ್ ಭಾವಿಸಿದೆ. ದೇಶವು ಸಾಕಷ್ಟು ಇಂಧನ ಸಂಪನ್ಮೂಲಗಳನ್ನು ಹೊಂದಿರುವ ಪ್ರಮುಖ ತೈಲ ಉತ್ಪಾದಕ ರಾಷ್ಟ್ರವಾಗಿದೆ. ಆದರೆ ದೇಶಾದ್ಯಂತ ವಿದ್ಯುತ್ ಅಭಾವ ಎದುರಾಗಿದೆ.