ETV Bharat / international

ಭಾರತ- ಇಂಡೋನೇಷ್ಯಾ ರಕ್ಷಣಾ ಮತ್ತು ಕಡಲ ಸಂಬಂಧ: ಮಲಕ್ಕಾ ಜಲಸಂಧಿಯಲ್ಲಿ ಜಂಟಿ ಗಸ್ತು ಬಗ್ಗೆ ಚರ್ಚೆ - ಮಲಕ್ಕಾ ಜಲಸಂಧಿಯಲ್ಲಿ ಜಂಟಿ ಗಸ್ತು

ರಕ್ಷಣಾ ವಿಷಯದಲ್ಲಿ ಭಾರತ ಮತ್ತು ಇಂಡೋನೇಷ್ಯಾ ನಡುವೆ ಬಹಳಷ್ಟು ಮಾತುಕತೆಗಳು ನಡೆಯುತ್ತಿದ್ದು, ಉಭಯ ದೇಶಗಳು ಬ್ರಹ್ಮೋಸ್ ಮಾರಾಟ ಮತ್ತು ಇಂಡೋನೇಷ್ಯಾದ ಕಡಲ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಭಾರತದ ಪಾತ್ರದ ಬಗ್ಗೆ ಚರ್ಚಿಸುತ್ತಿವೆ.

malacca
malacca
author img

By

Published : Jun 15, 2021, 9:19 PM IST

ನವದೆಹಲಿ: ಭಾರತ ಮತ್ತು ಇಂಡೋನೇಷ್ಯಾ, ಏಷ್ಯಾದ ಎರಡು ಪ್ರಮುಖ ಪ್ರಜಾಪ್ರಭುತ್ವಗಳು. ತಮ್ಮ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸಲು ಪ್ರಯತ್ನಿಸುತ್ತಿವೆ. ಈ ದೇಶಗಳು 2018 ರ ಮೇನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ನಂತರ ರಕ್ಷಣಾ, ಕಡಲ ಮತ್ತು ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸುಧಾರಿಸುವ ಕೆಲಸವನ್ನ ಎರಡೂ ದೇಶಗಳು ಮಾಡುತ್ತಿವೆ.

ಇತ್ತೀಚೆಗೆ, ಇಂಡೋನೇಷ್ಯಾದ ವಿದೇಶಾಂಗ ವ್ಯವಹಾರಗಳ ಉಪ ಮಂತ್ರಿ ಮಹೇಂದ್ರ ಸಿರೆಗರ್ ಅವರೊಂದಿಗೆ ಪ್ರಾದೇಶಿಕ ವಿಷಯಗಳ ಕುರಿತು ಸಹಕಾರ ಕುರಿತು ಭಾರತದ ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ.ಮುರಳೀಧರನ್ ಜೊತೆ ಚರ್ಚಿಸಿದರು. ಜೆಎನ್‌ಯುನ ದಕ್ಷಿಣ ಮತ್ತು ಆಗ್ನೇಯ ಏಷ್ಯನ್ ಅಧ್ಯಯನ ಕೇಂದ್ರದ ಮಾಜಿ ಅಧ್ಯಕ್ಷ ಮತ್ತು ಸೊಸೈಟಿ ಫಾರ್ ಇಂಡಿಯನ್ ಓಷನ್ ಸ್ಟಡೀಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರೊ.ಬಾಲದಾಸ್ ಘೋಶಾಲ್, ರಕ್ಷಣಾ ವಿಷಯದಲ್ಲಿ ಭಾರತ ಮತ್ತು ಇಂಡೋನೇಷ್ಯಾ ನಡುವೆ ಬಹಳಷ್ಟು ಮಾತುಕತೆಗಳು ನಡೆಯುತ್ತಿವೆ. ಉಭಯ ದೇಶಗಳು ಬ್ರಹ್ಮೋಸ್ ಮಾರಾಟ ಮತ್ತು ಇಂಡೋನೇಷ್ಯಾದ ಕಡಲ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಭಾರತದ ಪಾತ್ರದ ಬಗ್ಗೆ ಚರ್ಚಿಸುತ್ತಿವೆ.

ಆಗ್ನೇಯ ಏಷ್ಯಾದ ಪ್ರಮುಖ ರಾಷ್ಟ್ರವಾದ ಇಂಡೋನೇಷ್ಯಾ, ಹಿಂದೂ ಮಹಾಸಾಗರದ ಅಂಡಮಾನ್ ಸಮುದ್ರವನ್ನು ಪೆಸಿಫಿಕ್ ಮಹಾಸಾಗರದ ದಕ್ಷಿಣ ಚೀನಾ ಸಮುದ್ರದೊಂದಿಗೆ ಸಂಪರ್ಕಿಸುವ ಮಲಕ್ಕಾ ಜಲಸಂಧಿಯಲ್ಲಿ ಜಂಟಿ ಗಸ್ತು ತಿರುಗುವ ಸಾಧ್ಯತೆಯ ಬಗ್ಗೆ ಚರ್ಚಿಸುತ್ತಿದೆ. ಇದು ಕಡಲ ಮಾರ್ಗವಾಗಿದ್ದು, ಈ ಮೂಲಕ ಜಾಗತಿಕ ವ್ಯಾಪಾರ ಹೆಚ್ಚಾಗಿದೆ. ಸಬಾಂಗ್ ಮತ್ತು ಆಚೆ ಸೇರಿದಂತೆ ಇಂಡೋನೇಷ್ಯಾ ಬಂದರುಗಳಿಗೆ ಭಾರತಕ್ಕೆ ಹೆಚ್ಚಿನ ಪ್ರವೇಶದ ಬಗ್ಗೆ ಉಭಯ ರಾಷ್ಟ್ರಗಳು ಚರ್ಚಿಸುತ್ತಿವೆ.

ಪ್ರಧಾನಿ ಮೋದಿ ಮತ್ತು ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೋ ಅವರ ಜಂಟಿ ಹೇಳಿಕೆಯು 'ಭಾರತ ಮತ್ತು ಇಂಡೋನೇಷ್ಯಾ ನಡುವಿನ ಇಂಡೋ-ಪೆಸಿಫಿಕ್​​ನಲ್ಲಿ ಕಡಲ ಸಹಕಾರದ ಬಗ್ಗೆ ಹಂಚಿಕೆಯ ದೃಷ್ಟಿ ಅಳವಡಿಸಿಕೊಳ್ಳಲು ಕಾರಣವಾಯಿತು. ಉಭಯ ದೇಶಗಳು ಕಡಲ ಕ್ಷೇತ್ರದಲ್ಲಿ ಸಹಕರಿಸಬಹುದು ಮತ್ತು ಒಂದು ಶಕ್ತಿಯಾಗಿರಬಹುದು ಎಂಬ ನಂಬಿಕೆಯೊಂದಿಗೆ ಸ್ಥಿರತೆ ಕಾಪಾಡಲು ಇಬ್ಬರು ನಾಯಕರು ಸಮಗ್ರವಾಗಿ ತೊಡಗಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.