ಮಾಲೆ(ಮಾಲ್ಡೀವ್ಸ್) : ಮಾಲ್ಡೀವ್ಸ್‌ನಿಂದ ಭಾರತೀಯರನ್ನು ವಾಪಸು ಕಳುಹಿಸಲು ಆಪರೇಷನ್ 'ಸಮುದ್ರ ಸೇತು'ಅಡಿ ಮೊದಲ ಹಂತದಲ್ಲಿ ಭಾರತೀಯ ನೌಕಾ ಹಡಗು ಜಲಶ್ವಾ ಗುರುವಾರ ಮಾಲೆ ಬಂದರನ್ನು ಪ್ರವೇಶಿಸಿದೆ ಎಂದು ಮಾಲ್ಡೀವ್ಸ್‌ನ ಭಾರತದ ಹೈಕಮಿಷನ್ ಟ್ವೀಟ್ ಮಾಡಿದೆ.
ಕೊರೊನಾ ವೈರಸ್ ಆತಂಕದ ಹಿನ್ನೆಲೆ ಸಾಗರದಾಚೆಗಿನ ಭಾರತೀಯ ನಾಗರಿಕರನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳುವ ರಾಷ್ಟ್ರೀಯ ಪ್ರಯತ್ನದ ಭಾಗವಾಗಿ ಭಾರತೀಯ ನೌಕಾಪಡೆ ನಿನ್ನೆ ಈ ಕಾರ್ಯಾಚರಣೆ ಪ್ರಾರಂಭಿಸಿದೆ.
ಮೇ 8ರಿಂದ ಮಾಲ್ಡೀವ್ಸ್‌ನಲ್ಲಿ ಸ್ಥಳಾಂತರ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಭಾರತೀಯ ನೌಕಾ ಹಡಗು ಮಾಗರ್‌ನ ಕೂಡ ಸೇವೆಗೆ ಒತ್ತಾಯಿಸಲಾಗಿದೆ. ಮಾಲ್ಡೀವ್ಸ್ ಭಾರತೀಯ ಮಿಷನ್ ಅಡಿಯಲ್ಲಿ ಸ್ಥಳಾಂತರಿಸಬೇಕಾದ ಭಾರತೀಯ ಪ್ರಜೆಗಳ ಪಟ್ಟಿ ಸಿದ್ಧಪಡಿಸುತ್ತಿದೆ. ಆನಂತರ ಅಗತ್ಯ ವೈದ್ಯಕೀಯ ತಪಾಸಣೆಯ ನಂತರ ಪ್ರಯಾಣ ಪ್ರಾರಂಭವಾಗಲಿದೆ.
ಮೊದಲ ಪ್ರವಾಸದಲ್ಲಿ ಒಟ್ಟು 1000 ಜನರನ್ನು ಸ್ಥಳಾಂತರಿಸಲು ಯೋಜಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಇತರ ಮುನ್ನೆಚ್ಚರಿಕಾ ಕ್ರಮಗಳನ್ನು ಗಮನದಲ್ಲಿರಿಸಲಾಗುವುದು. ಸ್ಥಳಾಂತರಿಸಿದ ಸಿಬ್ಬಂದಿಯನ್ನು ಕೊಚ್ಚಿಯಲ್ಲಿ ಇಳಿಸಲಾಗುತ್ತದೆ.