ETV Bharat / international

ನೇಪಾಳ ಪ್ರಧಾನಿ ಒಲಿ ಭೇಟಿ ಮಾಡಿದ ಭಾರತೀಯ ಸೇನಾ ಮುಖ್ಯಸ್ಥ

author img

By

Published : Nov 6, 2020, 5:04 PM IST

ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಲು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ. ಎಂ.ನರವಣೆ ನೇಪಾಳ ಪ್ರಧಾನಿ ಕೆ. ಪಿ. ಶರ್ಮಾ ಒಲಿ ಅವರನ್ನು ಶುಕ್ರವಾರ ಭೇಟಿ ಮಾಡಿದರು. ನರವಣೆ ಅವರು ಮೂರು ದಿನಗಳ ನೇಪಾಳ ಪ್ರವಾಸದಲ್ಲಿದ್ದಾರೆ.

ಭಾರತೀಯ ಸೇನಾ ಮುಖ್ಯಸ್ಥರು
ಭಾರತೀಯ ಸೇನಾ ಮುಖ್ಯಸ್ಥರು

ಕಠ್ಮಂಡು: ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿಯನ್ನು ಭೇಟಿ ಮಾಡಿ, ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಲುವತಾರ್‌ನಲ್ಲಿರುವ ಪಿಎಂ ಅಧಿಕೃತ ನಿವಾಸದಲ್ಲಿ ಈ ಸಭೆ ನಡೆಯಿತು ಎಂದು ನೇಪಾಳ ಸೇನೆಯ ಮೂಲಗಳು ತಿಳಿಸಿವೆ.

ಜನರಲ್​​ ನರವಣೆ ಮೂರು ದಿನಗಳ ನೇಪಾಳ ಪ್ರವಾಸ ಕೈಗೊಂಡಿದ್ದಾರೆ. ಭಾರತ-ನೇಪಾಳ ಬಾಂಧವ್ಯ ಸುಧಾರಣೆ ದೃಷ್ಟಿಯಿಂದ ಇದು ಮಹತ್ವದ್ದೆನಿಸಿದೆ. ಸೈನ್ಯದ ಮುಖ್ಯಸ್ಥರು ಕಠ್ಮಂಡುವಿನ ಹೊರವಲಯದಲ್ಲಿರುವ ಶಿವಪುರಿಯಲ್ಲಿನ ಆರ್ಮಿ ಕಮಾಂಡ್ ಮತ್ತು ಸ್ಟಾಫ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ವಿದ್ಯಾರ್ಥಿಗಳಿಗೆ ಅವರು ತಮ್ಮ ಅನುಭವವನ್ನು ಹಂಚಿಕೊಂಡರು.

ಗುರುವಾರ ರಾಷ್ಟ್ರಪತಿ ಭವನದಲ್ಲಿ ಅಧ್ಯಕ್ಷರಾದ ಬಿದ್ಯದೇವಿ ಭಂಡಾರಿ ಅವರಿಂದ ಸೇನಾ ಗೌರವ ಪದಕವನ್ನು ನರವಣೆ ಸ್ವೀಕರಿಸಿದರು. ಇದು ಎರಡು ಮಿಲಿಟರಿಗಳ ನಡುವಿನ ಸಂಬಂಧವನ್ನು ಬಲವಾಗಿಸುವುದರ ಜೊತೆಗೆ ದಶಕಗಳ ಹಳೆಯ ಸಂಪ್ರದಾಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.